Tuesday, March 17, 2026
spot_img

ಖೇಲೊ ಇಂಡ್ಯಾ ಕ್ರೀಡಾಂಗಣ ಮಂಡ್ಯ ನಗರದಲ್ಲಿ ಸ್ಥಾಪಿಸಲು ಕನ್ನಡಪರ ಸಂಘಟನೆಗಳ ಆಗ್ರಹ

ಖೇಲೊ ಇಂಡ್ಯಾ ಉದ್ದೇಶಿತ ಕ್ರೀಡಾಂಗಣ ಮಂಡ್ಯ ನಗರದಲ್ಲಿ ನಿರ್ಮಿಸಲು ಆಗ್ರಹ

ಕೇಂದ್ರ ಪುರಸ್ಕೃತ ಖೇಲೊ ಇಂಡಿಯಾ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಿಸುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರ ಪ್ರಯತ್ನವನ್ನು ಸ್ವಾಗತಿಸುತ್ತೇವೆ.
ಹೆಚ್ಚು ಕ್ರೀಡಾಪಟುಗಳಿಗೆ ಉಪಯುಕ್ತವಾಗುವ ದೃಷ್ಟಿಯಿಂದ ಈ ಕ್ರೀಡಾಂಗಣವನ್ನು ಮಂಡ್ಯ ನಗರದಲ್ಲಿ ನಿರ್ಮಿಸಲು ಕ್ರಮವಹಿಸುವಂತೆ ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ.ನಾಗಣ್ಣಗೌಡ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಆಗ್ರಹಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಡಿಯನ್ನುದ್ದೇಶಿಸಿ ಮಾತನಾಡಿದ ಅವರು.
14 ಕೋಟಿ ವೆಚ್ಚದ ಕ್ರೀಡಾಂಗಣವನ್ನು ನಗರದಿಂದ ಎಂಟು ಕೀಮಿ ದೂರದ ವಿಸಿ ಫಾರಂನಲ್ಲಿ ನಿರ್ಮಿಸುವುದರಿಂದ ಹೆಚ್ಚಿನ ಜನರ ಬಳಕೆಗೆ ಇದು ಲಭ್ಯವಾಗುವುದಿಲ್ಲ.

ಈ ಹಿಂದಿನ ರಾಜ್ಯ ಸರಕಾರ ಸಹ ನೂರು ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆಯನ್ನು ನಗರದಿಂದ ಹತ್ತು ಕಿಮೀ ದೂರದ ಬಿ ಹೊಸೂರಿನಲ್ಲಿ ನಿರ್ಮಿಸಿ ಅದು ಯಾವುದೆ ಉಪಯೋಗಕ್ಕೆ ಬಾರದೆ ಬಾಗಿಲು ಮುಚ್ಚಿದೆ.ಅಲ್ಲಿನ ಗಾಂಧಿಭವನಕ್ಕು ಇದೆ ದುಸ್ಥಿತಿ ಎದುರಾಗಿದೆ.

ಹೀಗಿರುವಾಗ ಸರಕಾರಿ ಯೋಜನೆಯೊಂದು ಜನರ ಸಂಪೂರ್ಣ ಬಳಕೆಗೆ ದಕ್ಕುವಂತೆ ನಿರ್ಮಾಣವಾಗಬೇಕಿದೆ.ಈ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿ ಮೈಶುಗರ್ ಗೆ ಸೇರಿದ ೩ಎಕರೆಗೂ ಮೀರಿದ ಕ್ರೀಡಾಂಗಣ ಮೈದಾನವಿದೆ.ಜತೆಗೆ ಈಗಾಗಲೇ ಬಳಸದ ಈಜುಕೊಳ ಸೇರಿ ಇಲ್ಲಿ ಏಳೆಂಟು ಎಕರೆ ಭೂಮಿ ಲಭ್ಯವಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ವಿಸಿಫಾರಂನ ಒಂದು ಎಕರೆ ಕಬ್ಬಿನ ಗದ್ದೆಯಲ್ಲಿ ಕಿಷ್ಕಿಂಧವಾಗಿ ಕ್ರೀಡಾಂಗಣ ನಿರ್ಮಿಸುವ ಬದಲು ಭವಿಷ್ಯದ ದೃಷ್ಟಿಯಿಂದ ಮೈಶುಗರ್ ಗೆ ಸೇರಿದ ಸದರಿ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸುವುದು ಸಾವಿರಾರು ಕ್ರೀಡಾರ್ಥಿಗಳಿಗೆ ಹಾಗೂ ಗ್ರಾಮೀಣಾ ಭಾಗದ ಜನತೆಗೂ ಇದರ ಸದುಪಯೋಗವಾಗಲಿದೆ.

