Thursday, December 5, 2024
spot_img

ನಾಗಮಂಗಲ: ತಾಲೋಕು ಆಸ್ಪತ್ರೆ ಖರೀದಿ ಹಗರಣ.ವೈದ್ಯಾಧಿಕಾರಿ ಅಮಾನತ್ತಿಗೆ ಆಗ್ರಹ

ನಾಗಮಂಗಲ ತಾಲೋಕು ಆಸ್ಪತ್ರೆಯ ಈ ಹಿಂದಿನ ಆಡಳಿತ ವೈದ್ಯಾಧಿಕಾರಿ ಹಾಲಿ ಕೀಲು ಮೂಳೆ ತಜ್ನರಾಗಿರುವ ಡಾ ವೆಂಕಟೇಶ್ ಆರೋಗ್ಯ ರಕ್ಷಾ ಸಮಿತಿ ಹಾಗೂ ಆಯುಷ್ಮಾನ್ ಯೋಜನೆಗಳ ಹಣ ದುರುಪಯೋಗಪಡಿಸಿಕೊಂಡಿದ್ದು ಅವರನ್ನು ಅಮಾನತ್ತುಗೊಳಿಸಿ ಅಗತ್ಯ ತನಿಖೆ ನಡೆಸುವಂತೆ ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು.

ನಾಗಮಂಗಲ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು
ಕಳೆದ ಎರಡು ವರ್ಷಗಳಿಂದ ನಾಗಮಂಗಲ ತಾಲೋಕು ಆಸ್ಪತ್ರೆಯ ವೈದ್ಯಾಧಿಕಾರಿಗಳಾಗಿದ್ದ ವೆಂಕಟೇಶ್ ವ್ಯಾಪಕ ಭ್ರಷ್ಟಚಾರ ನಡೆಸಿ ೮೩ ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಎಸಗಿದ್ದಾರೆ.

ತಾಲೋಕು ವೈದ್ಯಾಧಿಕಾರಿಗಳಿಗೆ ೪೦ ಸಾವಿರದವರೆಗೆ ಮಾತ್ರ ಹಣಕಾಸು ವೆಚ್ಚ ಮಾಡುವ ಅಧಿಕಾರವಿದ್ದು ಅದನ್ನು ಮೀರಿ ೮೩ ಲಕ್ಷ ರೂಪಾಯಿಗಳನ್ನು ಆಸ್ಪತ್ರೆಗೆ ಔಷಧ ಹಾಗೂ ಸರ್ಜಿಕಲ್ ಉಪಕರಣ.ಮತ್ತು ಇನ್ನಿತರ ಸಿವಿಲ್ ಕಾಮಗಾರಿಗಳ ಹೆಸರಿನಲ್ಲಿ ಸುಲಿಗೆ ನಡೆಸಲಾಗಿದೆ.

ಆಸ್ಪತ್ರೆಗಳಿಗೆ ಅಗತ್ಯ ಔಷಧಗಳನ್ನು ರಾಜ್ಯ ಸರಕಾರವೇ ಪೂರೈಸುತ್ತದೆ. ಕೊರತೆ ಕಂಡುಬಂದಲ್ಲಿ ವಾರ್ಷಿಕ ಅಗತ್ಯತೆಯ ಅನುಸಾರ ಟೆಂಡರ್ ನಡೆಸಿ ಅಗತ್ಯ ಔಷಧಗಳನ್ನು ಪಡೆಯಬೇಕು.ಇದಕ್ಕಾಗಿ ಸರಕಾರ ನಿಗದಿಪಡಿಸಿರುವ ದರದಲ್ಲೆ ವ್ಯವಹರಿಸಬೇಕು.

ಆದರೆ ಇದೆಲ್ಲವನ್ನೂ ಗಾಳಿಗೆ ತೂರಿರುವ ವೆಂಕಟೇಶ್ ಕೋಟೆಷನ್ ಹೆಸರಿನಲ್ಲಿ ತಾವು ಈಗಾಗಲೇ ಒಳ ಒಪ್ಪಂದ ಮಾಡಿಕೊಂಡಿರುವ ಸರ್ಜಿಕಲ್ ಏಜೆನ್ಸಿಗಳಿಗೆ ಪ್ರತ್ಯೇಕವಾಗಿ ರೂ ೯೯ ಸಾವಿರ ರೂಪಾಯಿಗಳ ಕೋಟೆಷನ್ ನೀಡಿದ್ದಾರೆ.

