*ಕೆ.ಆರ್.ಪೇಟೆ: ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮಕ್ಕೆ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ, ಕೇರಳದ ವಯನಾಡು ಭೀಕರ ದುರಂತದಲ್ಲಿ ಮೃತರಾದ ಲೀಲಾವತಿ ಹಾಗೂ ನಿಹಾಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು*
ಈ ವೇಳೆ ಕುಟುಂಬದೊಂದಿಗೆ ಮಾತನಾಡಿದರು,ದುರಂತ ಈಗಾಗಲೇ ನಡೆದು ಹೋಗಿದೆ, ಧೈರ್ಯವಾಗಿರಿ ನಿಮ್ಮೊಂದಿಗೆ ನಾವು ಇದ್ದೇವೆ ಎಂದು ಮೃತ ಕುಟುಂಬಸ್ಥರನ್ನು ಸಮಾಧಾನ ಪಡಿಸಿದರು.ನಮ್ಮವರ ಮೃತ ದೇಹವನ್ನಾದರು ಕೊಡಸಿ, ಅವರ ಮುಖವನ್ನಾದರು ನಾವು ನೋಡುತ್ತೇವೆ. ಅಂತ್ಯಕ್ರಿಯೆ ಮಾಡುವ ಅವಕಾಶ ಕಲ್ಪಿಸಿ ಕೊಡಿ ಎಂದು ನಿಖಿಲ್ ಮುಂದೆ ಕುಟುಂಬಸ್ಥರ ಕಣ್ಣೀರಿಟ್ಟಿದ್ದು, ಮೃತರ ದೇಹವನ್ನು ಹುಡುಕಾಟ ನಡೆಯುತ್ತಿದೆ. ನಾವು ಸಹ ಈ ಬಗ್ಗೆ ಮುತುವರ್ಜಿ ವಹಿಸುತ್ತೇವೆ ಎಂದು ನಿಖಿಲ್ ಭರವಸೆಯ ನುಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ವಯನಾಡಿನಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತವಾಗಿದೆ. 2 ದಿನದಿಂದ ಕಾರ್ಯಾಚರಣೆ ನಡೆಯುತ್ತಲಿದ್ದು, 221 ಮಂದಿಗೂ ಹೆಚ್ಚು ಜನರು ಮೃತಪಟ್ಟಿರುವ ಮಾಹಿತಿ ಇದೆ.ದುರಂತದಲ್ಲಿ ಕೆ.ಆರ್.ಪೇಟೆ ಕತ್ತರಘಟ್ಟದ ಲೀಲಾವತಿ ಹಾಗೂ ನಿಹಾಲ್ ಮೃತಪಟ್ಟಿದ್ದಾರೆ. ಇವರನ್ನು ಕಳೆದುಕೊಂಡು ಲೀಲಾವತಿ ಕುಟುಂಬಸ್ಥರು ನೋವಿನಲ್ಲಿದ್ದಾರೆ ಅವರಿಗೆ ನೋವು ಭರಿಸುವ ಶಕ್ತಿಯನ್ನ ಭಗವಂತ ನೀಡಲಿ ಎಂದರು ಇದೇ ಕುಟುಂಬದ ಇನ್ನೂ ಮೂವರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 40 ವರ್ಷದಿಂದ ಕೇರಳದಲ್ಲಿ ಈ ಕುಟುಂಬ ನೆಲೆಸಿತ್ತು. ಅವರ ಹೊಸಮನೆಯ ಗೃಹಪ್ರವೇಶ ಇದೇ ತಿಂಗಳ 6 ನೇ ತಾರೀಖು ಆಗಬೇಕಿತ್ತೆಂದು ತಿಳಿದು ಬಂದಿದೆ.ವಯನಾಡು ದುರಂತದಲ್ಲಿನ ಭಗವಂತನ ಆಟಕ್ಕೆ ಇಂದು ಬಹಳಷ್ಟು ಜನ ಸಾವನಪ್ಪಿದ್ದಾರೆ. ಬಹಳಷ್ಟು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರಂತದ ಬಗ್ಗೆ ಕೇಂದ್ರ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ರವರು ನಿರಂತರ ಮಾಹಿತಿ ಪಡೆದುಕೊಂಡು ಗಾಯಾಳುಗಳ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ ಎಂದು ಹೇಳಿದರು.
