Wednesday, July 17, 2024
spot_img

ಆದಾಯ ಮೀರಿದ ಆಸ್ತಿ ಹೊಂದಿದ್ದ ಮಂಡ್ಯ ಇಂಜಿನಿಯರ್ ಅಮಾನತ್ತು

ಮಂಡ್ಯ:ಮಾರ್ಚ್ ೨೭.ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ‌‌ ಹೊತ್ತಿರುವ ಮಂಡ್ಯ ಲೋಕೋಪಯೋಗಿ‌ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹೆಚ್.ಆರ್.ಹರ್ಷ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
ಈ ಕುರಿತು ಮಾ.26ರಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮುರುಳೀಧರ ಎಸ್. ತಳ್ಳಿಕೇರಿ ಆದೇಶ ನೀಡಿರುವ ಆದೇಶದಲ್ಲಿ ಲೋಕಾಯುಕ್ತ ಪೊಲೀಸರು ಕಳೆದ ಜ.30ರಂದು ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆಯ ಪ್ರಾಥಮಿಕ‌ ವರದಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವುದು ಸಾಬೀತಾಗಿದೆ ಎಂದಿದ್ದಾರೆ.


ಅಧಿಕಾರಿ ಹೆಚ್.ಆರ್.ಹರ್ಷ ಅವರು ಪರಿಶೀಲನಾ ಅವಧಿಯಲ್ಲಿ ₹ 1.40 ಕೋಟಿ ಆದಾಯ ಹೊಂದಿ ₹ 1,25,50,336 ಖರ್ಚು ಹೊಂದಿ ₹ 14,49,664 ಉಳಿತಾಯ‌‌ ಹೊಂದಿರುತ್ತಾರೆ. ಆದರೆ ತನಿಖೆ ವೇಳೆ ₹ 3,32,87,997 ಆಸ್ತಿಯಲ್ಲಿ ₹ 3,18,38,333 ಅಂದರೆ ಆದಾಯಕ್ಕಿಂತ ಶೇ.227.416ರಷ್ಟು ಹೆಚ್ಚುವರಿ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಲೋಕಾಯುಕ್ತ ಆರೋಪಿಸಿದೆ.
ಈ ಹಿನ್ನಲೆಯಲ್ಲಿ ಲೋಕಾಯುಕ್ತ ತನಿಖೆ‌ ಹಿನ್ನಲೆಯಲ್ಲಿ ಅಧಿಕಾರಿ ಹೆಚ್.ಆರ್.ಹರ್ಷ ಅವರನ್ನು ವಿಚಾರಣೆ ಬಾಕಿ ಇರಿಸಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13(1)(ಬಿ) ರಡಿ ಕ್ರಿಮಿನಲ್ ಮೊಕದ್ದಮೆ/ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(1) (ಎಎ)ರನ್ವಯ ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಪ್ರಭಾರ ಹುದ್ದೆಗೆ ಕಲಬುರಗಿ ಸಂಪಕಂ ಮತ್ತು ಕಟ್ಟಡಗಳು(ಈಶಾನ್ಯ) ಅವರಿಗೆ ವಹಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!