Wednesday, February 5, 2025
spot_img

ಪಾಂಡವಪುರ:ಪೋಲಿಸರ ಹಲ್ಲೇಗೆ ಪ್ರತಿರೋಧ ತೋರಿದ ವ್ಯಕ್ತಿ ಬಂಧನ

  1. ಪಾಂಡವಪುರ : ಪೊಲೀಸ್ ಪೇದೆ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಪುರಸಭೆ ಮಾಜಿ ಅಧ್ಯಕ್ಷ ಪಿ.ಎಸ್.ಜಗದೀಶ್ ಅವರ ಪುತ್ರ ಪಿ.ಜೆ.ಸಾಗರ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.

    ಘಟನೆ ವಿವರ : ಶನಿವಾರ ಮದಾಹ್ನ 1ಕ್ಕೆ ಪೊಲೀಸ್ ಪೇದೆ ಅಭಿಷೇಕ್‌ ಗೌಡ ಪಾಂಡವಪುರ ಪೊಲೀಸ್ ಠಾಣೆ ಬಳಿ ಜಮೀನು ವಿಚಾರದಲ್ಲಿ ನಡೆದ ಗಲಾಟೆ ಸಂಬಂಧ ವಿಚಾರಣೆಗೆ ಬಂದ ಆರೋಪಿ ಸಾಗರ್ ಮೇಲೆ ಹಲ್ಲೆ ನಡೆಸಿದ್ದು, ಇದರಿಂದ ಕುಪಿತನಾದ ಸಾಗರ್ ಪೊಲೀಸ್ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ. ಬಿಡಿಸಲು ಬಂದ ಮುಖ್ಯ ಪೊಲೀಸ್ ಪೇದೆ ಆನಂದ್ ಮೇಲೂ ಹಲ್ಲೆ ನಡೆಸಿದ ಎನ್ನಲಾಗಿದೆ.

