Thursday, December 26, 2024
spot_img

ಸಾಮಾನ್ಯರೊಂದಿಗೆ ಮಿಂದೆದ್ದ ಶಾಸಕ ‘ದರ್ಶನ್ ಪುಟ್ಟಣ್ಣಯ್ಯ

ಪಾಂಡವಪುರ :ಶಾಸಕರಾದವರು ಐಷರಾಮಿ ಹೋಟೆಲ್ ಗಳಲ್ಲಿ ಊಟ ಮಾಡುವುದು ಸರ್ವೆ ಸಾಮಾನ್ಯ. ಆದರೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮೆಸ್ ಒಂದರಲ್ಲಿ ಸಾಮಾನ್ಯ ಜನರ ಜತೆ ಕುಳಿತು ಊಟ ಮಾಡುವ ಮೂಲಕ ಎಲ್ಲರ ಗಮನಸೆಳೆದರು.

ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿ ರೈತಸಂಘದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಧ್ಯಾಹ್ನದ ಊಟವನ್ನು ಪ್ರಕಾಶ್ ಮೆಸ್ ನಲ್ಲಿ ಸಾಮಾನ್ಯ ಜನರಂತೆಯೇ ಮಾಡಿದರು.

ತಾವೊಬ್ಬ ಶಾಸಕನೆಂಬ ಹಮ್ಮುಬಿಮ್ಮು ಬಿಟ್ಟು ಸಾಮಾನ್ಯ ಜನರ ಜತೆಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಗಮನಸೆಳೆದರು. ಈ ವೇಳೆ ಶಾಸಕರನ್ನು ಕಂಡ ಜನರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಊಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸುತ್ತಿದ್ದ ದೃಶ್ಯ ಕಂಡು ಬಂತು.

ಈ ಹಿಂದೆ ತಮ್ಮ ತಂದೆ ದಿ‌.ಕೆ.ಎಸ್.ಪುಟ್ಟಣ್ಣಯ್ಯ ಅವರು ಕೂಡ ಮೆಸ್ ಹಾಗೂ ಶೆಡ್ ಹೋಟೆಲ್ ಗಳಲ್ಲಿ ಊಟ ಮಾಡುತ್ತಿದ್ದುದ್ದನ್ನು ಇಲ್ಲಿ ಸ್ಮರಿಸಬಹುದು.

ಅಂತೆಯೇ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೂಡ ತಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ರೀತಿಯಲ್ಲಿಯೇ ಮೆಸ್ ಹಾಗೂ ಶೆಡ್ ಹೋಟೆಲ್ ಗಳಲ್ಲಿ ಊಟ ಮಾಡುವ ಮೂಲಕ ತಂದೆ‌ಯವರು ನಡೆದ ಮಾದರಿಯಲ್ಲಿ ನಡೆಯತೊಡಗಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಜತೆ ರೈತಸಂಘದ ಮುಖಂಡ ಕನಗನಮರಡಿ ಬಲರಾಮು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!