Wednesday, March 11, 2026
spot_img

ಅಕ್ರಮ ಸಂಬಂದಕ್ಕೆ ಅಡ್ಡಿಯಾಗಿದ್ದ ಅರ್ಚಕನ ಕೊಂದವರು ಅರೆಸ್ಟ್

ಆರ್ಚಕನನ್ನು ಕೊಲೆ ಮಾಡಿದ್ದ ಆರೋಪಿಗಳು ಅರೆಸ್ಟ್

ಅಕ್ರಮ ಸಂಬಂದಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನೊಡಗೂಡಿ ಕೊಂದ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ  ಪೋಲಿಸರು ಯಶಸ್ವಿಯಾಗಿದ್ದಾರೆ

ದಿನಾಂಕ 06-03-2026 ರಂದು ಸಾಯಂಕಾಲ 4-00 ಗಂಟೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಮಾರಳಗಾಲ ಗ್ರಾಮದ ” ಅರ್ಚಕ ಸಿದ್ದಲಿಂಗಪ್ಪನು ಕೆ.ಶೆಟ್ಟಹಳ್ಳಿ ಗಣಪತಿ ದೇವಸ್ಥಾನಕ್ಕೆ ಪೂಜೆಗೆ ಹೋಗಿ ರಾತ್ರಿ ಮನೆಗೆ ಬಾರದೇ ಇದ್ದಾಗ, ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಬಂಧಿಕರು ಹುಡುಕಾಟ ನಡೆಸಿದಾಗ ರಾತ್ರಿ ಸಿಡಿಎಸ್ ಕಾಲುವೆಯ ತೂಬಿನ ಹತ್ತಿರ ರಸ್ತೆಯಲ್ಲಿ ಆರ್ಚಕ ಸಿದ್ದಲಿಂಗಪ್ಪನ ಚಪ್ಪಲಿ ಮತ್ತು ಪಕ್ಕದ ಹುಲ್ಲಿನ ಮೇಲೆ ರಕ್ತ ಚೆಲ್ಲಿದ್ದು, ಅಕ್ಕ ಪಕ್ಕದಲ್ಲಿ ಅರ್ಚಕ ಧರಿಸುತ್ತಿದ್ದ ರುದ್ರಾಕ್ಷಿಮಣಿ ಸ್ಪಟಿಕಮಣಿ ಸರಗಳು ಡಾಲರ್‌ಗಳು ಬಿದ್ದಿದ್ದು, ಅರ್ಚಕನ ಬೈಕ್ ಕಾಲುವೆ ಒಳಗೆ ಬಿದ್ದಿದ್ದು ರಾತ್ರಿ ಹುಡುಕಿದರೂ ಅರ್ಚಕ ಪತ್ತೆಯಾಗಿರುವುದಿಲ್ಲ.

