ಇಕ್ಕಟ್ಟಿಗೆ ಸಿಲುಕಿದರೆ ಕುಮಾರಸ್ವಾಮಿ ……!?
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಮುನ್ನವೆ(ಕುಮಾರಸ್ವಾಮಿ ಮಂಡ್ಯದಲ್ಲಿ ಆಯ್ಕೆಯಾದರೆ ಮಾತ್ರ ಈ ಪ್ರಶ್ನೆ ಪ್ರಸ್ತುತವಷ್ಟೆ) ತೆರವಾಗುವ ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಪಕ್ಷದ ಅಭ್ಯರ್ಥಿ ಯಾರೆಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ಪ್ರಸಕ್ತ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಯಾದ ಮೇಲೆ ಕರ್ನಾಟಕದಲ್ಲಿ ಹೊಸ ರಾಜಕೀಯ ಬೆಳವಣಿಗೆ ಕಾಣುತ್ತಿವೆ . ಇದರ ನಡುವೆ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಪುಟ್ಟರಾಜು ಅಭ್ಯರ್ಥಿ ಮಾಡಲು ತಯಾರಿ ನಡೆದಿದ್ದವು . ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮಾಜಿ ಮುಖ್ಯಮಂತ್ರಿ ಚನ್ನಪಟ್ಟಣ ಶಾಸಕರಾದ ಕುಮಾರಸ್ವಾಮಿ ರವರು ಮೈತ್ರಿ ಅಭ್ಯರ್ಥಿಯಾಗಿ ಅಭ್ಯರ್ಥಿಯಾಗಿ ಘೋಷಣೆಯಾಗಿದೆ . ಇದು ಕುಮಾರಸ್ವಾಮಿ ರವರಿಗೆ ಇಕ್ಕಟ್ಟಿಗೆ ತಂದು ನಿಲ್ಲಿಸಿತು. ಕಾರಣ , ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ .
ಇಲ್ಲಿಂದಲೇ ಇಡೀ ಅಧಿಕೃತವಾಗಿ ರಾಮನಗರ ಜಿಲ್ಲೆಯ ಹಿಡಿತ ಕುಮಾರಸ್ವಾಮಿ ರವರಿಗೆ ತಪ್ಪಲಿದೆ . ನಂತರ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರ ತನ್ನಲ್ಲಿಯೇ ಉಳಿಸಿಕೊಳ್ಳಬೇಕೆಂದರೆ ತನ್ನ ಪಕ್ಷದ ಮುಖಂಡ/ಕಾರ್ಯಕರ್ತನಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯ ಟಿಕೆಟ್ ಕೊಡಬೇಕಾಗುತ್ತದೆ . ಬಹುಶಃ ಇಲ್ಲಿಂದಲೇ ಮೈತ್ರಿ ಸಂಕಷ್ಟ ಶುರುವಾಗುತ್ತದೆ . ಈಗಾಗಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾದ ಡಾ.ಮಂಜುನಾಥ್ ರವರ ಪರವಾಗಿ ಚನ್ನಪಟ್ಟಣ ವಿಧಾನ ಸಭಾ ಪರಾಜಿತ ಅಭ್ಯರ್ಥಿ MLC ಯೋಗೇಶ್ವರ್ ರವರು ಪ್ರಚಾರ ಮಾಡುತ್ತಿದ್ದಾರೆ ಇವರು ಮುಂದೆ ನಡೆಯುವ ಉಪ ಚುನಾವಣೆಯಲ್ಲಿ ಸಹಜವಾಗಿಯೇ ಆಕಾಂಕ್ಷಿಯಾಗುತ್ತಾರೆ . ಆದರೆ ಕುಮಾರಸ್ವಾಮಿ ರವರು ಮೇಲಿನ ಕಾರಣದಿಂದ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ .
ಇದನ್ನು ಮುಂಚಿತವಾಗಿ ಗ್ರಹಿಸಿರುವ ಪರೋಕ್ಷವಾಗಿ ತನ್ನ ಮಗಳು ನಿಶಾ ಯೋಗೇಶ್ವರ್ ರವರನ್ನು ಕಾಂಗ್ರೆಸ್ ಬಾಗಿಲು ತಟ್ಟಿಸಿರುವುವಂತೆ ಕಾಣುತ್ತಿದೆ . ಅಂದರೆ ಮುಂದಿನ ದಿನಗಳಲ್ಲಿ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಮೈತ್ರಿ ಟಿಕೆಟ್ ಬಿಜೆಪಿ ಕೊಡದಿದ್ದಲ್ಲಿ ಕಾಂಗ್ರೆಸ್ ನಿಂದ ತನ್ನ ಮಗಳಿಗೆ ಟಿಕೆಟ್ ಪರೋಕ್ಷವಾಗಿ ಕೊಡಿಸಿ ಬೆಂಬಲಿಸುವುದು ಅಥವಾ ಆನಂತರ ತಾನೇ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ತಾನೇ ಅಭ್ಯರ್ಥಿ ಆಗುವುದು ಎಂಬ ಲೆಕ್ಕಾಚಾರ ಇರುವಂತೆ ಕಾಣುತ್ತಿದೆ . ಈ ಲೆಕ್ಕಾಚಾರಕ್ಕೆ ಕಾಂಗ್ರೆಸ್ ಪಕ್ಷವೂ ಕೂಡಾ ಬೆಂಬಲಿಸುತ್ತದೆ . ಕಾರಣ , 1996 ರಿಂದ ಇಲ್ಲಿಯವರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಿಡಿತ ಸಾಧಿಸಿರುವ ಕುಮಾರಸ್ವಾಮಿ ರವರನ್ನು ರಾಮನಗರ ಜಿಲ್ಲೆಯಿಂದ ಹೊರಗೆ ಹಾಕುವುದಕ್ಕೆ ಕಾಂಗ್ರೆಸ್ ಕಾಯುತ್ತಿದೆ . ಇಂತಹ ಸಂದರ್ಭವನ್ನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಳೆದುಕೊಳ್ಳುವುದಿಲ್ಲ . ಅಂದರೆ , ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆದ್ದರೆ ಇಡೀ ರಾಮನಗರ ಜಿಲ್ಲೆ ಹಿಡಿತ ತೆಗೆದುಕೊಳ್ಳುವುದು ಮತ್ತಷ್ಟು ಕಷ್ಟವಾಗಲಿದೆ . ಇಂತಹ ಸಮಯದಲ್ಲಿ ಕುಮಾರಸ್ವಾಮಿ ರವರು ಯಾವ ನಡೆ ಅನುಸರಿಸುತ್ತಾರೆ ಎಂಬುದು ರಾಜ್ಯ ರಾಜಕಾರಣ ಯಕ್ಷ ಪ್ರಶ್ನೆಯಾಗಿ ಕಾಣುತ್ತಿದೆ .