ಮಂಡ್ಯ, ಆಗಸ್ಟ್ 3: ಆಗಸ್ಟ್
5 ಮತ್ತು 6ರಂದು ಜಿಲ್ಲೆಯ ಮದ್ದೂರು, ಮಂಡ್ಯದಲ್ಲಿ ಜನಾಂದೋಲನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಕಳೆದ ಸಾಲಿನಲ್ಲಿ ನಡೆಸಿರುವ ಹಲವು ಅವ್ಯವಹಾರಗಳು, ಹಗರಣಗಳನ್ನು ಜನತೆಯ ಮುಂದಿಡುವ ಜವಾಬ್ದಾರಿಯ ಆಧಾರದ ಮೇಲೆ ಈ ಜನಾಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಜನಾಂದೋಲನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಜಿಲ್ಲೆಯ ಎಲ್ಲಾ ಶಾಸಕರುಗಳು, ಮುಖಂಡರುಗಳು, ರಾಜ್ಯಮಟ್ಟದ ನಾಯಕರುಗಳು ಮುಂತಾದವರು ಭಾಗವಹಿಸಲಿದ್ದಾರೆ ಎಂದರು.
ಆಗಸ್ಟ್ 5ರಂದು ಮದ್ದೂರು ಸ್ಟೇಡಿಯಂನಲ್ಲಿ ಜನಾಂದೋಲನ ಕಾರ್ಯಕ್ರಮ 6ರಂದು ಸರ್ಕಾರಿ ಮಹಿಳಾ ಕಾಲೇಜು (ಕಲ್ಲು ಕಟ್ಟಡ) ಮುಂಭಾಗ, ಮಂಡ್ಯ ಇಲ್ಲಿ ಜನಾಂದೋಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಆದ್ದರಿಂದ ಕಾಂಗ್ರೆಸ್ ಬಂಧುಗಳು, ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಒಂದು ಜನಾಂದೋಲನ ಸಮಾವೇಶವನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ಮುಡಾ ಅಧ್ಯಕ್ಷ ನಯೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುದ್ರಪ್ಪ, ರಮೇಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬೋರೇಗೌಡ , ನಿವೃತ್ತ ಅಧಿಕಾರಿ ಅನ್ನದಾನಿ ಇತರರು ಇದ್ದರು.