ದಿನಾಂಕ:07/03/2026 ಬೆಳಗ್ಗೆ 06-00 ಗಂಟೆಯಲ್ಲಿ ಹುಡುಕುತ್ತಿದ್ದಾಗ ಅದೇ ಗ್ರಾಮದ ಸಿಡಿಎಸ್ ನಾಲೆಯ ತೂಬಿನಲ್ಲಿ ಸಿದ್ದಲಿಂಗಪ್ಪನ ಶವವು ಸಿಕ್ಕಿಕೊಂಡಿತ್ತು. ಮೈ ಮೇಲೆ ಅಂಡರ್ ವೇರ್ ಮಾತ್ರ ಇದ್ದು, ಮುಖಕ್ಕೆ,ತಲೆಗೆ ಗಾಯಗಳಾಗಿದುದು ಕಂಡು ಬಂದಿದ್ದರಿಂದ, ಯಾರೋ ಅಪರಿಚಿತ ವ್ಯಕ್ತಿಗಳು ಯಾವುದೋ ಉದ್ದೇಶಕ್ಕೆ ಹೊಡೆದು ಕೊಲೆ ಮಾಡಿರುವ ಬಗ್ಗೆ ಮೃತನ ಅಣ್ಣ ಬಾಲಸುಂದರ್ ರವರು ನೀಡಿದ ದೂರಿನ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಕಲಂ: 103(1), 238 ಭಾರತೀಯ ನ್ಯಾಯಾ ಸಂಹಿತೆ-2023 ಬಿ.ಎನ್.ಎಸ್-2023 ರೀತ್ಯ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಮೇಲ್ಕಂಡ ಪ್ರಕರಣಗಳ ಆರೋಪಿಗಳ ಪತ್ತೆ ಬಗ್ಗೆ ಡಾ.ಶೋಭಾರಾಣಿ ವಿಜೆ. ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷರು ಮಂಡ್ಯ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಶ್ರೀ ಸಿ.ಇ.ತಿಮ್ಮಯ್ಯ ಅಪರ ಪೊಲೀಸ್ ವರಿಷ್ಠಾಧಿಕಾರಿರವರು-1, ಶ್ರೀ ಎಸ್.ಇ.ಗಂಗಾಧರಸ್ವಾಮಿ ಅಪರ ಪೊಲೀಸ್ ವರಿಷ್ಠಾಧಿಕಾರಿರವರು-2 ಮಂಡ್ಯ ಜಿಲ್ಲೆ ಹಾಗೂ ಶ್ರೀ ಯು.ಡಿ.ಕೃಷ್ಣಕುಮಾರ್, ಆರಕ್ಷಕ ಉಪಾಧೀಕ್ಷಕರು ಶ್ರೀರಂಗಪಟ್ಟಣ ರವರ ನೇತೃತ್ವದಲ್ಲಿ
ಶ್ರೀ ಆನಂದಕುಮಾರ್ ಹೆಚ್, ಪಿ.ಐ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ. ಶ್ರೀ ವಿವೇಕಾನಂದ, ಸಿಪಿಐ ಕೆ.ಆರ್.ಸಾಗರ ವೃತ್ತ, ಶ್ರೀ ಬಿ.ಜಿ.ಕುಮಾರ್ ಪಿಐ ಶ್ರೀರಂಗಪಟ್ಟಣ ಟೌನ್ ಠಾಣೆ, ಶ್ರೀ ಶರತ್ ಹೆಚ್.ಪಿ, ಪಿ.ಐ ಪಾಂಡವಪುರ ಠಾಣೆ, ರಕ್ಷಿತ ಜಿ.ಎಸ್, ಪಿಎಸ್‌ಐ.ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ, ವಿನೋದ್ ಪಿಎಸ್ಐ, ಅರಕೆರೆ ಠಾಣೆ, ಶ್ರೀ ರಮೇಶ್ ಕರಕಿಕಟ್ಟೆ ಪಿಎಸ್‌ಐ, ಸಿಹೆಚ್ಸಿ ಯವರಾದ ಲೋಕೇಶ್, ಹಫೀಜ್ ಪಾಷ, ಚಂದ್ರಶೇಖರ್, ಶ್ರೀಧರ್, ರವಿಕಿರಣ್ ಹಾಗೂ ಲೋಕೇಶ್, ಸಿಪಿಸಿಯವರಾದ ಶಂಕರ್, ದಿನೇಶ್, ಮಂಜುನಾಥ, ಶರತ್, ಸಂತೋಷ್, ತೌಸಿಫ್ ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.

