ವರದಿ:ಮಹಂತೇಶ
ಗ್ಯಾರಂಟಿ ಸಮಾವೇಶವೋ..ಕಾಂಗ್ರೇಸ್ ಪಕ್ಷದ ಸಮಾವೇಶವೋ
ಮಂಡ್ಯ:ಮಾರ್ಚ್ 13.ನಗರದಲ್ಲಿ ಇಂದು ಜಿಲ್ಲಾಡಳಿತ ನಡೆಸಿದ ರಾಜ್ಯ ಸರಕಾರದ ಗ್ಯಾರಂಟಿ ಸಮಾವೇಶ ಅಕ್ಷರಶಃ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಪ್ರಚಾರ ಸಭೆಯಾಗಿ ರೂಪಿಸಲಾಗಿತ್ತು.
ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಫಲಾನುಭವಿಗಳ ಸಮಾವೇಶವನ್ನು ಮಂಡ್ಯದ ಮಂಡ್ಯ ವಿವಿ ಆವರಣದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿತ್ತು.ಸಮಾವೇಶದಲ್ಲಿ ಯೋಜನೆಯ ಕುರಿತು ಚರ್ಚಿಸಿದ್ದಕ್ಕಿಂತ ಮುಂಬರುವ ಲೋಕಸಭಾ ಚುನಾವಣಾ ಪ್ರಚಾರವನ್ನು ಸರಕಾರಿ ವೆಚ್ಚದಲ್ಲಿ ಆರಂಭಿಸಿದಂತಿತ್ತು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಭಾಷಣದುದ್ದಕ್ಕು ವಿಪಕ್ಷ ಬಿಜೆಪಿ ಜ್ಯಾದಳ ಟೀಕೆಗೆ ಮೀಸಲಿಟ್ಟರು.ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕೃತ ವೇದಿಕೆಯಲ್ಲಿ ರಾರಾಜಿಸುತ್ತಿದ್ದರು.ಲೋಕಸಭಾ ಚುನಾವಣೆಯ ಮಂಡ್ಯ ಕ್ಷೇತ್ರದ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ವೇದಿಕೆಯ ಮುಂಭಾಗದಲ್ಲೆ ಅಸೀನರಾಗಿದ್ದರು. ಸಿಎಂ ಆಪ್ತ ಬಿ.ಎಸ್ ಶಿವಣ್ಣ ಸಹ ವೇದಿಕೆಯಲ್ಲಿ ರಾರಾಜಿಸುತ್ತಿದ್ದರು.ಸ್ಟಾರ್ ಚಂದ್ರುವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಅಧಿಕೃತವಾಗಿಯೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಘೋಷಣೆ ಮಾಡಿದರು.ಸರಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪ್ರಚಾರ ನಡೆಸುತ್ತಿದ್ದಾಗ ಜಿಲ್ಲಾಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು.
ಸಿದ್ದರಾಮಯ್ಯನವರು ಮಾತು ಆರಂಭಿಸುತ್ತಿದ್ದಂತೆ ಸಭಾಂಗಣದಿಂದ ಜನರು ಕಾಲ್ತೆಗೆಯುತ್ತಿದ್ದರು.ಇದನ್ನು ಗಮನಿಸಿದ ಸಚಿವ ಚಲುವರಾಯಸ್ವಾಮಿ ಸಭೆಯಿಂದ ತೆರಳದಂತೆ ಮನವಿ ಮಾಡಿದರು ಜನರು ತಮ್ಮ ಪಾಡಿಗೆ ಜಾಗ ಖಾಲಿ ಮಾಡಿ ತೆರಳುತ್ತಿದ್ದರು.ಇದರ ನಡುವೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರು ನೇರಪಾವತಿಗೆ ಆಗ್ರಹಿಸಿ ಘೋಷಣೆ ಕೂಗಿದರು.ಸಿದ್ದರಾಮಯ್ಯನವರು ಘೋಷಣೆ ನಿಲ್ಲಿಸುವಂತೆ ಹೇಳಿ ನೇರಪಾವತಿ ಮಾಡುವುದಾಗಿ ಹೇಳಿ ಮಾತು ಮುಂದುವರಿಸಿದರು.
ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ನಡೆಯುತ್ಕ್ತಿದ್ದ ಸಮಾವೇಶಕ್ಕೆ ಬಸ್ ಗಳ ಮೂಲಕ ಜನರನ್ನು ಕರೆತಂದಿದ್ದ ಕಾಂಗ್ರೆಸ್ ಮುಖಂಡರು ಬಸ್ಸಿನೊಳಗೆ ಬಂದಿದ್ದವರಿಗೆ ತಲಾ ಮೂರು ನೂರು ರೂಗಳನ್ನು ಹಂಚಿಕೆ ಮಾಡುತ್ತಿದ್ದುದು ಸಮಾವೇಶದಲ್ಲಿ ಕಂಡುಬಂದಿತು ಸಮಾವೇಶವನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ನಡೆ ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೇಸ್ ಸಮಾವೇಶದಂತೆ ನಡೆದರೂ ಅಧಿಕಾರಿಗಳು ಅಸಹಾಯಕರಾಗಿದ್ದು ಕಂಡುಬಂತು