ಭಾರತಿನಗರ :(ಮಂಡ್ಯ ಜಿಲ್ಲೆ: ಮಂಡ್ಯ ನಗರಸಭೆಯ
ಸಮುದಾಯ ಸಂಘಟನಾಧಿಕಾರಿ ತೊರೆಚಾಕನಹಳ್ಳಿ ಪುಟ್ಟಸ್ವಾಮಿ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ಏಕಕಾಲಕ್ಕೆ ಮಂಗಳವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಕಡತ ಪರಿಶೀಲನೆ ನಡೆಸಿದ್ದಾರೆ.
ಸಿ.ಪುಟ್ಟಸ್ವಾಮಿ ಅವರಿಗೆ ಸೇರಿದ ಮಂಡ್ಯದಲ್ಲಿನ ಮನೆ, ತೊರೆಚಾಕನಹಳ್ಳಿಯಲ್ಲಿನ ಮನೆ, ಸಂಬಂಧಿಕರ ಎರಡು ಮನೆಗಳು ಹಾಗೂ ಫಾರ್ಮ್ ಹೌಸ್, ಸೇರಿದಂತೆ ಐದು ಕಡೆ ಪ್ರತ್ಯೇಕ ತಂಡಗಳಾಗಿ ದಾಳಿ ನಡೆಸಲಾಗಿದೆ.
ಎಲ್ಲೆಡೆಯೂ ದಾಖಲೆಗಳ, ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ರಾಜ್ಯಾದ್ಯಂತ ಹಲವು ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿಗಾಗಿ ನಿಯೋಜಿಸಲಾಗಿದ್ದ ಲೋಕಾಯುಕ್ತರ ಒಂದು ತಂಡ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಈ ಹಿಂದೆ ಚನ್ನಪಟ್ಟಣ ನಗರಸಭೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದ ಪುಟ್ಟಸ್ವಾಮಿ ಅಲ್ಲಿ ಸಾಕಷ್ಟು ವಿವಾದಕೀಡಾಗಿದ್ದರು.ನಂತರದಲ್ಲಿ ಮಂಡ್ಯ ನಗರಸಭೆಯ ಆಯುಕ್ತರಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದ ಪುಟ್ಟಸ್ವಾಮಿ ಇಲ್ಲಿನ ಸಮುದಾಯ ಸಂಘಟಕರಾಗಿ ಮುಂದುವರಿದಿದ್ದರು.ಹಾಲೀ ಆಯುಕ್ತೆ ಪಂಪಾಶ್ರೀ ಪುರಸಭೆಗಳಿಗೆ ಮಾತ್ರವೆ ಮುಖ್ಯಾಧಿಕಾರಿಯಾಗುವ ಅರ್ಹತೆ ಹೊಂದಿದ್ದರು ರಾಜಕೀಯ ಪ್ರಭಾವ ಬಳಸಿ ಮಂಡ್ಯ ನಗರಸಭೆಗೆ ಆಯುಕ್ತರಾಗುವಲ್ಲಿ ಯಶಸ್ವಿಯಾಗಿದ್ದರು.
ಗ್ರೇಡ್ ೧ ನಗರಸಭೆಯಾಗಿರುವ ಮಂಡ್ಯ ನಗರಸಭೆಗೆ ಆಯುಕ್ತರಾಗಿರುವ ಪಂಪಾಶ್ರೀ ಸದ್ಯ ಗ್ರೇಡ್ ೨ ನಗರಸಭೆಗಳಿಗೆ ಮಾತ್ರವೆ ಆಯುಕ್ತರಾಗಲು ಅರ್ಹತೆ ಹೊಂದಿದ್ದು.ಹಾಲೀ ಮಂಡ್ಯ ನಗರಸಭೆಗೆ ಆಯುಕ್ತರಾಗಲು ಸಹ ಅಗತ್ಯ ಅರ್ಹತೆ ಹೊಂದಿಲ್ಲದಿರುವುದು ಗಮನಾರ್ಹವಾಗಿದೆ.ಲೋಕಾ ಧಾಳಿಯೊಂದಿಗೆ ಪಂಪಾಶ್ರೀ ಹಾದಿ ಸುಗಮವಾದಂತಾಗಿದೆ.