    ಈ ಕುರಿತು ದೂರು ನೀಡಿರುವ ಹಲ್ಲೆಗೊಳಗಾದ ಪೊಲೀಸ್ ಪೇದೆ ಅಭಿಷೇಕ್ ಗೌಡ, ಡಿ.28 ರಂದು ನನಗೆ ಹಗಲು ಕರ್ತವ್ಯದ ಕೆಲಸಕ್ಕೆ ನೇಮಕವಾಗಿದ್ದು, ಅದರಂತೆ ಬೆಳಗ್ಗೆ 11ಕ್ಕೆ ಘಂಟೆಯಲ್ಲಿ ಠಾಣೆಯಲ್ಲಿ ಇದೆನು.
    ಆಗ ಪಿ.ಎಸ್.ಐ ಮಹದೇವರವರು ನನ್ನನ್ನು ಕರೆದು ಲಕ್ಷ್ಮೀನಾರಾಯಣ ಎಂಬುವವರು ಪಾಂಡವಪುರ ಟೌನಿನ ಸಾಗರ್ ಬಿನ್ ಜಗದೀಶ್
    ಎಂಬುವವರ ಮೇಲೆ ದೂರು ನೀಡಿದ್ದಾರೆ, ಅವರನ್ನು ವಿಚಾರಣೆ ಸಂಬಂಧ ಠಾಣೆಗೆ ಕರೆಸು ಎಂದು ಹೇಳಿದರು. ಆಗ ನಾನು ದೂರುದಾರರಾದ
    ಲಕ್ಷ್ಮೀನಾರಾಯಣರವರಿಂದ ಸಾಗರ್ ಎಂಬುವವನ ಫೋನ್ ನಂಬರನ್ನು ಪಡೆದುಕೊಂಡು ಕರೆ ಮಾಡಿ ಅವನಿಗೆ ನಿನ್ನ ಮೇಲೆ ಲಕ್ಷ್ಮೀನಾರಾಯಣರವರು ದೂರು ನೀಡಿದ್ದಾರೆ, ನಮ್ಮ ಸಬ್‌ಇನ್ಸ್‌ ಎಕ್ಟರ್ರವರು ಬರೋಕೆ
    ಹೇಳುತ್ತಿದ್ದಾರೆ, ಬಾ ಎಂದು ಹೇಳಿದೆನು, ನಂತರ ಅವನು ಸ್ವಲ್ಪ ಸಮಯ ಬಿಟ್ಟು ಅಂದರೆ ಮಧ್ಯಾಹ್ನ ಸುಮಾರು 12ಕ್ಕೆ ಠಾಣೆಗೆ ಬಂದು,
    ಠಾಣೆಯ ಮುಂಭಾಗ ಎಸ್. ಹೆಚ್. ಓ ರವರು ಕುಳಿತುಕೊಳ್ಳುವ ಟೇಬಲ್ ಬಳಿ ಬಂದು ನಿಂತುಕೊಂಡನು, ಆಗ ಅದೇ ಸಮಯದಲ್ಲಿ ದೂರುದಾರರಾದ
    ಲಕ್ಷ್ಮೀನಾರಾಯಣ್ ರವರು ಠಾಣೆಯ ಒಳಗಡೆಯಿಂದ ಎಸ್ಕೆಚ್‌ಓ ಟೇಬಲ್ ಬಳಿಗೆ ಬಂದು ಅಲ್ಲಿದ್ದ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೋದಾಗ
    ಅಲ್ಲೇ ನಿಂತಿದ್ದ ಸಾಗರ್ ನಾನು ಕುಳಿತುಕೊಳ್ಳಬೇಕು ಎಂದು ಆ ಚೇರನ್ನು ಎಳೆದನು, ಆಗ ಲಕ್ಷ್ಮಿನಾರಾಯಣ್ ಮತ್ತು ಸಾಗರ್ ನಡುವೆ ಮಾತಿಗೆ ಮಾತು ಬೆಳೆದು ಸಾಗರ್ ಲಕ್ಷ್ಮೀನಾರಾಯಣ್ ರವರಿಗೆ ನಮ್ಮ ಮುಂದೆಯೇ ಹೊಡೆಯಲು ಹೋದನು, ಆಗ ಅಲ್ಲಿಯೇ ಸಮವಸ್ತ್ರದಲ್ಲಿ ಇದ್ದ ನಾನು, ನಮ್ಮ
    ಮುಂದೆಯೇ ಅವರಿಗೆ ಹೊಡೆಯಲು ಹೋಗುತ್ತೀಯಾ ಎಂದು ಸಾಗರ್ ನನ್ನು ಕೇಳಲು ಹೋದಾಗ, ಸಾಗರ್ ನನಗೆ ಏಕಾಏಕಿ ಕೇಳಲು ನೀನ್ಯಾರು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಆತನ ಬಲಗೈಯಿಂದ ನನ್ನ ಎಡ ಕಪಾಲಕ್ಕೆ ಜೋರಾಗಿ ಹೊಡೆದನು, ಆಗ ನಾನು ಯಾಕೆ ಹೊಡೆಯುತ್ತೀಯಾ ಎಂದು ಕೇಳಿದಾಗ, ನನ್ನ