*ರಾಜ್ಯದಲ್ಲೂ ಪ್ರವಾಹದ ಮುನ್ಸೂಚನೆ?* ರಾಜ್ಯದಲ್ಲಿಯೂ ಒಂದು ವಾರಗಳ ಕಾಲ ರೆಡ್ ಅಲರ್ಟ್ ಅನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ 10-12 ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದು, ಕೇರಳದಂತೆ ಆಗಬಹುದು ಎಂದು ತಜ್ಞರು ಮುನ್ನಚ್ಚರಿಕೆ ನೀಡಿದ್ದು, ಪ್ರಾಣಹಾನಿ, ಜಾನುವಾರು ಹಾನಿಯಾಗದಂತೆ ಸರ್ಕಾರ ಎಚ್ಚರವಹಿಸಲಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ.
*ಪಾದಯಾತ್ರೆ ಬಗ್ಗೆ ಮತ್ತೊಮ್ಮೆ ವರಿಷ್ಠರಿಂದ ಚರ್ಚೆ:* ಸಿಎಂ ಸಿದ್ದರಾಮಯ್ಯ ರವರ ಮೇಲೆ ಮೂಢ ಹಗರಣ ಎಂದು ಆರೋಪಿಸಿ ಬಿಜೆಪಿ ಪಾದಯಾತ್ರೆಗೆ ಜೆಡಿಎಸ್ ಸಪೋರ್ಟ್ ನೀಡದ ವಿಚಾರ ಪ್ರತಿಕ್ರಿಯೆ ನೀಡಿದ ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ಕುಮಾರಸ್ವಾಮಿ ಕೋರ್ ಕಮಿಟಿ ಸಭೆಯಲ್ಲಿ ಪಾದಯಾತ್ರೆ ಸಂಬಂಧ ಚರ್ಚೆಯಾಗಿದೆ. ಹವಾಮಾನ ಇಲಾಖೆ ಭಾರೀ ಮಳೆಯಾಗುವ ಬಗ್ಗೆ ಮುನ್ನಚ್ಚರಿಕೆ ನೀಡಿದ್ದು ಸಭೆಯಲ್ಲಿ ಭಾಗವಹಿಸಿದ್ದವರು ನೆರೆರಾಜ್ಯ ಸಿಲುಕಿರುವ ಸಂಕಷ್ಟ ಮತ್ತು ಅನಾಹುತಗಳ ನಡುವೆ ಪಾದಯಾತ್ರೆ ಬೇಡ ಎಂದು ಅಭಿಪ್ರಾಯ ವ್ಯಕ್ತವಾಗಿದೆ ಎಂದು ಪ್ರತಿಕ್ರಿಯಿಸಿದರು. ನಮ್ಮ ಪಕ್ಷದ ವರಿಷ್ಠರಾದ ದೇವೇಗೌಡ್ರು, ಕುಮಾರಣ್ಣ ದೆಹಲಿಯಲ್ಲಿದ್ದಾರೆ. ಪಾದಯಾತ್ರೆ ಬಗ್ಗೆ ಎಲ್ಲರೂ ಕೂತು ಮತ್ತೊಮ್ಮೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
ಮೃತ ಕುಟುಂಬಸ್ಥರೊಂದಿಗೆ ಮಾತನಾಡಿದ ಶಾಸಕ ಹೆಚ್.ಟಿ ಮಂಜು ಇಂತಹ ಘಟನೆ ಕೇಳಲು ಮನಸ್ಸಿಗೆ ಬಹಳ ನೋವಾಗುತ್ತಿದೆ .ಮರಣ ಹೊಂದಿದ ಮೃತ ದೇಹಗಳನ್ನು ಕತ್ತರಘಟ್ಟ ಗ್ರಾಮಕ್ಕೆ ತರಲು ವ್ಯವಸ್ಥೆ ಮಾಡಲು ಕೇಂದ್ರ ಮಂತ್ರಿಗಳಾದ ಕುಮಾರಣ್ಣ ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಪ್ರಕೃತಿಯ ವಿಕೋಪದ ಅನಾಹುತದಿಂದ ದುರಂತ ಸಂಭವಿಸಿದೆ.ಶಾಸಕನಾಗಿ ನಿಮ್ಮ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ.ಧೈರ್ಯವಾಗಿರಿ ನಿಮ್ಮ ಜೊತೆಗೆ ಶಕ್ತಿಯಾಗಿ ಮುಂದಿನ ದಿನಗಳಲ್ಲೂ ನಿಲ್ಲುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ,ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಮ್ ಉಪಸ್ಥಿತರಿದ್ದರು
*ವರದಿ ಮನು ಮಾಕವಳ್ಳಿ ಕೆ ಆರ್ ಪೇಟೆ*