ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಬೈಕ್ ಹರಿಸಿದ ಪುಂಡರು!
*ಕರ್ತವ್ಯ ನಿರತ ಮಹಿಳಾ ಟ್ರಾಫಿಕ್ ಪೊಲೀಸ್ ಪೇದೆ ಮೇಲೆ ಸ್ಕೂಟರ್ ಹ ರಿಸಿ ಪರಾರಿಯಾದ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಮಂಡ್ಯದ ಕರ್ನಾಟಕ ಬಾರ್ ಸರ್ಕಲ್ ನಲ್ಲಿ
ಇಂದು ಸಂಜೆ 7ರ ಸುಮಾರಿನಲ್ಲಿ ಘಟನೆ ನಡೆದಿದ್ದು.
ವಿರುದ್ಧ ದಿಕ್ಕಿನಲ್ಲಿ ಬಂದ ಪುಂಡರನ್ನು ತಡೆದ ಮಹಿಳಾ ಪೇದೆಯ ಮೇಲೆ ಬೈಕ್ ಹರಿಸಿ ಪುಂಡರು ಪರಾರಿಯಾಗಿದ್ದಾರೆ.ತೀವ್ರ ಗಾಯಗೊಂಡು ಕುಸಿದು ಮಹಿಳಾ ಪೇದೆಯನ್ನು ಸಾರ್ವಜನಿಕರು ರಕ್ಷಿಸಿದ್ದಾರೆ.
ನಂತರ ಸ್ಥಳಕ್ಕೆ ಬಂದ ಪೋಲಿಸರು ಚಿಕಿತ್ಸೆಗಾಗಿ ಗಾಯಗೊಂಡ ಪೇದೆಯನ್ನು ಕರೆದೊಯ್ದರು.ಪುಂಡರ ಹುಡುಕಾಟಕ್ಕೆ ಪೋಲಿಸರು ಮುಂದಾಗಿದ್ದಾರೆ