ಬೆಂ-ಮೈ ಹೆದ್ದಾರಿ ನಿಯಮ ಉಲ್ಲಂಘನೆ ಪತ್ತೆಗೆ ದಿಕ್ಸೂಚಿ ಬಳಕೆ:ವಾಹನದ ಮಾಲೀಕರ ಮೊಬೈಲ್ ಗೆ ಬರಲಿದೆ ದಂಡದ ನೋಟಿಸು
ಮಂಡ್ಯ: ಮೇ.೩೧.ಇನ್ನು ಮುಂದೆ ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಹಾದುಹೋಗುವ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದರೆ ನಿಮ್ಮ ಮೊಬೈಲಿಗೆ ಬರಲಿದೆ ದಂಡದ ಸಂದೇಶ.
ಹೌದು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಿಪರೀತ ಅಪಘಾತಗಳು ಸಾಮಾನ್ಯವಾಗಿ ನೂರಾರು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಅತೀ ವೇಗದ ಚಾಲನೆ.ನಿರ್ಲಕ್ಷದ ಚಾಲನೆ ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳು ನಿರಂತರವಾಗಿ ನಡೆಯುತ್ತಿದ್ದವು.
ಇದಕ್ಕೆ ಕಡಿವಾಣ ಹಾಕಲು ಪೋಲಿಸರು ಸಾಕಷ್ಟು ಶ್ರಮವಹಿಸಿದ್ದರು ಸವಾರರ ವೇಗಕ್ಕೆ ಬ್ರೇಕ್‌ಹಾಕಲು ಸಾಧ್ಯವಾಗಿರಲಿಲ್ಲ. ಈಗ ಅದಕ್ಕಾಗಿ ಮಂಡ್ಯ ಜಿಲ್ಲಾ ಪೋಲಿಸರು ಚಳಕದ (ತಂತ್ರಜ್ಞಾನ) ಮೊರೆ ಹೋಗಿದ್ದಾರೆ.
ಹೆದ್ದಾರಿಹಾದು ಹೋಗುವ
ಮಂಡ್ಯ ಜಿಲ್ಲಾ ವ್ಯಾಪ್ತಿಯ ಐದು ಸ್ಥಳಗಳಲ್ಲಿ ದಿಕ್ಕು ತಿಳಿಸುವ ಯಂತ್ರದ (ರೇಡಾರ್) ಮೂಲಕ ನಿಯಮ ಉಲ್ಲಂಘನೆಯನ್ನು ಪತ್ತೆ ಮಾಡಲಾಗುವುದು.
ಕಟ್ಟುಪಾಡು ಮೀರಿದ ವಾಹನಗಳ ಮಾಲೀಕರ ಮೊಬೈಲ್ ಸಂಖ್ಯೆಗೆ ದಂಡದ ಸಂದೇಶ ತಲುಪಲಿದೆ.ಸ್ಥಳದಲ್ಲಿ ಇಲ್ಲವೆ ಈ ಕೆಳಗಿನ ಲಿಂಕ್ ಮೂಲಕ ಮಾಲೀಕರು ಹಾಗೂ ಚಾಲಕರು ದಿನಾಂಕ: 01-06-2024 ರಿಂದ ಸ್ಥಳದಲ್ಲಿ ದಂಡ ಪಾವತಿ ಹಾಗೂ ಆನ್ ಲೈನ್ https://payfine.mchallan.com:72715 ಮಾಡಬಹುದಾಗಿರುತ್ತದೆ ಎಂದು ಜಿಲ್ಲಾ ಪೋಲಿಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಈ ದಿಕ್ಸೂಚಿಯಿಂದ ೭೮ ಸಾವಿರಕ್ಕು ಅಧಿಕ ನಿಯಮ ಉಲ್ಲಂಘನೆ ಪ್ರಕರಣಗಳು ಒಂದೇ ತಿಂಗಳಿನಲ್ಲಿ ವರದಿಯಾಗಿವೆ ಎನ್ನಲಾಗಿದೆ.
ಒಟ್ಟಿನಲ್ಲಿ ನೂತನ ಚಳಕದ ಕಾರಣವಾಗಿಯಾದರೂ ಹೆದ್ದಾರಿಯಲ್ಲಿ ಅಪಘಾತ ನಿಯಂತ್ರಣಕ್ಕೆ ಬರುವುದೆ ಕಾದು ನೋಡಬೇಕಿದೆ