ಒಣಗುತ್ತಿರುವ ಕಬ್ಬು ಕಟಾವಿಗೆ ಸಂಘ ಒತ್ತಾಯ
ಮಂಡ್ಯ:ಮಾರ್ಚ್ -೧೧.ಭೀಕರ ಬರ ತಲೆದೋರಿ ಬೆಳೆದ ಕಬ್ಬು ಒಣಗಿ ಹಾಳಾಗುತ್ತಿದೆ ಉಳಿದ ಕಬ್ಬನ್ನಾದರೂ ಕಟಾವು ಮಾಡಿ ಬೇರೆ ಜಿಲ್ಲೆಯ ಕಾರ್ಖಾನೆಗಳಿಗೆ ಸಾಗಿಸಲು ಅನುಮತಿ ನೀಡುವಂತೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಚಾಲಕ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದ್ದಾರೆ .
ಅವರು ಮಂಡ್ಯದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ . ಮಂಡ್ಯ ಜಿಲ್ಲೆಯಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ಅರೆಯುವ ಪ್ರಕ್ರಿಯೆಯನ್ನು ನಿಲ್ಲಿಸಿವೆ. ಆದರೆ ಬರದ ಕಾರಣದಿಂದ ಒಂಬತ್ತು ಹತ್ತು ತಿಂಗಳ ಕಬ್ಬು ಒಣಗಿ ತರಗಾಗುತ್ತಿದೆ. ಇನ್ನೆರಡು ತಿಂಗಳು ಕಳೆದರೆ ಸಂಪೂರ್ಣ ಹಾಳಾಗಿ ರೈತರು ಭಾರಿ ನಷ್ಟಕ್ಕೆ ಒಳಗಾಗಬೇಕಾಗುತ್ತದೆ.
ಮುಂದೆ ಮಳೆ ಬರುವ ಯಾವ ಮುನ್ಸೂಚನೆಯೂ ಇಲ್ಲ ಕೆಆರ್‌ಎಸ್‌ನಲ್ಲಿ ನೀರು ಇಲ್ಲ ಜನರಿಗೆ ಜಾನುವಾರುಗಳಿಗೆ ಕುಡಿಯಲೂ ಸಹ ನೀರಿಲ್ಲದ ಈ ಸಂದರ್ಭದಲ್ಲಿ ಕಬ್ಬಿನ ಬೆಳೆ ಉಳಿಸಲು ನೀರು ಕೊಡಲು ಸಾಧ್ಯವೇ ?ಬೋರ್ವೆಲ್ ಗಳೆಲ್ಲ ಬತ್ತಿ ಹೋಗಿವೆ ಬೆಳೆ ಉಳಿಸಿಕೊಳ್ಳಲು ಮತ್ತೆ ರೈತ ಸಾಲ ಮಾಡಿ ಬೋರ್ ಕೊರಿಸಿದರು ಅವುಗಳಲ್ಲೂ ಸಹ ನೀರಿಲ್ಲದೆ ಸ್ಥಗಿತವಾಗಿವೆ. ಇಂತಹ ಸಂದರ್ಭದಲ್ಲಿ .
ಮೈಸೂರು ಜಿಲ್ಲೆ ನಂಜನಗೂಡಿನ ಬನ್ನಾರಿಯಮ್ಮ ಸಕ್ಕರೆ ಕಾರ್ಖಾನೆ, ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರೆದಿದ್ದು ಈ ಕಾರ್ಖಾನೆಗೆ ಮಂಡ್ಯ ಜಿಲ್ಲೆಯ ಕಬ್ಬು ಕಡಿಯಲು ತಯಾರಿರುವ ರೈತರ ಕಬ್ಬನ್ನು ಕಟಾವು ಮಾಡಿಸಿ ಸಾಗಿಸಲು ಜಿಲ್ಲಾಡಳಿತ ಜವಾಬ್ದಾರಿ ನಿರ್ವಹಿಸಬೇಕು ಜಿಲ್ಲೆಯ ಕಬ್ಬನ್ನು ಕಟಾವು ಮಾಡದಂತೆ ಅಡ್ಡಿಪಡಿಸುತ್ತಿರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಸೇರಿದಂತೆ ಇತರೆ ಕಾರ್ಖಾನೆಗಳವರಿಗೆ ಸೂಕ್ತ ನಿರ್ದೇಶನ ನೀಡಿ ರೈತರು ಯಾವ ಕಾರ್ಖಾನೆಗಾಗಲಿ ಅಲೆಮನೆಗಳಿಗಾಗಲಿ ಕಬ್ಬು ಕಟಾವು ಮಾಡಿ ಸಾಗಿಸಲು ಯಾರು ಅಡ್ಡಿಪಡಿಸಬಾರದೆಂದು ಎಚ್ಚರಿಕೆ ನೀಡಬೇಕು ಇಲ್ಲವೇ ನೋಂದಣಿ ಮಾಡಿಕೊಂಡಿರುವ ಕಬ್ಬು ಬರದಿಂದ ಒಂದು ರೀತಿ ಬೆಂಕಿ ಅವಘಡದ ರೀತಿ ಹಾನಿ ಆಗಿರುವುದರಿಂದ ಸಂಬಂಧಪಟ್ಟ ಕಾರ್ಖಾನೆ ಅವರೇ ನಮ್ಮ ಕಬ್ಬು ಕಟಾವು ಮಾಡಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು ಇಲ್ಲವೇ ಕಳೆದ ಸಾಲಿನಲ್ಲಿ ಸರಬರಾಜು ಮಾಡಿರುವಷ್ಟು ಅಥವಾ ಎಕರೆಗೆ ಅಂದಾಜು ಇಳುವರಿಗಳಷ್ಟು ಕಬ್ಬಿಗೆ ಪರಿಹಾರವನ್ನು ಕೊಡಿಸಲು ಜಿಲ್ಲಾ ಆಡಳಿತ ಮುಂದಾಗಬೇಕೆಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಸಕ್ಕರೆ ಆಯುಕ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ನಿಯೋಗದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಸತೀಶ್ NT. ಮಲ್ಲೇಶ್ ಚೌಡಯ್ಯ ಮರಿಲಿಂಗೇಗೌಡ .ಉಮೇಶ್ .
ನಾಗರಾಜ್.
ರಾಜಶೇಖರ್.
ಹನುಮಂತೇಗೌಡ .ಚೆಲುವ ಶಿವಲಿಂಗೇಗೌಡ ಪ್ರಸನ್ನ ಗಿರೀಶ್ ನಾಗೇಂದ್ರ ಧರ್ಮಲಿಂಗಮ್ ಉಪಸ್ಥಿತರಿದ್ದರು