Thursday, April 18, 2024
spot_img

ಗ್ರಾಮ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

ಮಂಡ್ಯ.ಫೆ.23(ಕರ್ನಾಟಕವಾರ್ತೆ):- ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿಯ ಸೂನಗನಹಳ್ಳಿ ವೃತ್ತ, ಬೇವಿನಹಳ್ಳಿ ವೃತ್ತ, ಬಸರಾಳು ಹೋಬಳಿಯ ಮುತ್ತೇಗೆರೆ ವೃತ್ತ ಮತ್ತು ಕಸಬಾ ಹೋಬಳಿಯ ಮಂಡ್ಯ ವೃತ್ತ ಸೇರಿ ಒಟ್ಟು ನಾಲ್ಕು ಗ್ರಾಮ ಸಹಾಯಕ ಹುದ್ದೆಗಳು ಖಾಲಿ ಇರುತ್ತವೆ. ಈ ನಾಲ್ಕು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವವರು ಚೆನ್ನಾಗಿ ಓದಲು ಹಾಗೂ ಬರೆಯಲು ಬಲ್ಲಂತಹ ವಿದ್ಯಾವಂತರಾಗಿರಬೇಕು. ಅರ್ಜಿದಾರರು ಖಾಲಿ ಇರುವ ಗ್ರಾಮ ಸಹಾಯಕ ಹುದ್ದೆಯ ವೃತ್ತಗಳ ನಿವಾಸಿಯಾಗಿದ್ದು, ಕೇಂದ್ರ ಸ್ಥಾನದಲ್ಲಿಯೇ ವಾಸವಾಗಿರಬೇಕು. ಗ್ರಾಮ ಸಹಾಯಕ, ತಳವಾರರು, ತೋಟಿ, ನೀರುಗಂಟಿ, ವಾಲಿರ‍್ಸ್, ಮರ‍್ಸ್, ಬರ್‌ರ‍್ಸ್, ತಳಾರಿಸ್, ಸೇತ್ ಸಂದೀಸ್, ನೀರಾಡಿಗಳು, ಬಲೂತಿದರ‍್ಸ್, ವೆಟ್ಟಿ, ಉರ್‌ಗಾನಿನ್ಸ್ ಹಾಗೂ ಕುಳವಾಡಿಕೆ ಕುಟುಂಬ ವರ್ಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅರ್ಜಿದಾರರಿಗೆ ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ ಕನಿಷ್ಠ 25 ವರ್ಷ ವಯಸ್ಸು ತುಂಬಿರಬೇಕು.

ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾರ್ಚ್ 7 ರಂದು ಕೊನೆಯ ದಿನಾಂಕವಾಗಿದ್ದು, ಮಂಡ್ಯ ತಾಲ್ಲೂಕು ಕಛೇರಿಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸತಕ್ಕದ್ದು, ನಿಗಧಿತ ದಿನಾಂಕದ ನಂತರ ಸ್ವೀಕೃತಿಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡ್ಯ ತಾಲ್ಲೂಕಿನ ತಹಶಿಲ್ದಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles