Sunday, October 12, 2025
spot_img

ನೂತನ ಮದ್ದೂರು ನಗರಸಭೆ ಆಯುಕ್ತರಾಗಿ ಪರಶುರಾಮ ಸತ್ತೀಗೇರಿ ನೇಮಕ

ಮದ್ದೂರು ಪುರಸಭೆಯನ್ನು ನಗರಸಭೆಯನ್ನಾಗಿ ನಾಡ ಆಳಿಕೆ ಮೇಲ್ದರ್ಜೆಗೆರಿಸಿದ್ದು, ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾಧಿಕಾರಿ ಡಾ. ಕುಮಾ‌ರ್ ಅವರು ಮುಂದಿನ ಆದೇಶದವರೆಗೆ ಮದ್ದೂರು ತಹಶೀಲ್ದಾ‌ರ್ ಪರಶುರಾಮ್ ಸತ್ತಿಗೇರಿ ಅವರನ್ನು ಪ್ರಭಾರ ಪೌರಾಯುಕ್ತರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ನೂತನ ಪ್ರಭಾರ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪರಶುರಾಮ ಸತ್ತೀಗೇರಿಯವರು ಜನಪ್ರತಿನಿಧಿಗಳು ಹಾಗೂ ಕಚೇರಿ ಸಿಬ್ಬಂದಿಗಳಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಚುನಾಯಿತ ಜನಪ್ರತಿನಿಧಿಗಳು, ಕಚೇರಿ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ನಗರದಲ್ಲಿ ಕುಡಿಯುವ ನೀರು, ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡಿ ಹಂತ ಹಂತವಾಗಿ ನಗರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಮದ್ದೂರು ಪುರಸಭೆ ನಗರಸಭೆಯಾಗಿ ಮೆಲ್ದರ್ಜೆಗೆರಿದ್ದು, ನಗರದಲ್ಲಿ ತುಂಬಾ ಕೆಲಸಗಳು ಆಗಬೇಕಾಗಿದೆ. ಕೆಲ ದಿನಗಳಲ್ಲೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಾಗಲಿದ್ದು, ಹೀಗಾಗಿ ಅತೀ ಜರೂರಾಗಿ ವಾರ್ಡ್‌ಗಳ ವಿಂಗಡಣೆ ಕೆಲಸವಾಗಬೇಕಾಗಿದೆ.

ಕೆಲಸಗಳಿಗೆ ಕಚೇರಿ ಸಿಬ್ಬಂದಿ ಕೊರತೆ ಇದೆ. ಅದನ್ನು ನೀಗಿಸಲು ಸರ್ಕಾರ ಮತ್ತು ಜಿಲ್ಲಾಡಳಿತದ ಜೊತೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.

ಇದೇ ವೇಳೆ ನಗರಸಭಾ ಅಧ್ಯಕ್ಷೆ ಕೋಕಿಲ ಅರುಣ್ ,ಉಪಾಧ್ಯಕ್ಷ , ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಪ್ರಭಾರ ಮುಖ್ಯಾಧಿಕಾರಿ ಶ್ರೀಧ‌ರ್, ಸಿಬ್ಬಂದಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!