*ಆಸ್ಪತ್ರೆ ಹಗರಣ ತನಿಖೆಗೆ ಬಂದ ತಂಡಕ್ಕೆ ಆರೋಪಿತರಿಂದ ಭರ್ಜರಿ ಬಾಡೂಟ:ಹಳ್ಳ ಹಿಡಿಯಿತೆ ತನಿಖೆ!
ನಾಗಮಂಗಲ: ನಾಗಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ 83 ಲಕ್ಷ ನಕಲಿ ಬಿಲ್ ಹಗರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆಯಂತೆ ತನಿಖೆಗೆ ಬಂದ ಅಧಿಕಾರಿಗಳಿಗೆ ಹಗರಣದಲ್ಲಿ ಭಾಗೀಯಾಗಿದ್ದರೆನ್ನಲಾದ ಆರೋಪಿತ ಅಧಿಕಾರಿಗಳಿಂದ ಭರ್ಜರಿ ಬಾಡೂಟ ಮದ್ಯದ ಅತಿಥ್ಯ ದೊರಕಿದೆ.
ನಾಗಮಂಗಲ ತಾಲೋಕು ಆಸ್ಪತ್ರೆಯಲ್ಲಿ ಎಬಿ ಆರ್ ಕೆ ಹಾಗೂ ಆರೋಗ್ಯ ರಕ್ಷಾ ನಿಧಿ ದುರ್ಬಳಕೆ ಮಾಡಿಕೊಂಡು ೮೩ ಲಕ್ಷ ಮೌಲ್ಯದ ಖರೀದಿ ಹಗರಣ ನಡೆದಿರುವ ಕುರಿತು ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ದಾಖಲೆಗಳ ಸಮೇತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರು ನೀಡಿದ್ದರು.
ದೂರಿನನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೋಹನ್ ದೂರಿನ ಸಂಬಂದ ತನಿಖೆ ನಡೆಸಲು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳ ಆರು ಜನರ ತಂಡ ಇಂದಿನಿಂದ ಮೂರು ದಿನಗಳ ಕಾಲ ಸಮಗ್ರ ತನಿಖೆ ನಡೆಸಬೇಕಿತ್ತು.
ತನಿಖೆಗೆ ಬಂದ ತಂಡ ತನಿಖೆಯ ಬದಲು ಪಟ್ಟಣದ ಡಾಬಾವೊಂದರಲ್ಲಿ ಮದ್ದು ಗುಂಡುಗಳ ಸೇವನೆಗೆ ತೊಡಗಿದೆ.ಮದ್ದುಗುಂಡು ಅತಿಥ್ಯವನ್ನು ಹಗರಣದ ಆರೋಪಿತ ಅಧಿಕಾರಿಗಳೇ ವಹಿಸಿರುವುದು ತನಿಖೆ ಹಳ್ಳ ಹಿಡಿಯುವ ಎಲ್ಲ ಸಾಧ್ಯತೆಗಳನ್ನು ತೋರಿಸಿದೆ.
ಅಕ್ರಮ ಪ್ರಕರಣದ ಪ್ರಮುಖ ರೂವಾರಿ ನಿವೃತ್ತ ನೌಕರ ಪ್ರಥಮ ದರ್ಜೆ ಸಹಾಯಕ ಮೋಹನ್ ಮತ್ತೊಬ್ಬ ಆರೋಪಿತ ವೈದ್ಯ ಡಾ.ವೆಂಕಟೇಶ್ ಸೂಚನೆ ಮೇರೆಗೆ ತನಿಖೆಗೆ ಬಂದ ತಂಡದ ಜತೆಗೆ ಪಟ್ಟಣದ ಮೈಸೂರು ರಸ್ತೆಯ ಭುವನೇಶ್ವರಿ ಡಾಬದಲ್ಲಿ ಬಾಡೂಟ.ಮದ್ಯ ಸೇವನೆಯಲ್ಲಿ ನಿರತರಾಗಿರುವುದು ತನಿಖೆಯ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿದೆ. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ
ವೈದ್ಯ ಡಾ. ವೆಂಕಟೇಶ್. ಹಾಗೂ ಕಚೇರಿ ಅಧೀಕ್ಷಕರಾಗಿದ್ದ ನಿವೃತ್ತ ನೌಕರ ಮೋಹನ್ ಅವಧಿಯಲ್ಲಿ ನಡೆದಂತಹ 83 ಲಕ್ಷ ಅಕ್ರಮ ಬಿಲ್ ಹಗರಣ ನಡೆದಿದ್ದು. ಈ ಸಮಯದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ರವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಭ್ರಷ್ಟಾಚಾರ ಆರೋಪ ಹೊತ್ತಿರುವ ವ್ಯಕ್ತಿಯ ಜೊತೆ ಕುಳಿತು ಜಿಲ್ಲಾ ಸರ್ವೇಕ್ಷಣ ಇಲಾಖೆಯ ಆರು ಜನ ತನಿಖಾ ತಂಡ ಅಕ್ರಮ ಮಾಡಿರುವ ಆರೋಪಿತರ ಜೊತೆ ಕುಳಿತು ಬಾಡೂಟ ಸವಿಯುತ್ತಿರುವುದು ನ್ಯಾಯ ಸಮ್ಮತ ತನಿಖೆ ನಡೆಯುವುದೇ ಎಂಬ ಅನುಮಾನ ವ್ಯಕ್ತವಾಗಿದೆ
ಭ್ರಷ್ಟಾಚಾರ ಆರೋಪವಿರುವ ಮೋಹನ್ ರವರ ಜೊತೆ ಡಾಬಾದಲ್ಲಿ ಕುಳಿತು ವಿವಿಧ ಬಗೆಯ ಮಾಂಸಾಹಾರಿ ಬೋಜನ ಸವಿಯುತ್ತಿರುವ ತನಿಖಾ ತಂಡ ಅಧಿಕಾರಿಗಳ ಮೇಲೆ ಉತ್ತಮ ತನಿಖೆ ನಿರೀಕ್ಷೆ ಊಹಿಸಲು ಸಾಧ್ಯವಿಲ್ಲವೆಂದು ಸಾರ್ವಜನಿಕರ ಆರೋಪ ಈ ಸಂಬಂಧ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಯಾವ ಕ್ರಮವಹಿಸುತ್ತಾರೆ ಕಾದು ನೋಡಬೇಕು