    ಸಮವಸ್ತ್ರದ ಕೊರಳುಪಟ್ಟಿಯನ್ನು ಹಿಡಿದು ಎಳೆದಾಡಿ ನನ್ನನ್ನು ಗೋಡೆಗೆ ತಳ್ಳಿ, ನನ್ನ ಎಡಗೆ ನುಲುಚಿ, ನೋವುಂಟುಮಾಡಿದನು, ಆಗ ಅಲ್ಲದೆ ಕರ್ತವ್ಯದಲ್ಲಿದ ಮುಖ್ಯ ಪೇದೆ ಆನಂದರವರು ಬಿಡಿಸಲು ಬಂದಾಗ, ಸಾಗರ್ ಒಂದು ಕೈಯಲಿ, ನನ್ನ ಸಮವಸ್ತ್ರದ ಕೊರಳುಪಟ್ಟಿಯನ್ನು,
    ಮತ್ತೊಂದು ಕೈಯಲ್ಲಿ, ಆನಂದ್ ರವರ ಸಮವಸ್ತ್ರದ ಕೊರಳುಪಟ್ಟಿಯನ್ನು ಹಿಡಿದು, ನಮ್ಮನ್ನು ಗೋಡೆಗೆ ತಳ್ಳಿ, ಆತನ ಜೇಬಿನ
    ಇಟ್ಟಿಕೊಂಡಿದ್ದ ಪೆನ್ ಅನ್ನು ಹೊರಗಡೆ ತೆಗೆದು ಚುಚ್ಚಲು ಬಂದಾಗ ಅಲ್ಲಿಯೇ ಇದ್ದ ಠಾಣಾ ಪಹರೆ ಕರ್ತವ್ಯದ ಮಹಿಳಾ ಪೇದೆ ಲಕ್ಷ್ಮೀರವರು
    ಬಿಡಿಸಲು ಬಂದಾಗ ಅವರ ಕೈಗಳನ್ನೂ ಸಹಾ ಹಿಡಿದು ಎಳೆದಾಡಿ ನೀನ್ಯಾರು ಬಿಡಿಸಲು ಎಂದು ಲಕ್ಷ್ಮೀರವರ ಕೈಗಳನ್ನು ಹಿಡಿದು ನುಲುಚಿ ಎಳೆದಾಡಿ
    ಲಕ್ಷ್ಮೀರವರ ಕೈಯಲ್ಲಿದ ಗಾಜಿನ ಬಳೆಗಳನ್ನೂ ಸಹಾ ಪುಡಿ ಪುಡಿಮಾಡಿರುತ್ತಾನೆ. ಆಗ ಆಲಿಯೇ ಇದ್ದ ಮುಖ್ಯ ಪೇದೆ ಲತಾಮಣಿ, ಎಎಸ್‌ಐ
    ಪ್ರಕಾಶ್‌, ಪಿಎಸ್‌ಐ ಮಹದೇವು ಹಾಗೂ ಅಲ್ಲಿಯೇ ಠಾಣೆಯ ಮುಂಭಾಗದಲ್ಲಿದ ದೂರುದಾರರಾದ ಲಕ್ಷ್ಮಿನಾರಾಯಣ, ಹಾಗೂ ರಾಮಣ್ಣ ಮತ್ತು
    ಮಹದೇವ ಇತರೆ ಸಾರ್ವಜನಿಕರು ನಮ್ಮನ್ನು ಆತನಿಂದ ಬಿಡಿಸಿದರು. ಆಗ ಆತನು ಇನ್ನೊಂದು ಸಾರಿ ನನ್ನ ವಿಚಾರಕ್ಕೆ ಬಂದರೆ, ನಿಮ್ಮನ್ನು ಸುಮ್ಮನೇ
    ಬಿಡುವುದಿಲ್ಲ, ಎಂದು ಅಲ್ಲಿಯೇ ಸಾರ್ವಜನಿಕರು ಕುಡಿಯಲು ಇಟ್ಟಿದ 20 ಲೀಟರ್ ನೀರು ತುಂಬಿದ ಕ್ಯಾನನ್ನು ಮೇಲಕ್ಕೆ ಎತ್ತಿ ನಮ್ಮ ಮೇಲೆ
    ಹಾಕಲು ಬಂದು ನೆಲಕ್ಕೆ ಜೋರಾಗಿ ಎತ್ತಿ ಹಾಕಿದನು. ಆದ್ದರಿಂದ ಪೊಲೀಸ್ ಸಮವಸ್ತ್ರದಲ್ಲಿ ಕರ್ತವ್ಯದಲ್ಲಿದ್ದ ನಮ್ಮ ಮೇಲೆ ಹಲ್ಲೆ, ಮಾಡಿ
    ಸಮವಸ್ತ್ರವನ್ನು ಹಿಡಿದು ಎಳೆದಾಡಿ ಹರಿದುಹಾಕಿ ಆವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿ ಠಾಣಾ ದಾಖಲಾತಿಗಳನ್ನು ಹಾಳು ಮಾಡಿರುವ
    ಸಾಗರ್‌ ಬಿನ್‌ ಜಗದೀಶ್ ಪಾಂಡವಪುರ ಟೌನ್ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ದೂರಿನಲ್ಲಿ ಮನವಿ ಮಾಡಿದ್ದಾರೆ.

    ಅಭಿಷೇಕ್ ಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೊಲೀಸ್ ಠಾಣೆಗೆ ಪ್ರಭಾರ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಎಸ್.ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!