ಈ ಕೋಟೆಷನ್ ಗಳನ್ನು ಯಾವುದೆ ಪತ್ರಿಕೆಗಳಿಗೆ ಜಾಹೀರಾತು ನೀಡುವುದಿಲ್ಲ.ವ್ಯಾಪಕ ಪ್ರಚಾರವನ್ನು ಸಹ ನಡೆಸುವುದಿಲ್ಲ.ಈಗಾಗಲೇ ತಮಗೆ ಹೆಚ್ಚು ಕಮೀಷನ್ ನೀಡುವ ಔಷಧ ಏಜೆನ್ಸಿಗಳಿಗೆ ಕಾರ್ಯಾದೇಶ ನೀಡುವ ಸಲುವಾಗಿ ಒಂದೆರೆಡು ಡಮ್ಮಿ ಏಜೆನ್ಸಿಗಳೊಂದಿಗೆ ಕೋಟೆಷನ್ ಸಲ್ಲಿಸುವಂತೆ ಮಾಡಿ ತಮಗೆ ಬೇಕಾದವರಿಗೆ ಸರಬರಾಜು ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.

ಮುಂದುವರಿದು ಮಾತನಾಡಿದ ಅವರು
ವಾಸ್ತವದಲ್ಲಿ ಈ ಪ್ರಮಾಣದ ಔಷಧಗಳನ್ನು ಖರೀದಿಸಿಲ್ಲ.ಬದಲಿಗೆ ಖರೀದಿಸಿದಂತೆ ನಕಲಿ ಬಿಲ್ ಗಳನ್ನು ಸೃಷ್ಟಿಸಿ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಹಣ ಲಪಟಾಯಿಸಲಾಗಿದೆ.

ಇದಕ್ಕೆ ತಾಜಾ ಉದಾಹರಣೆ ಎಂದರೆ 17-01-24 ರಲ್ಲಿ ನಾಗಮಂಗಲ ತಾಲೋಕು ಆಸ್ಪತ್ರೆಗೆ ₹97350 ವೆಚ್ಚದಲ್ಲಿ ಮೆಡಿಪ್ಲಸ್ ಎಂಬ ಏಜೆನ್ಸಿಯಿಂದ 30 ಡಸ್ಟ್ ಬೀನ್ ಗಳನ್ನು ಪಡೆಯಲಾಗಿದೆ.ಮುಂದುವರಿದು 22-1-24 ರಲ್ಲಿ ಮರಳಿ ಅದೇ ಏಜೆನ್ಸಿಯಿಂದ 97350 ರೂ ವೆಚ್ಚದಲ್ಲಿ ಡಸ್ಟ್ ಬೀನ್ ಗಳನ್ನು ಪಡೆದಂತೆ ನಕಲಿ ಬಿಲ್ ಸೃಷ್ಟಿಸಲಾಗಿದೆ.ವಾಸ್ತವದಲ್ಲಿ ಈ ಎರಡು ಸಹ ಐದೇ ದಿನದ ಅಂತರದಲ್ಲಿ ನಡೆದ ವ್ಯವಹಾರವಾಗಿದೆ.

ಈ ಎರಡು ಖರೀದಿಯನ್ನು ಒಟ್ಟುಗೂಡಿಸಿ ಟೆಂಡರ್ ಮೂಲಕ ವಸ್ತುಗಳನ್ನು ಪಡೆಯುವ ಅವಕಾಶವಿದ್ದರೂ ಅದೆಲ್ಲವನ್ನು ಗಾಳಿಗೆ ತೂರಿ ಕೋಟೆಷನ್ ಮೂಲಕ ಖರೀದಿಸಿದಂತೆ ತೋರಿಸಿ ನಕಲಿ ಬಿಲ್ ಮೂಲಕ ಸರಕಾರಿ ಹಣ ಲಪಟಾಯಿಸಲಾಗಿದೆ ಎಂದರು.

ನಡೆದಿರುವ 90 ಖರೀದಿಗಳಲ್ಲಿ ಪ್ಲಾಟಿನಮ್ ಬಯೋ ಮೆಡಿಕ್ಸ್ ಎಂಬ ಒಂದೇ ಏಜೆನ್ಸಿಗೆ 36 ಸರಬರಾಜು ಆದೇಶ ನೀಡಲಾಗಿದೆ.ಕ್ರಮವಾಗಿ ಮೆಡಿಪ್ಲಸ್ ಗೆ 14.ಲಕ್ಷೀ ಫಾರ್ಮಾಗೆ 14 ಒಟ್ಟು ಖರೀದಿಯಲ್ಲಿ ಶೇ 70 ರಷ್ಟನ್ನು ಈ ಮೂರು ಏಜೆನ್ಸಿಗಳಿಗೆ ನೀಡಿರುವುದೇ ಇದೊಂದು ಹಗರಣ ಎಂಬುದನ್ನು ಧೃಡೀಕರಿಸುತ್ತದೆ.