ತನಿಖೆ ಕಾಲದಲ್ಲಿ ಮೃತ ಅರ್ಚಕ ಸಿದ್ದಲಿಂಗಪ್ಪನು ಸ್ವಂತ ಅಕ್ಕನ ಮಗಳನ್ನೇ ಮದುವೆ ಮಾಡಿಕೊಂಡು ಎರಡು ಮಕ್ಕಳಿದ್ದು, ಅರ್ಚಕನ ಹೆಂಡತಿ ಶಾಲಿನಿ ಅದೇ ಊರಿನ ಟಿಪ್ಪರ್ ಡ್ರೈವರ್ ಹರೀಶ ಎಂ.ಸಿ ಎಂಬ ಅವಿವಾಹಿತನೊಂದಿಗೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದ ಬಗ್ಗೆ ಮಾಹಿತಿ ತಿಳಿದು ಬಂದ ಮೇರೆಗೆ, ಹರೀಶ ಎಂ.ಸಿ ಎಂಬುವವನನ್ನು ದಿನಾಂಕ:09/03/2026 ರಂದು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈತನು ಶಾಲಿನಿ ಜೊತೆಗೆ ಒಂದು ದಿನ ಆರ್ಚಕನ ಮನೆಯಲ್ಲಿ ಇಬ್ಬರೂ ಆಕಸ್ಮಿಕವಾಗಿ ಅರ್ಚಕನ ಕೈಗೆ ಸಿಕ್ಕಿಕೊಂಡಾಗ, ಅಂದಿನಿಂದ ಅರ್ಚಕ ತನ್ನ ಹೆಂಡತಿ ಮತ್ತು ಹರೀಶನಿಗೆ ಹಿಂಸೆ ಕೊಡುತಿದ್ದನೆಂದು, ಏನಾದಾರೂ ಮಾಡಿ ತನ್ನ ಗಂಡ ಆರ್ಚಕನನ್ನು ಮುಗಿಸು ಎಂದು ಪ್ರಿಯಕರ ಶಾಲಿನಿ ಹರೀಶನಿಗೆ ಹೇಳಿದ್ದು, ದಿನಾಂಕ:06/03/2026 ರಂದು ಅರ್ಚಕ ಕೆಲಸಕ್ಕೆ ಹೊರಟ ಬಗ್ಗೆ ಮತ್ತು ವಾಪಸ್ಸು ಹೊರಟ ಸಮಯದ ಬಗ್ಗೆ ಪ್ರಿಯಕರನಿಗೆ ಶಾಲಿನಿ ಮೆಸೇಜ್ ಮಾಡಿದ್ದು, ಹರೀಶನ ಸ್ನೇಹಿತ ಟಿಪ್ಪರ್ ಡ್ರೈವರ್ ಗಣೇಶ ಎಂ.ಆರ್ ನು ಕೊಲೆ ಮಾಡುವ ಸ್ಥಳದಿಂದ ಹಿಂದೆ 1 ಕಿ.ಮೀ ದೂರದಲ್ಲಿ ಅರ್ಚಕ ಊರಿಗೆ ಬೈಕಿನಲ್ಲಿ ಒಬ್ಬನೇ ಬರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಆಗ ಹರೀಶ ಮತ್ತು ಟಿಪ್ಪರ್ ಡ್ರೈವರ್ ಸಂತೋಷ್ ಕುಮಾರ್ ಎಂ.ಆರ್. ಜೊತೆಯಾಗಿ ಊರಿನ ಬಳಿಯ ಕಾಲುವೆ ಏರಿಯ ನಿರ್ಜನ ಸ್ಥಳದಲ್ಲಿ ಅರ್ಚಕ ಸಿದ್ದಲಿಂಗಪ್ಪನನ್ನು ಅಡ್ಡಗಟ್ಟಿ ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಿ ಈ ಕೊಲೆಯನ್ನು ಮುಚ್ಚಿಹಾಕುವ ಉದ್ದೇಶದಿಂದ ಅಪಘಾತವಾಗಿ ಬಿದ್ದಿರಬಹುದೆಂದು ಬಿಂಬಿಸಲು ಹೆಣವನ್ನು ಮತ್ತು ಬೈಕನ್ನು ನಾಲಾ ಏರಿಮೇಲಿನ ರಸ್ತೆಯಿಂದ ನಾಲಾ ನೀರಿಗೆ ತಳ್ಳಿ ಊರಿನಲ್ಲಿ ಅನುಮಾನ ಬರದಂತೆ ಮೃತನ ಶವದ ಧಪನ್ ಕಾಲದಲ್ಲೂ ಇದ್ದರೆಂದು ತನಿಖೆಯಲ್ಲಿ ತಿಳಿದು ಬಂದಿರುತ್ತದೆ. ಆರೋಪಿ 01. ಹರೀಶ ನನ್ನು ಮಾನ್ಯ ಶ್ರೀರಂಗಪಟ್ಟಣ ಎಸಿಜೆ & ಎಎಂಎಪ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ಪೊಲೀಸ್ ವಶಕ್ಕೆ ಪಡೆದಿರುತ್ತದೆ.

