Wednesday, September 17, 2025
spot_img

ಕೆಜಿಎಫ್:ಮರಣಿಸಿದ ಪೌರಕಾರ್ಮಿಕನ ಪರಿಹಾರಕ್ಕೆ ಇಬ್ಬರು ಹೆಂಡಿರ ಜಟಾಪಟಿ!

11/09/2025

ಕೆಜಿಎಫ್‌: ಮೃತ ಪೌರಕಾರ್ಮಿಕನ ಕುಟುಂಬಕ್ಕೆ ಸವಲತ್ತು ನೀಡುವ ವಿಚಾರ ಸಂಬಂಧ ಉಂಟಾದ ವಿವಾದವು ಎರಡು ಗುಂಪುಗಳ ನಡುವೆ ಕೈಕೈ ಮಿಲಾಯಿಸುವ ಹಂತ ತಲುಪಿದ ಘಟನೆ ನಗರಸಭೆ ಆಯುಕ್ತರ ಕೊಠಡಿಯಲ್ಲಿ ಬುಧವಾರ ನಡೆದಿದೆ.

ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನಾಗಯ್ಯ ಅವರು ಇತ್ತೀಚೆಗೆ ಮೃತಪಟ್ಟಿದ್ದರು. ಅವರಿಗೆ ಸಲ್ಲಬೇಕಾದ ಸವಲತ್ತುಗಳನ್ನು ಅವರ ಮೊದಲ ಪತ್ನಿ ಪಚ್ಚಾಲ್ಲಮ್ಮ ಅವರಿಗೆ ನೀಡಬೇಕು ಎಂದು ಬಿಜೆಪಿ ಮುಖಂಡ ಗಂಟ್ಲಪ್ಪ ಪಟ್ಟು ಹಿಡಿದರು. ಈ ಪ್ರಕಾರ ಮರಣ ಪತ್ರವನ್ನೂ ಸಲ್ಲಿಸಿದ್ದರು.

‘ನಾಗಯ್ಯ ನನ್ನ ಗಂಡ. ಅವರು ಪಚ್ಚಾಲ್ಲಮ್ಮ ಎಂಬುವರನ್ನು ಮದುವೆಯೇ ಆಗಿರಲಿಲ್ಲ. ಹೀಗಾಗಿ, ಅವರ ಅಧಿಕೃತಿ ಹೆಂಡತಿ ನಾನೊಬ್ಬಳೇ. ಆದ್ದರಿಂದ ಅವರ ಎಲ್ಲ ಸವಲತ್ತು ಗಳನ್ನು ನನಗೇ ನೀಡಬೇಕು’ ಎಂದು ಆಂಧ್ರ ಕಾಲೊನಿಯ ನಾಗಮ್ಮ ಅವರು ನಗರಸಭೆಗೆ ಅರ್ಜಿ ಸಲ್ಲಿಸಿದ್ದರು.

ಹೀಗಾಗಿ, ನಾಗಯ್ಯ ಅವರಿಗೆ ಸೇರಿದ ಸವಲತ್ತುಗಳನ್ನು ಯಾರಿಗೆ ನೀಡಬೇಕು ಎಂದು ನಿರ್ಧರಿಸಲು ಬುಧವಾರ ನಗರಸಭೆ ಆಯುಕ್ತರ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು.

ನಾಗಮ್ಮ ಪರ ವಹಿಸಿದ್ದ ಕಾಂಗ್ರೆಸ್ ಮುಖಂಡ ನಾಗರಾಜ್ ಮಾತನಾಡಿ, ‘ನಾಗಯ್ಯ ಅವರು ಮೃತಪಟ್ಟ ತಕ್ಷಣವೇ ಅವರ ಹೆಂಡತಿ ನಾಗಮ್ಮ ಅವರಿಗೆ ಹಣ ನೀಡಲಾಗಿದೆ. ಮೃತನ ವಂಶವೃಕ್ಷವನ್ನು ನಗರಸಭೆಗೆ ಸಲ್ಲಿಸಲಾಗಿದೆ. ಆದರೆ, ವಾರ್ಡ್ ಸದಸ್ಯೆಯೊಬ್ಬರ ಪತಿ ಗಂಟ್ಲಪ್ಪ ತನ್ನ ಪ್ರಭಾವ ಬಳಸಿ, ತನಗೆ ಬೇಕಾದಂತೆ ನಾಗಯ್ಯ ಅವರ ಮರಣ ಪ್ರಮಾಣ ಪತ್ರ ಬರೆಸಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಈ ವಿಚಾರವಾಗಿ ಸಭೆಯಲ್ಲಿ ಗಂಟ್ಲಪ್ಪ ಮತ್ತು ನಾಗರಾಜ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕುಟುಂಬ ಸದಸ್ಯರ ಮಧ್ಯೆಯೂ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೂ ಮುಟ್ಟಿತ್ತು. ಆಯುಕ್ತ ಆಂಜನೇಯಲು ಮತ್ತು ನಗರಸಭೆ ಸಿಬ್ಬಂದಿ ಎರಡೂ ಗುಂಪಿನವರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು. ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು, ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಹಬದಿಗೆ ತಂದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!