ಸರಕಾರದ ಕೆಟಿಪಿಪಿ ನಿಯಮಗಳನ್ನು ಗಾಳಿಗೆ ತೂರಿ ಸಿವಿಲ್‌ ಕಾಮಗಾರಿಗಳನ್ನು ನಡೆಸಲಾಗಿದೆ.ಕೋಟೆಷನ್ ಮೂಲಕ ಆಸ್ಪತ್ರೆಗೆ ಬಹಳಷ್ಡು ಔಷಧಗಳು.ಸರ್ಜಿಕಲ್ ಉಪಕರಣಗಳು ಪೀಠೋಪಕರಣಗಳು ವಾಸ್ತವದಲ್ಲಿ ಸರಬರಾಜು ಆಗಿಯೆ ಇಲ್ಲ. ರೋಗಿಗಳಿಗೆ ಬೆಡ್ ಷೀಟ್ ಖರೀದಿಸಿದಂತೆ ನಾಲ್ಕು ಪ್ರತ್ಯೇಕ ಕೋಟೇಷನ್ ನಿರ್ವಹಿಸಲಾಗಿದೆ.ಇದನ್ನು ಒಟ್ಟುಗೂಡಿಸಿ ಟೆಂಡರ್ ನಡೆಸುವ ಅವಕಾಶವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟು ಖರೀದಿ ಹೆಸರಿನಲ್ಲಿ ಸರಕಾರಿ ಹಣ ಲೂಟಿ ನಡೆಸಲಾಗಿದೆ.ಇದಕ್ಕಾಗಿ ದಾಖಲೆಗಳನ್ನು ಸೃಷ್ಟಿಸಲಾಗಿದೆ.

ಸರಕಾರವು ಖರೀದಿಗಾಗಿ ಜೆಮ್ ಪೋರ್ಟಲ್ ಮೂಲಕ ಮಾತ್ರವೆ ಖರೀದಿ ನಡೆಸುವಂತೆ ಆದೇಶಿಸಿದೆ.ಇದರಿಂದ ಎಂ ಆರ್ ಪಿ ದರಕ್ಕಿಂತ ಶೇ 40 ಕಡಿಮೆ ದರಕ್ಕೆ ಲಭ್ಯವಾಗಲಿವೆ.ಜೆಮ್ ಪೋರ್ಟಲ್ ಹೊರತಾಗಿ ನಡೆಸುವ ಖರೀದಿಗಳನ್ನು ಅಕ್ರಮ ಸಂಗ್ರಹ ಎಂದು ಘೋಷಿಸಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತರು ಘೋಷಿಸಿದ್ದಾರೆ.

ಇದಲ್ಲದೆ ಆಸ್ಪತ್ರೆಗೆ ಸಿದ್ದಪಡಿಸಿದ ಆಹಾರ ಪೂರೈಸುವ ಏಜೆನ್ಸಿ ಅತ್ಯಂತ ಕಳಪೆ ಆಹಾರ ನೀಡುತ್ತಿದ್ದರು ದುಬಾರಿ ದರ ನೀಡಲಾಗುತ್ತಿದೆ.ಸ್ವತಃ ಜಿಲ್ಲಾಧಿಕಾರಿಗಳೆ ಈ ಕುರಿತು ವರದಿ ನೀಡುವಂತೆ ಆದೇಶಿಸಿದ್ದರು ಯಾವುದೆ ಕ್ರಮವಾಗಿಲ್ಲ. ಟೆಂಡರ್ ನಡೆಸಿ ಎರಡು ವರ್ಷವಾದರೂ ಈವರೆಗೂ ಟೆಂಡರ್ ಸಹ ನಡೆಸಿಲ್ಲ.ಇದಲ್ಲದೆ ನಿಯಮಬಾಹಿರವಾಗಿ ಈ ಏಜೆನ್ಸಿಗೆ ಜಿಎಸ್ ಟಿ ಹಣ ಬಿಡುಗಡೆ ಮಾಡಲಾಗಿದೆ.ಈ ಹಣವನ್ನು ವೈದ್ಯಾಧಿಕಾರಿಗಳ ವೇತನದಿಂದಲೆ ಕಟಾಯಿಸುವಂತೆ ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಹಾಲೀ ಕೀಲು ಮತ್ತು ಮೂಳೆ ತಜ್ನರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೆಂಕಟೇಶ್ ರನ್ನು ಅಮಾನತ್ತುಗೊಳಿಸಿ ಈ ಹಗರಣದಲ್ಲಿ ಭಾಗೀಯಾದವರ ವಿರುದ್ದ ಇಲಾಖಾ ತನಿಖೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.ತಪ್ಪಿದಲ್ಲಿ ಡಿಎಚ್ ಓ ಸೇರಿದಂತೆ ಸಕ್ಷಮ ಪ್ರಾಧಿಕಾರದಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!