ಕೆ.ಆರ್.ಪೇಟೆ,ಅ.15: *ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಅಲಂಬಾಡಿಕಾವಲು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ಅವಿರೋಧವಾಗಿ
ಪಂಚಾಯಿತಿಯ ಈ ಹಿಂದಿನ ಅಧ್ಯಕ್ಷರಾಗಿದ್ದ ಎ.ಟಿ.ಕರಿಶೆಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು.
ಅಧ್ಯಕ್ಷ ಸ್ಥಾನ ಅಕಾಂಕ್ಷಿಯಾಗಿ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ಹಾಗೂ ರವಿ ಎ.ಎನ್ ನಾಮಪತ್ರ ಸಲ್ಲಿಸಿದರು. ಕೊನೆ ಕ್ಷಣದಲ್ಲಿ ರವಿ ನಾಮಪತ್ರ ವಾಪಸ್ ಪಡೆದ ಕಾರಣ ಕಣದಲ್ಲಿದ್ದ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎ.ಎಸ್.ದೇವರಾಜು ಘೋಷಿಸಿದರು. ಸಹ ಚುನಾವಣಾಧಿಕಾರಿಗಳಾಗಿ ತಾ.ಪಂ. ವ್ಯವಸ್ಥಾಪಕ ಅನಿಲ್‌ಬಾಬು, ಪಿಡಿಓ ಎಂ.ಶಿವಕುಮಾರ್, ಕಾರ್ಯದರ್ಶಿ ಇಮ್ರಾನ್ ಷರೀಫ್ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ತಾಲ್ಲೂಕು ದಸರಖಾಸ್ತು ಕಮಿಟಿ ಸದಸ್ಯ ಜಿ.ಎ.ರಾಯಪ್ಪ ಮಾತನಾಡಿ, ಅಧಿಕಾರ ಯಾರಿಗೂ ಅಧಿಕಾರ ಶಾಶ್ವತವಲ್ಲ. ನಮಗೆ ಸಿಕ್ಕಿದ ಅಧಿಕಾರ ಅವಧಿಯಲ್ಲಿ ನಾವು ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ ಗ್ರಾಮ ಪಂಚಾಯಿತಿಗೆ ಇಂದು ನೇರವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟಿ ಕೋಟಿ ಅನುಧಾನ ಬರುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ತಮ್ಮ ಗ್ರಾಮಗಳಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಜಾನುವಾರು ಕೊಟ್ಟಿಗೆ ನಿರ್ಮಾಣ, ಬಾಕ್ಸ್ ಚರಂಡಿ, ಸಿ.ಸಿ ರಸ್ತೆ, ಕುರಿ-ಮೇಕೆ ಶೆಡ್, ಶೌಚಾಲಯ ನಿರ್ಮಾಣ, ರೈತರ ಜಮೀನಿಗೆ ಹೋಗಲು ಬಂಡಿ ರಸ್ತೆ ನಿರ್ಮಾಣ, ಕೆರೆ-ಕಟ್ಟೆ ಅಭಿವೃದ್ಧಿ, ಬಚ್ಚಲು ನೀರು ಇಂಗು ಗುಂಡಿ, ಚೆಕ್ ಡ್ಯಾಂ ನಿರ್ಮಾಣ, ಜಾನುವಾರು ತೊಟ್ಟಿ, ಸಾಮಾಜಿಕ ಅರಣ್ಯ ಯೋಜನೆ, ರೈತರ ಬದು ನಿರ್ಮಾಣ, ತೆಂಗು, ಬಾಳೆ, ಅಡಕೆ ನಾಟಿ ಜಮೀನು ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಗ್ರಾಮಗಳ ಸಮಗ್ರ ಅಭಿವೃದ್ದಿ ಕೈಗೊಳ್ಳಬಹುದು. ಇದನ್ನು ಅರಿತು ಕೆಲಸ ಮಾಡಿ ಗ್ರಾಮಾಭಿವೃದ್ಧಿ ಸಾಧಿಸಬೇಕು. ಗ್ರಾಮ ಪಂಚಾಯಿತಿಗೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ನೀಡಿದರು.
*ನೂತನ ಅಧ್ಯಕ್ಷ ಗುಡುಗಹಳ್ಳಿ ಜಿ.ಜೆ.ವೆಂಕಟೇಶ್ ನನ್ನ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯುವ ನೀರು, ಸೇರಿದಂತೆ ಸರ್ಕಾರದ ವಿವಿಧ ಇಲಾಖೆಯಿಂದ ಬರುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಿ,ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತ ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬಾರದಂತೆ ನೋಡಿಕೊಂಡು ಗ್ರಾಮ ಪಂಚಾಯಿತಿಗೆ ಒಳ್ಳೆಯ ಹೆಸರು ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.*
ಈ ಸಂದರ್ಭದಲ್ಲಿ *ಮುಖಂಡರಾದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎ.ಎಂ.ಸಂಜೀವಪ್ಪ, ತಾಲ್ಲೂಕು ದರಖಾಸ್ತು ಕಮಿಟಿ ಸದಸ್ಯ ಗುಡುಗನಹಳ್ಳಿ ಜಿ.ಎ.ರಾಯಪ್ಪ, ಗ್ರಾ.ಪಂ.ಸದಸ್ಯರಾದ ವೇದಾಂಬಬೋರಲಿಂಗೇಗೌಡ,ಚಂದ್ರಕಲಾಬಸವರಾಜು, ಎ.ರಾಜು, ಗುಡುಗನಹಳ್ಳಿ ಶ್ರೀನಿವಾಸ್, ಆಲಂಬಾಡಿ ನಾಗೇಶ್, ಎ.ಟಿ.ಕರಿಶೆಟ್ಟಿ, ಅತೀಕ್ ಅಹಮದ್, ಮುಜಾಹಿತ್‌ಖಾನ್, ರೂಪಯೋಗಾನಂದ್(ಕುಮಾರ್), ಭಾಗ್ಯಮ್ಮಸ್ವಾಮೀಗೌಡ, ಸಾಕಮ್ಮಬಸವೇಗೌಡ, ಸುಮಾಪ್ರಶಾಂತ್, ಹಿರಿಯ ಮುಖಂಡರಾದ ಚನ್ನಪ್ಪ, ಮೋಹನ್, ಬಸವರಾಜು, ಗುಡುಗನಹಳ್ಳಿ ಯಜಮಾನ್ ಬೋರಲಿಂಗೇಗೌಡ(ಪಾಪಣ್ಣ), ಸ್ವಾಮಿಗೌಡ, ಶಿವೇಗೌಡ, ಮಹಾದೇವ, ಚಂದ್ರು* ಸೇರಿದಂತೆ ಉಪಸ್ಥಿತರಿದ್ದರು.