ಮಂಡ್ಯ: ಕಿಡ್ನಿ ವೈಫಲ್ಯಕ್ಕೆ ಮಧುಮೇಹ ರೋಗವೇ ಹೆಚ್ಚು ಕಾರಣ ಎಂದು ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂತ್ರಪಿಂಡ ವಿಭಾಗದ ಮುಖ್ಯಸ್ಥ ಡಾಕ್ಟರ್ ಬಿ ಟಿ ಅನಿಲ್ ಕುಮಾರ್ ತಿಳಿಸಿದರು .
ಮಂಡ್ಯದ ಪತ್ರಕರ್ತರ ಭವನದಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಕಿಡ್ನಿ ವೈಫಲ್ಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶದಲ್ಲಿ ಡಯಾಬಿಟಿಸ್ ರೋಗಿಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು ಮುಖ್ಯವಾಗಿ ಕಿಡ್ನಿ ವೈಫಲ್ಯಕ್ಕೆ ಡಯಾಬಿಟಿಸ್ ಕಾರಣ ಎಂದರು .
100 ಮಂದಿ ಮಧುಮೇಹಿಗಳಲ್ಲಿ ಸುಮಾರು 18 ಜನರಿಗೆ ಕಿಡ್ನಿ ವಿಫಲತೆ ಕಂಡು ಬರಬಹುದು. ಕಿಡ್ನಿ ವೈಫಲ್ಯಕ್ಕೆ ಕಿಯಾಟಿನ್ ಪರೀಕ್ಷೆ ಮಾಡಿಸಿದ ನಂತರ ಈ ರೋಗಕ್ಕೆ ಚಿಕಿತ್ಸೆ ನೀಡಬಹುದು ಎಂದು ತಿಳಿಸಿದರು.
ಒತ್ತಡದಿಂದಲೂ ಕಿಡ್ನಿ ಸಮಸ್ಯೆ ಎದುರಾಗಬಹುದು. ಈ ರೋಗ ಕೊನೆ ಸ್ಟೇಜಿಗೆ ಬಂದಾಗ ಅರಿವಾಗುತ್ತದೆ ಎಂದು ತಿಳಿಸಿದರು. ಭಾರತದಲ್ಲಿ 10 ಲಕ್ಷ ಮಂದಿಗೆ 800 ಜನರಲ್ಲಿ ಕಿಡ್ನಿ ಸಮಸ್ಯೆ ಕಂಡು ಬರುತ್ತದೆ. ಐದು ಹಂತದಲ್ಲಿ ಈ ಸಮಸ್ಯೆ ಬರುತ್ತದೆ. ಕಿಡ್ನಿ ವೈಫಲ್ಯಕ್ಕೆ ಜೀವಿತಾವಧಿ ಡಯಾಲಿಸಿಸ್ ಮಾಡಿಸಬೇಕಾಗುತ್ತದೆ. ಆದರೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿದರೆ ಡಯಾಲಿಸಿಸ್ ಸಮಸ್ಯೆ ಎದುರಾಗುವುದಿಲ್ಲ ಎಂದರು .
10 ವರ್ಷದ ಹಿಂದೆ ಟ್ರಾನ್ಸ್ ಪ್ಲಾಂಟ್ ಸೌಲಭ್ಯ ಇರಲಿಲ್ಲ. ಈಗ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಈ ಸೌಲಭ್ಯಗಳಿದೆ ಎಂದು ತಿಳಿಸಿದರು .
ಹಿಮೋ ಮತ್ತು ಪೆರಿಟೋರಿಯಲ್ ಎನ್ನುವ ಎರಡು ಬಗೆಯಲ್ಲಿ ಡಯಾಲಿಸಿಸ್ ಮಾಡಬಹುದು. ಇದಕ್ಕಿಂತ ಉತ್ತಮ ಎಂದರೆ ಕಿಡ್ನಿ ಕಸಿ ಮಾಡಿಸುವುದು ಎಂದರು. ವ್ಯಕ್ತಿಯ ಬ್ರೈನ್ ಡೆಡ್ ಆದಾಗ ಅವರ ಕುಟುಂಬದವರು ಸಮಲೋಚನೆ ನಡೆಸಿ ಅಂಗಾಂಗವನ್ನು ದಾನ ಮಾಡಿದರೆ ಅದನ್ನು ತೆಗೆದುಕೊಳ್ಳಬಹುದು. ಭಾರತದಲ್ಲಿ ಒಂದೇ ಕುಟುಂಬದವರಿಂದ ಕಿಡ್ನಿ ಪಡೆದು ಟ್ರಾನ್ಸ್ ಪ್ಲಾಂಟ್ ಮಾಡಲಾಗುತ್ತಿದೆ ಎಂದರು .
ಬೆಂಗಳೂರು ,ಮೈಸೂರು, ಗುಲ್ಬರ್ಗ ,ಮಂಗಳೂರು ಸೇರಿದಂತೆ ಐದು ವಲಯಗಳಲ್ಲಿ ಕಿಡ್ನಿ ದಾನ ಮಾಡುವವರು ಹೆಸರನ್ನು ನೋಂದಣಿ ಮಾಡಬಹುದು ಎಂದು ತಿಳಿಸಿದ ಅವರು,ಒಂದು ವ್ಯಕ್ತಿಗೆ ಕಿಡ್ನಿ ಕಸಿ ಮಾಡಲು ಐದು ವರ್ಷ ಕಾಯಬೇಕಾಗುತ್ತದೆ ಎಂದರು .
ಕಿಡ್ನಿ ಕಸಿ ಮಾಡುವುದರಿಂದ ಸಾಮಾನ್ಯ ವ್ಯಕ್ತಿಯಂತೆ ಜೀವನ ಸಾಗಿಸಬಹುದು. ಎಲ್ಲಾ ಕೆಲಸಗಳನ್ನು ಮಾಡುವ ಶಕ್ತಿ ಇರುತ್ತದೆ. ಜೊತೆಗೆ ಔಷಧಿಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕು .ಇಲ್ಲದಿದ್ದಲ್ಲಿ ತೊಂದರೆ ಆಗುತ್ತದೆ ಎಂದರು. ಡಾಕ್ಟರ್ ನರೇಂದ್ರ ಅವರು ಮಾತನಾಡಿ ,ನಾವು 1500 ಕಿಡ್ನಿಯನ್ನು ಕಸಿ ಮಾಡಿದ್ದೇವೆ. ಚುಂಚನಗಿರಿಯಲ್ಲಿ ಕಿಡ್ನಿ ಕಸಿ ಮಾಡಲು ಉತ್ತಮ ಸೌಲಭ್ಯಗಳಿದ್ದು, ಇಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು. ಕಿಡ್ನಿ ಸಮಸ್ಯೆಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಪರಿಹಾರವಿದೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾಕ್ಟರ್ ಶಿವಕುಮಾರ್, ಡಾಕ್ಟರ್ ಅನಿಲ್, ಕಿಡ್ನಿ ಕಸಿ ಮಾಡಿಸಿಕೊಂಡ ವ್ಯಕ್ತಿಗಳಾದ ಹೇಮಂತ್ ಕುಮಾರ್,ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕರ್ತರ ಸಂಘದ ಅಧ್ಯಕ್ಷರಾದ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ನವೀನ್, ಪ್ರಧಾನ ಕಾರ್ಯದರ್ಶಿ ಆನಂದ್, ಖಜಾಂಚಿ ನಂಜುಂಡಸ್ವಾಮಿ ಸೇರಿದಂತೆ ಇತರರಿದ್ದರು.