*ಕಳ್ಳರ ಕೈಚಳಕಕ್ಕೆ ಕಂಗಾಲಾದ ರೈತ*
ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿಯ ಹಳೆ ಮಾವಿನಕೆರೆ ಗ್ರಾಮದ ರೈತ ಚಂದ್ರೆಗೌಡ ಅವರಿಗೆ ಸೇರಿದ ಒಂದುವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಏಳು ಕುರಿಗಳನ್ನು ಗುರುವಾರ ತಡರಾತ್ರಿ ಕಳ್ಳತನ ಮಾಡಿರುವ ಘಟನೆ ಜರುಗಿದೆ.
ರೈತ ಚಂದ್ರೇಗೌಡ ಮಾತನಾಡಿ ಹಲವು ವರ್ಷಗಳಿಂದ ಸಾಲ ಮಾಡಿ ಕುರಿ ಸಾಗಾಣಿಕೆಯಲ್ಲೆ ಜೀವನ ಸಾಗಿಸುತ್ತಿದೆವು ಆದರೆ ಗುರುವಾರ ತಡರಾತ್ರಿ ಕೊಟ್ಟಿಗೆಯಲ್ಲಿದ್ದ 47 ಕುರಿಗಳಲ್ಲಿ ಒಂದುವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಏಳು ಕುರಿಗಳನ್ನ ಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ.ಈ ಕಾಯಕವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ನಮ್ಮ ಕುಟುಂಬ ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಹಾಗಾಗಿ ನಮ್ಮ ಜೀವನದ ಆಧಾರಗಳಾದ ರಾಸುಗಳನ್ನ ಪತ್ತೆ ಹಚ್ಚುವ ಮೂಲಕ ಕಾರಣಕರ್ತರಾದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಂಡು ನಮಗೆ ಸೂಕ್ತ ನ್ಯಾಯ ಒದಗಿಸಿ ಕೊಡಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಗ್ರಾ.ಪಂ ಮಾಜಿ ಸದಸ್ಯ ಗಂಗಾಧರ್ ಗ್ರಾಮೀಣ ಪ್ರದೇಶದ ರೈತರ ಆದಾಯ ಮೂಲವೇ ಧನ,ಎಮ್ಮೆ,ಕುರಿ, ಕೋಳಿ ಸಾಕಾಣಿಕೆ ಆದರೆ.ನಮ್ಮ ಗ್ರಾಮದ ರೈತ ಚಂದ್ರೇಗೌಡರಿಗೆ ಸೇರಿದ 7 ಕುರಿಗಳನ್ನು ಕಳ್ಳತನ ಮಾಡಿದ್ದಾರೆ ಇದರಿಂದ ಈ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.ಘಟನೆಯಿಂದ ನಮ್ಮ ಭಾಗದ ರೈತರು ಆಘಾತಕ್ಕೆ ಸಿಲುಕಿದ್ದಾರೆ, ಪೊಲೀಸ್ ಅಧಿಕಾರಿಗಳು ಶೀಘ್ರವೇ ಕಳ್ಳರನ್ನು ಬಂಧಿಸಬೇಕು ಹಾಗೂ ರಾತ್ರಿ ಸಮಯದಲ್ಲಿ ನಮ್ಮ ಗ್ರಾಮದಲ್ಲಿ ಗಸ್ತು ಸಂಚಾರ ಮಾಡಿದರೆ ಮಾತ್ರ ಕಳ್ಳರ ಕೈಚಳಕ ದಿಂದ ರೈತರು ಪಾರಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡ ಚಂದ್ರೆಗೌಡ, ಯುವ ಮುಖಂಡ ಚೇತನ, ಬಾಲರಾಜ್,ಧರ್ಮರಾಜ್, ನಂದೀಶ್, ಶಾಂತ ಎಂ.ಹೆಚ್,ಪಂಕಜ ಸೇರಿದಂತೆ ಗ್ರಾಮಸ್ಥರು ಇದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*