ರಾಜ್ಯ ಸರಕಾರ ಸಹ ಈ ವಿಷಯದಲ್ಲಿ ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಸದರಿ ಸ್ಥಳವನ್ನು ಕ್ರೀಡಾ ಯೋಜನೆಗೆ ಬಿಟ್ಟುಕೊಡಬೇಕು.ಇದಕ್ಕೆ ಜಿಲ್ಲಾಡಳಿತ ಅಗತ್ಯ ಸಮನ್ವಯತೆ ಎರ್ಪಡಿಸಬೇಕು.

ಇದಲ್ಲದೆ ಮಂಡ್ಯ ನಗರಸಭೆಗೆ ಸೇರಿದ ಗಾಂಧಿನಗರದ ನೀರು ಶುದ್ದೀಕರಣ ಘಟಕದ ಏಳೆಂಟು ಎಕರೆ ಭೂಮಿ ಸಹ ಲಭ್ಯವಿದ್ದು‌.ಸದರಿ ಸ್ಥಳವನ್ನು ಸಹ ಕ್ರೀಡಾ ಸಮುಚ್ಚಯ ನಿರ್ಮಾಣಕ್ಕೆ ಪರಿಗಣಿಸಬಹುದಾಗಿದೆ ಎಂದು ಪರ್ಯಾಯ ಮಾರ್ಗ ಸೂಚಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಚ್ ಡಿ ಜಯರಾಂ ಮಾತನಾಡಿ.
ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡು ೮೭ ವರ್ಷಗಳಾದರೂ ಮಂಡ್ಯ ನಗರ ಪೂರ್ಣ ಪ್ರಮಾಣದ ಜಿಲ್ಲಾ ಕೇಂದ್ರವಾಗಿ ಮಂಡ್ಯ ನಗರ ಅಭಿವೃದ್ದಿಯಾಗದೆ ದೊಡ್ಡ ಹಳ್ಳಿಯಾಗೆ ಉಳಿದಿದೆ.ಅಗತ್ಯ ಮೂಲಸೌಕರ್ಯಗಳು ಮುಂಗಾಣ್ಕೆಯ ಯೋಜನೆಗಳ ಕೊರತೆಯೆ ಇದಕ್ಕೆ ಕಾರಣವಾಗಿದೆ.

ಜಿಲ್ಲಾ ಕೇಂದ್ರದಲ್ಲಿ ಸರಕಾರಿ ಕಾನೂನು ಕಾಲೇಜು.ಇಂಜಿನಿಯರಿಂಗ್ ಕಾಲೇಜು.ಡಿಪ್ಲೋಮಾ. ಪಾಲಿಟೆಕ್ನಿಕ್.ಹೃದ್ರೋಗ ಸೇರಿದಂತೆ ಮಲ್ಡೀ ಸ್ಪೆಶಾಲಿಟಿ ಆಸ್ಪತ್ರೆ ಸೇರಿದಂತೆ ಹಲವು ಕೊರತೆಗಳಿವೆ.ಇವೆಲ್ಲವನ್ನು ನೀಗಿಸುವ ಮೊದಲ ಹೆಜ್ಜೆಯಾಗಿ ಖೇಲೊ ಇಂಡಿಯಾದ ಕ್ರೀಡಾಂಗಣ ಮಂಡ್ಯ ನಗರದಲ್ಲಿ ನಿರ್ಮಿಸುವುದು ಅತ್ಯಂತ ಹೆಚ್ಚು ಅಗತ್ಯ ಎಂದು ಭಾವಿಸುತ್ತೇವೆ.
ಗೋಷ್ಠಿಯಲ್ಲಿ ಕನ್ನಡ ಮನಸುಗಳು ಸಂಘಟನೆಯ ಸಂಜು ಆಲಕೆರೆ.ರಾಜೇಂದ್ರ ಸಿಂಗ್ ಬಾಬು .ಸೋಮಶೇಖರ್ ಇದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!