ಪಾಂಡವಪುರ, ಜೂನ್ ೨೩:ಸಾಲದ ಬಾಧೆ ತಾಳಲಾರದೇ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬ್ಯಾಟೆತಿಮ್ಮನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಕರಿಬೋರೇಗೌಡ ಅವರ ಪುತ್ರ
ಪುರುಷೋತ್ತಮ್ (42) ಎಂಬಾತ ಆತ್ಮಹತ್ಯೆಗೆ ಶರಣಾಗಿರುವ ರೈತ.
ಮೃತ ರೈತ ಪುರುಷೋತ್ತಮ್ ಅವರು ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಹಾಲಿ ವಾಸವಿದಗದರು. ಬ್ಯಾಟೆತಿಮ್ಮನ ಕೊಪ್ಪಲ್ ಬಳಿ 20 ಗುಂಟೆ ಜಮೀನು ಹೊಂದಿದ್ದ ಪುರುಷೋತ್ತಮ್ ಬೆಳೆ ಸಾಲ 6ಲಕ್ಷ ರೂ.ಗಳನ್ನು ಕ್ಯಾತನಹಳ್ಳಿ ಎಸ್ ಬಿಐ ಬ್ಯಾಂಕ್ ನಲ್ಲಿ ಪಡೆದಿದ್ದರು. ಸಾಲಬಾಧೆಯಿಂದಾಗಿ ಜಮೀನಿನ ಬಳಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
ಶನಿವಾರ ಸಂಜೆ 4ಕ್ಕೆ ಮೃತರ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.