(ಮಳೆಗೆ ಜರ್ಮನ್ ಮಾದರಿಯ ಮಂಡ್ಯದ ಜಿಲ್ಲಾಧಿಕಾರಿ ಕಚೇರಿಯ ವಿಹಂಗಮ ನೋಟ:ಚಿತ್ರ ಕೃಪೆ:ವೇಣು)
: ಇಳಿ ಸಂಜೆಗೆ ತಂಪೆರೆದ ಮಳೆರಾಯ
ಮಂಡ್ಯ: ಮೇ.೩.ಬಿರು ಬಿಸಲ ಧಗೆಗೆ ಕಾವೇರಿದ ಮಂಡ್ಯ ನಗರಕ್ಕೆ ಮಳೆರಾಯ ತಂಪೆರೆದಿದ್ದಾನೆ.ಇಂದು ಸಂಜೆ ೪;೪೫ ಕ್ಕೆ ಶುರುವಾದ ಮಳೆರಾಯನ ಆರ್ಭಟ ಗುಡುಗು ಬಿರುಗಾಳಿಯೊಂದಿಗೆ ಭರ್ತಿ ಅರ್ಧಗಂಟೆಗಳ ಕಾಲ ಮುಂದುವರಿಯಿತು.
೪೫ಡಿಗ್ರಿ ಮುಟ್ಟಿದ್ದ ಮಂಡ್ಯ ನಗರಕ್ಕೆ ಮುದ ತಂದರೆ. ಬೀಸಿದಗಾಳಿಯ ಆರ್ಭಟಕ್ಕೆ ಗಿಡ ಮರಗಳು ನೆಲಕಚ್ಚಿವೆ.
ಇನ್ನು ಸಣ್ಣಗೆ ಹನಿಯುತ್ತಿರುವ ಮಳೆ ನಗರದ ವಾಸಿಗಳ ಜತೆಗೆ ನಗರದ ಆಸುಪಾಸಿನ ಗ್ರಾಮಗಳಲ್ಲು ತನ್ನ ನಗೆ ಬೀರಿದ್ದಾನೆ