ಪಾಂಡವಪುರ, ಜುಲೈ 25: ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಕಾವೇರಿ ನದಿ ನೀರಿನ ಪ್ರವಾಹದ ಹಿನ್ನೆಲೆ ಭಾರಿ ಗಾತ್ರದ ನಾಗರಹಾವು ಹೊಳೆ ಅಂಚಿನಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಕಾಣಿಸಿಕೊಂಡು ಮಕ್ಕಳಲ್ಲಿ ಭೀತಿಯನ್ನುಂಟು ಮಾಡಿದ ಪ್ರಸಂಗ ಗುರುವಾರ ನಡೆಯಿತು.
ಎಣ್ಣೆಹೊಳೆಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಹಾವು ತಜ್ನ ಸ್ನೇಕ್ ವಿವೇಕ್ ಭಾರಿ ಗಾತ್ರದ 7 ಅಡಿ ಉದ್ದದ ನಾಗರಹಾವನ್ನು ಹಿಡಿದು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದರು.