Wednesday, January 21, 2026
spot_img

ಪಾಲಿಕೆಗಳಲ್ಲಿ ಆರೋಗ್ಯಾಧಿಕಾರಿ ಹುದ್ದೆ ರದ್ದು?

ಪಾಲಿಕೆ ಆರೋಗ್ಯಾಧಿಕಾರಿ ಹುದ್ದೆ ರದ್ದು!ಆದೇಶ ಮರಳಿ ಪಡೆಯಲು ಆಗ್ರಹ; ಸಂಘಟನೆಗಳಿಂದ ಹೋರಾಟದ ಎಚ್ಚರಿಕೆಆರೋಗ್ಯಾಧಿಕಾರಿ ಹುದ್ದೆ ರದ್ದುಪಡಿಸಿ ಸರ್ಕಾರ ಆದೇಶಿಸಿದೆ. ಹುದ್ದೆ ಮುಂದುವರಿಯಬೇಕೆಂದು ಪಾಲಿಕೆ ಸದಸ್ಯರು ನಿರ್ಣಯಿಸಿದರೆ, ಸರ್ಕಾರಕ್ಕೆ ತಿಳಿಸಲಾಗುವುದುರುದ್ರೇಶ ಘಾಳಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ
 

ರುದ್ರೇಶ ಘಾಳಿ

ಪ್ರಹ್ಲಾದ ಜೋಷಿ.ಕೇಂದ್ರ ಸಚಿವ

 

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಹುದ್ದೆಯನ್ನು ಸರ್ಕಾರ ರದ್ದುಪಡಿಸಿ ಆದೇಶಿಸಿದೆ. ಆ ಹುದ್ದೆಯ ಹೆಸರನ್ನು ಕಾರ್ಯಪಾಲಕ ಎಂಜಿನಿಯರ್‌ (ಪರಿಸರ) ಎಂದು ಮರುನಾಮಕಾರಣ ಮಾಡಿದೆ. ಇನ್ನು ಮುಂದೆ ಪಾಲಿಕೆಯ ಆರೋಗ್ಯ ವಿಭಾಗದ ಎಲ್ಲ ಕಾರ್ಯಚಟುವಟಿಕೆಗಳು ಅವರಡಿ ಬರಲಿವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹೊರತುಪಡಿಸಿ, ಉಳಿದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಇರುವ ಆರೋಗ್ಯಾಧಿಕಾರಿ ಸೇರಿ ಒಟ್ಟು 18 ಹುದ್ದೆಗಳನ್ನು ರದ್ದುಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕಾರ್ಯಪಾಲಕ ಎಂಜಿನಿಯರ್‌ ಸೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಸೀನಿಯರ್‌ ಪ್ರೋಗ್ರಾಮರ್‌, ಆಡಳಿತ ಅಧಿಕಾರಿ ಎಂದು ಮರುನಾಮಕರಣ ಮಾಡಲಾ ಗಿದೆ. ಆದರೆ, ವೇತನ ಶ್ರೇಣಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು 2022ರಲ್ಲಿ ಸರ್ಕಾರಕ್ಕೆ ‘ಪಾಲಿಕೆಯಲ್ಲಿನ ಏಕರೂಪ ವೃಂದ ಮತ್ತು ನೇಮಕಾತಿ ನಿಯಮಗಳು 2011ಕ್ಕೆ ತಿದ್ದುಪಡಿ ಪ್ರಸ್ತಾವ’ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿದ ಸರ್ಕಾರ, ‘ಮಹಾನಗರ ಪಾಲಿಕೆಯ ಆಸ್ಪತ್ರೆಗಳು ಆರೋಗ್ಯ ಇಲಾಖೆಗೆ ಹಸ್ತಾಂತರ ಆಗಿರುವುದರಿಂದ ಆರೋಗ್ಯಾಧಿಕಾರಿ ಹುದ್ದೆ ಅಗತ್ಯವಿಲ್ಲ’ ಎಂದು ತಿದ್ದುಪಡಿ ತಂದು, ವಿವಿಧ ವೃಂದದ ಹುದ್ದೆಗಳನ್ನು ರದ್ದುಪಡಿಸಿದೆ. ಈ ಕುರಿತು ಆರ್ಥಿಕ ಇಲಾಖೆಗೆ ಟಿಪ್ಪಣಿ ಸಲ್ಲಿಸಲಾಗಿದೆ. ಹೀಗಾಗಿ ಪಾಲಿಕೆಯಲ್ಲಿನ ಆರೋಗ್ಯಾಧಿಕಾರಿ ಹುದ್ದೆ ರದ್ದಾಗಿದೆ. ಇದು ಜನಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಅಧಿವೇಶನದಲ್ಲಿ ಚರ್ಚಿಸುವೆ’: ‘ಆರೋಗ್ಯಾಧಿಕಾರಿ ಹುದ್ದೆಯನ್ನು ಸರ್ಕಾರ ರದ್ದು ಪಡಿಸಿದ್ದು ಅಕ್ಷಮ್ಯ. ಪಾಲಿಕೆ ಅಧೀನದಲ್ಲಿ 100 ಹಾಸಿಗೆ ಸಾಮರ್ಥ್ಯದ ಚಿಟಗುಪ್ಪಿ ಆಸ್ಪತ್ರೆ ಸೇರಿ ಹತ್ತು ಆಸ್ಪತ್ರೆಗಳಿವೆ. ಆರೋಗ್ಯದ ಕುರಿತು ನಿರ್ಧರಿಸಲು ಆರೋಗ್ಯ ಅಧಿಕಾರಿಗಳು ಬೇಕು. ಇದರ ಬಗ್ಗೆ ಬೆಳಗಾವಿ ಅಧಿವೇಶನ ದಲ್ಲಿ ಚರ್ಚಿಸುವೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಆದೇಶ ರದ್ದತಿಗೆ ಸಿ.ಎಂ ಜತೆ ಚರ್ಚೆ: ‘ಪಾಲಿಕೆಯ ಅಧೀನದಲ್ಲಿರುವ ಆಸ್ಪತ್ರೆಗಳಿಗೆ ಬಡವರು ಹೆಚ್ಚಾಗಿ ಬರುತ್ತಾರೆ. ವೈದ್ಯಕೀಯ ಸಿಬ್ಬಂದಿಗೆ ಮತ್ತು ಕಿರಿಯ ವೈದ್ಯರಿಗೆ ಸಲಹೆ, ಸೂಚನೆ ನೀಡಲು ವೈದ್ಯಾಧಿಕಾರಿ ಹುದ್ದೆ ಬೇಕು. ಹುದ್ದೆ ರದ್ದು ಪಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಜೊತೆ ಚರ್ಚಿಸುವೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!