Friday, March 21, 2025
spot_img

ಪೌರಕಾರ್ಮಿಕರ ಪರ ಸದನದಲ್ಲಿ ದನಿ ಎತ್ತುವೆ:ಶಾಸಕ ರವಿಕುಮಾರ್ ಘೋಷಣೆ

 

ಪೌರಕಾರ್ಮಿಕರ ನೇಮಕಾತಿಗೆ ಸದನದಲ್ಲಿ ದನಿ ಎತ್ತುವೆ:ಶಾಸಕ ಗಣಿಗ ರವಿಕುಮಾರ್ ಘೋಷಣೆ

ಮಂಡ್ಯ: ಫೆ೧೪. ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರ ಸಂಪೂರ್ಣ ನೇಮಕಾತಿಗಾಗಿ ಸದನದಲ್ಲಿ ದನಿ ಎತ್ತುವೆ ಎಂದು ಶಾಸಕ ಗಣಿಗ ರವಿಕುಮಾರ್ ಘೋಷಿಸಿದರು.

ನಗರಸಭೆ ಸಭಾಂಗಣಾದಲ್ಲಿ ಜಿಲ್ಲಾ ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು ಪೌರಕಾರ್ಮಿಕರು ಬಿಸಿಲು ಮಳೆ ಎನ್ನದೆ ದುಡಿಯುತ್ತಿದ್ದಾರೆ.ಈ ಕಾರ್ಮಿಕರನ್ನು ಸಂಪೂರ್ಣವಾಗಿ ನೇಮಕಾತಿಗೊಳಿಸುವುದು ಹಾಗೂ ನಗದು ರಹಿತ ಜ್ಯೋತಿ ಸಂಜೀವಿನಿ ಚಿಕಿತ್ಸೆ ವ್ಯಾಪ್ತಿಗೆ ತರುವ ಬೇಡಿಕೆ ನ್ಯಾಯಯುತವಾಗಿದೆ.ಈ ಕುರಿತು ಸದನದಲ್ಲಿ ದನಿ ಎತ್ತುವೆ.ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರು.ನೀರು ಸರಬರಾಜು ಸಹಾಯಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕಿದೆ.ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ ಈ ನೌಕರರ ನೇರಪಾವತಿಗೆ ನಡೆಸುತ್ತಿರುವ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು

ಮಂಡ್ಯ ನಗರದ ಸ್ವಂತ ಮನೆಯಿಲ್ಲದವರಿಗೆ ಐದು ಸಾವಿರ ಮನೆಗಳನ್ನು ವಿತರಿಸುವ ಉದ್ದೇಶವನ್ನು ತಾವು ಹೊಂದಿದ್ದು ಮೊದಲ ಹಂತದಲ್ಲಿ ಆರು ನೂರು ಮನೆಗಳು ಕೆರೆಯಂಗಳದಲ್ಲಿ ಸಿದ್ದವಿದ್ದು.ಅಗತ್ಯ ಪ್ರಕ್ರಿಯೆ ನಡೆಸಿ ಹಂತ ಹಂತವಾಗಿ ಎಲ್ಲರಿಗೂ ಮನೆಗಳನ್ನು ವಿತರಿಸುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ಪೌರಕಾರ್ಮಿಕರಿಗೆ ಐದು ಲಕ್ಷದವರೆಗೆ ಉಚಿತ ಚಿಕಿತ್ಸೆ ಒದಗಿಸುವ ಎಸ್ ಬಿ ಐ ವಿಮಾ ಚೀಟಿಗಳನ್ನು ಅವರು ವಿತರಿಸಿದರು.

ಪ್ರಾಸ್ತವಿಕವಾಗಿ ಮಾತನಾಡಿದ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ. ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ನೇರಪಾವತಿಯನ್ನು ಈ ಬಜೆಟ್ ನಲ್ಲಿ ಘೋಷಿಸಲು ಮುಖ್ಯಮಂತ್ರಿಗಳ ಮೇಲೆ ಸಂಘಟಿತ ಒತ್ತಡ ಹೇರಬೇಕಿದೆ.ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿಯನ್ನು ಈವರೆಗೆ ಅಗತ್ಯಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಿಲ್ಲ.ಪರಿಣಾಮವಾಗಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯ ಪ್ರಮಾಣದ ಸಿಬ್ಬಂದಿ ಇಲ್ಲವಾಗಿದೆ.ಬಹುತೇಕ ಹೊರಗುತ್ತಿಗೆ ನೌಕರರು ನಿವೇಶನರಹಿತರಾಗಿದ್ದು ಆದ್ಯತೆಯ ಮೇಲೆ ಈ ಕಾರ್ಮಿಕರಿಗೆ ಸ್ವಂತ ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಸಫಾಯಿ ಕರ್ಮಚಾರಿ ಉಸ್ತುವಾರಿ ಸಮಿತಿ ಸದಸ್ಯರು ಇಡೀ ಜಿಲ್ಲೆಯಲ್ಲಿ ಪೌರಕಾರ್ಮಿಕರ ಒಳಿತಿಗಾಗಿ ಶ್ರಮವಹಿಸಿ ದುಡಿಯಬೇಕೆಂದು ಕರೆ ನೀಡಿದರು.

ಸಫಾಯಿ ಕರ್ಮಚಾರಿ ಜಿಲ್ಲಾ ಉಸ್ತುವಾರಿ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡ ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎನ್ ನಾಗರಾಜೂಗೆ ಶಾಸಕರು ನೇಮಕಾತಿ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಆಯುಕ್ತೆ ಪಂಪಶ್ರೀ.ನಗರಸಭಾ ಸದಸ್ಯರಾದ ಜಾಕೀರ್.ಭಾರತೀಶ.ರವಿ.ಗೀತಾ.ಮಾಜಿ ನಗರಸಭಾ ಅಧ್ಯಕ್ಷ ಮಂಜು.ಪೌರಕಾರ್ಮಿಕರ ಸಂಘದ ಮುಖಂಡರಾದ ಮುತ್ತಾಲಯ್ಯ.ನಂಜುಂಡ.ಮಹಾದೇವ. ಲೋಕನಾಥ್.ಬನ್ನಯ್ಯ.ರಾಜೇಶ್.ಶಿವ.ವಾಹನ ಚಾಲಕರ ಸಂಘದ ಚನ್ನೇಶ್.ದಿನೇಶ್.ಮೊದಲಾದವರಿದ್ದರು.ಸಾಂಸ್ಕೃತಿಕ ಸಂಘಟನೆಯ ಟಿ.ಡಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!