ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ
‘ಗಣಿಗಾರಿಕೆ ನಿಷೇಧಿಸಿ ಕೆಆರ್ ಎಸ್ ಉಳಿಸಿ’ ಎಂದು
ಆಗ್ರಹಿಸಿ ಜೂನ್ 29ರಂದು ಶನಿವಾರ ಬೆಳಗ್ಗೆ 10ಕ್ಕೆ ನಗರದ ಗಾಂಧಿ ಭವನದಲ್ಲಿ ಕಾವೇರಿ ಜಲಾನಯನ ಪ್ರದೇಶದ ಚಳುವಳಿಗಳ ಪ್ರತಿನಿಧಿಗಳು ಹಾಗೂ ನಾಡಿನ ಹಿತಚಿಂತಕರ ದುಂಡುಮೇಜಿನ ಸಭೆ ಆಯೋಜಿಸಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾಡಳಿತ ಸದ್ದಿಲ್ಲದೇ ಕೆಆರ್ ಎಸ್ ಜಲಾಶಯದ ಬಳಿ ನಡೆಸಲು ಉದ್ದೇಶಿಸಿರುವ ಟ್ರಯಲ್ ಬ್ಲಾಸ್ಟ್ ಕುರಿತು ಚರ್ಚೆ ಕೂಡ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ-9945302066, 8867626915, 9844133340ನ್ನು ಸಂಪರ್ಕಿಸಬಹುದು.