ಆರೋಪಿಗಳು:-

1) ಹರೀಶ ಎಂ.ಸಿ.ಬಿನ್ ಚಂದ್ರಶೇಖರ 33 ವರ್ಷ ಟಿಪ್ಪರ್ ಡ್ರೈವರ್ ಮರಳಗಾಲ ಶ್ರೀರಂಗಪಟ್ಟಣ ತಾ
2) ಸಂತೋಷ್ ಕುಮಾರ್ ಎಂ.ಆರ್ ಲೇಟ್ ರಾಮಸಿದ್ದು 29 ವರ್ಷ ಟಿಪ್ಪರ್ ಡ್ರೈವಿಂಗ್ ಮರಳಗಾಲ ಗ್ರಾಮ ಗಣೇಶ ಬಿ.ಆರ್. ಬಿನ್ ಲೇಟ್ ರಾಮಸಿದ್ದು 29 ವರ್ಷ ಟಿಪ್ಪರ್ ಡ್ರೈವಿಂಗ್ ಮರಳಗಾಲ ಗ್ರಾಮ
3) ಗಣೇಶ ಬಿ.ಆರ್. ಬಿನ್ ಲೇಟ್ ರಾಮಸಿದ್ದು 29 ವರ್ಷ ಟಿಪ್ಪರ್ ಡ್ರೈವಿಂಗ್ ಮರಳಗಾಲ ಗ್ರಾಮ
4) ಶಾಲಿನಿ ಕೊಂ ಸಿದ್ದಲಿಂಗಪ್ಪ ನ ಹೆಂಡತಿ 32 ವರ್ಷ ಗೃಹಿಣಿ ಮರಳಗಾಲ ಶ್ರೀರಂಗಪಟ್ಟಣ ತಾ ಆರೋಪಿ 2,3, 4 ರವರನ್ನು ದಿನಾಂಕ:-10-03-2026 ರಂದು ದಸ್ತಗಿರಿ ಮಾಡಲಾಗಿರುತ್ತದೆ.

ಆರೋಪಿಗಳ ಪತ್ತೆ ತಂಡವು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಕೊಲೆ ಮಾಡಿರುವ ಮತ್ತು ಕೊಲೆ ಬಗ್ಗೆ ತನ್ನೊಪ್ಪಿಕೊಂಡಿರುವುದು ಕಂಡು ಬಂದಿದೆ.

ಆರೋಪಿತರುಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್ ಪೋನುಗಳನ್ನು ಅಮಾನತ್ತುಕೊಂಡಿಸಿರುತ್ತದೆ. ತನಿಖೆ ಪ್ರಗತಿಯಲ್ಲಿರುತ್ತದೆ.

ಶ್ರೀರಂಗಪಟ್ಟಣ ಉಪ ವಿಭಾಗದ ಪೊಲೀಸ್ ಠಾಣಾ ಅಧಿಕಾರಿ/ಸಿಬ್ಬಂಧಿಯವರನ್ನು ಡಾ.ಶೋಭಾರಾಣಿ ವಿಜೆ. ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ. ಎಂದು ಮಂಡ್ಯ ಪೊಲೀಸ್ ಅಧಿಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!