ಮಾನ್ಯರೇ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು, ಕೆಲವು ಮಂಡ್ಯ ಜಿಲ್ಲೆಯ ಶಾಸಕರು ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಇಂಡಿಯಾ ಒಕ್ಕೂಟದ ಹಿಂದುಳಿದ ರಾಜ್ಯಗಳಾದ ಉತ್ತರಖಾಂಡ , ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರಿನಲ್ಲಿ ಕೊಳಕು ಹೆಚ್ಚಿಸುವ ಗಂಗಾರತಿ ಕಾರ್ಯಕ್ರಮ ನೋಡಿಕೊಂಡು ಬಂದು ಅದೇ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಆರತಿ ಮಾಡಲು ಮುಂದಾಗಿರುವುದನ್ನು ಪತ್ರಿಕೆಗಳಲ್ಲಿ ನೋಡಿ ಆಘಾತವಾಗಿದೆ.
ವಿಶ್ವ ಮಾನವ *ಕುವೆಂಪು ರವರ* ಕೆಲವು ಸಾಲುಗಳನ್ನು ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇವೆ…
“ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು/
ದಕ್ಷಿಣದ ದೇಶಕದು ಕುದುರೆಯಹುದೆ?”
“ಗಂಗಾ ಮಾತ್ರ ಯಾಕೆ ಪವಿತ್ರ? ನಮ್ಮ ಮಲೆನಾಡಿನ ತುಂಗಾ ಪವಿತ್ರ ಅಲ್ಲವೇ?”
ಈಗಾಗಲೇ ಇಂಡಿಯಾ ಒಕ್ಕೂಟದಲ್ಲಿ ಕೇಂದ್ರ ಸರ್ಕಾರಕ್ಕೆ ಸರ್ವಾಧಿಕಾರ ಇರುವುದರಿಂದ ನಮ್ಮ ಕನ್ನಡನಾಡು ನುಡಿ ಆಚರಣೆಗಳಿಗೆ ಅವಕಾಶ ಕೊಡದೆ ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಸಾವಿರಾರು ಕೋಟಿ ವ್ಯಯಿಸುತ್ತಿರುವಾಗ , ಕರ್ನಾಟಕ ಸರ್ಕಾರ ಕೂಡ ನಾರ್ತ್ ಇಂಡಿಯಾದ ಹಿಂದಿ ಮತ್ತು ಸಂಸ್ಕೃತ ಆಚರಣೆಗಳ ಹೇರಿಕೆಗೆ ಹಣ ವ್ಯಯಿಸುವುದು ತಪ್ಪು ನಡೆಯಾಗಿದೆ. ಆದ್ದರಿಂದ ಈ ನಡವಳಿಕೆಯನ್ನು ಕೈ ಬಿಟ್ಟು ಅದರ ಬದಲಿಗೆ ಕಾವೇರಿ ನದಿ ತೀರದಲ್ಲಿ ಪ್ರತಿ ದಸರಾ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳ ಕರೆಯಿಸಿ *ಬಸವಣ್ಣನವರ* ವಚನಗಳ ಸಮಾಲೋಚನೆ ಕಾರ್ಯಕ್ರಮ ನಡೆಸಬೇಕು ಇದರ ಮೂಲಕ ಅಸ್ಪೃಶ್ಯತೆ, ಜಾತಿ ಅಸಮಾನತೆ ಮತ್ತು ನದಿ ನೀರನ್ನು ಕಲುಷಿತಗೊಳಿಸುವಿಕೆಯನ್ನು ತಡೆಗಟ್ಟಬೇಕು.
ಈಗಾಗಲೇ ನಾರ್ತ್ ಇಂಡಿಯಾದವರ ಅಪಾರ ವಲಸೆಯಿಂದ ಸ್ಥಳಿಯರಾದ ಕನ್ನಡದವರಿಗೆ ಅವಕಾಶ ಸಿಗದೆ ಪೇಚಾಡುವಂತಾಗಿರುವುದರಿಂದ ಶ್ರೀರಂಗಪಟ್ಟಣ ದಸರಾದಲ್ಲಿ ಯಾವ ಕಾರಣಕ್ಕೂ ಹಿಂದಿ ಭಾಷೆಗೆ, ಹಿಂದಿ ಕಲಾವಿದರಿಗೆ, ಹಿಂದಿ ಗುತ್ತಿಗೆದಾರರಿಗೆ ಮತ್ತು ಹಿಂದಿ ಕೆಲಸದವರಿಗೆ ಅವಕಾಶ ಕೊಡಬಾರದು.
ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡಲು ಮತ್ತು ಶ್ರೀರಂಗಪಟ್ಟಣ ದಸರಾದಲ್ಲಿ ಹಿಂದಿ ಭಾಷೆಗೆ ಅವಕಾಶ ಕೊಡಲು ಮುಂದುವರಿದ ಪಕ್ಷದಲ್ಲಿ ಕರ್ನಾಟಕ ಸರ್ಕಾರ ಮುಜುಗರಕ್ಕೆ ಈಡಾಗುವಂತೆ ನಿರಂತರ ಪ್ರತಿಭಟನೆ ದಾಖಲಿಸುತ್ತೇವೆಂದು ಈ ಮೂಲಕ ಮಂಡ್ಯ ಜಿಲ್ಲಾಡಳಿತಕ್ಕೆ ಮತ್ತು ಕರ್ನಾಟಕ ಸರ್ಕಾರಕ್ಕೆ ಎಚ್ಚರಿಸುತ್ತಿದ್ದೇವೆ.
ಈ ವಿಚಾರವನ್ನು 23-09-2024 ರಂದು ಮಂಡ್ಯ ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ , ತಹಶೀಲ್ದಾರ್ ರೋಹಿಣಿ ರವರಿಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ಸಲ್ಲಿಸುವೆ ವೇಳೆ ಪಾಂಡವಪುರ ರಾಜೇಂದ್ರ ಸಿಂಗ್ ಬಾಬು, ಮದ್ದೂರು ಧನುಷ್ ಗೌಡ, ಜಯರಾಂ ಹೊಸೂರು ರವರು ದ್ರಾವಿಡ ಕನ್ನಡಿಗರು ಹನಕೆರೆ ಅಭಿಗೌಡ ಉಪಸ್ಥಿತರಿದ್ದರು