Friday, March 21, 2025
spot_img

ಮಂಡ್ಯ:ತಮ್ಮನ ಕೊಲೆಗೆ ಅಣ್ಣನ ವೀಳ್ಯ.೮ ಮಂದಿ ಆರೋಪಿಗಳ ಬಂಧನ

ಮಂಡ್ಯ :- ಲಕ್ಷ್ಮಿ ಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದ್ದ ಕೃಷ್ಣೇಗೌಡ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ತಮ್ಮನ ಕೊಲೆಗೆ ಅಣ್ಣನೇ ಸುಫಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಕೆ ಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದು, ತಮ್ಮ ಕೃಷ್ಣೇಗೌಡನ ಕೊಲೆಗೆ  ಅಣ್ಣ  ಗುಡ್ಡಪ್ಪ ಶಿವನಂಜೇಗೌಡ  5 ಲಕ್ಷ ಸುಪಾರಿ  ನೀಡಿದ್ದು, ಎಲ್ಲಾ ಸುಪಾರಿ ಹಂತಕರನ್ನು ಬಂದಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.
ಮಳವಳ್ಳಿ ತಾಲೂಕು ನಿಟ್ಟೂರು ಗ್ರಾಮದ ಲೇಟ್ ಸ್ವಾಮಿರ ಪುತ್ರ ಚಂದ್ರಶೇಖರ್ ಎನ್ ಎಸ್, ಮದ್ದೂರು ತಾಲೂಕು ಕೊಪ್ಪದ ಬೋರೇಗೌಡರ ಪುತ್ರ ಆಟೋ ಚಾಲಕ  ಸುನಿಲ್ ಬಿ, ಹಾಗೂ ಪ್ರಕಾಶ್ ರವರ ಪುತ್ರ ಮರದ ವ್ಯಾಪಾರಿ ಕೆ ಪಿ ಉಲ್ಲಾಸ್ ಗೌಡ, ಆಬಲವಾಡಿ ಗ್ರಾಮದ ಲೇಟ್ ಮರಿಯಯ್ಯರ ಪುತ್ರ ಪ್ರತಾಪ ಎ ಎಂ,ಹಾಗೂ ಲೇಟ್ ಮರಿಯಪ್ಪರ ಪುತ್ರ ಆಟೋ ಚಾಲಕ ಕೆ ಎಂ ಅಭಿಷೇಕ್ ಮತ್ತು ಲೇಟ್ ಕೃಷ್ಣಪ್ಪ ರ ಪುತ್ರ ಕಾರು ಚಾಲಕ ಕೆ ಶ್ರೀನಿವಾಸ್, ರಾಮನಗರ ಜಿಲ್ಲೆಯ ಜಕ್ಕೇಗೌಡನ ದೊಡ್ಡಿ ಗ್ರಾಮದ ಹನುಮೇಗೌಡರ ಪುತ್ರ ಹರ್ಷ ಹಾಗೂ ಕೊಲೆಯಾದ ಕೃಷ್ಣೆಗೌಡನ ಅಣ್ಣ ಶಿವನಂಜೇಗೌಡನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೆ ಎಂ ದೊಡ್ಡಿ ಪೋಲಿಸ್ ಠಾಣಾ ವ್ಯಾಪ್ತಿಯ   ಲಕ್ಷ್ಮೀಗೌಡನದೊಡ್ಡಿ ಗ್ರಾಮದಮಾದನಹಟ್ಟಿ ಅಮ್ಮನ ದೇವಸ್ಥಾನದ ಪಕ್ಕದಲ್ಲಿರುವ ಜಮೀನಿನಲ್ಲಿ  ಅಪರಿಚಿತ ಮೂರು ಜನರು ಮಾರಕಾಸ್ತ್ರಗಳಿಂದ  ಕೃಷ್ಣಗೌಡನನ್ನು ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು ಈ ಬಗ್ಗೆ ಶಂಕರೇಗೌಡ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ನಿಟ್ಟೂರು ಗ್ರಾಮದ ಚಂದ್ರಶೇಖರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆಯಾದ ಕೃಷ್ಣೆಗೌಡ ಸಾಲ ಮಾಡಿಕೊಂಡಿದ್ದು ಸಾಲವನ್ನು ಅಣ್ಣನಾದ  ಗುಡ್ಡಪ್ಪ ಶಿವನಂಜೇಗೌಡ ತೀರಿಸಿದ್ದನು, ಇದಕ್ಕೆ ಪ್ರತಿಯಾಗಿ ತನ್ನ ಜಮೀನನ್ನು ಅತ್ತಿಗೆ ಹೆಸರಿಗೆ ಮಾಡಿಕೊಡಲಾಗಿತ್ತು, ಆದರೆ ಜಮೀನನ್ನು ಬಿಟ್ಟುಕೊಡದ ಕೃಷ್ಣೇಗೌಡ ಅಕ್ಕತಂಗಿಯರನ್ನು ಪುಸಲಾಯಿಸಿ  ಜಮೀನು ವಿಚಾರದಲ್ಲಿ ಶಿವ ನಂಜೇಗೌಡನ ವಿರುದ್ಧ ಕೇಸು ದಾಖಲಿಸಿದ್ದನು, ಅಷ್ಟೇ ಅಲ್ಲದೆ ಶಿವ ನಂಜೇಗೌಡನ ವಿರುದ್ಧ ಮಾತನಾಡುತ್ತಾ ಅವಮಾನ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದನು ಇದರಿಂದ ರೊಚ್ಚಿಗೆದ್ದ ಅಣ್ಣ ತಮ್ಮನನ್ನೆ ಕೊಲೆ ಮಾಡಲು 5 ಲಕ್ಷ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಕೊಲೆ ಪ್ರಕರಣದ ಆರೋಪಿಗಳ ಪತ್ತಗೆ ಜಿಲ್ಲಾ ಅಪರ ಪೋಲೀಸ್ ಅಧೀಕ್ಷಕರುಗಳಾದ .ಸಿ.ಇ ತಿಮ್ಮಯ್ಯ,ಎಸ್.ಇ. ಗಂಗಾಧರಸ್ವಾಮಿ. ಮಾರ್ಗದರ್ಶನದಲ್ಲಿ ಮಳವಳ್ಳಿ ಉಪ-ವಿಭಾಗದ ಡಿವೈಎಸ್.ಪಿ. .ವಿ ಕೃಷ್ಣಪ್ಪ  ನೇತೃತ್ವದಲ್ಲಿ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪೊಲೀಸ ಇನ್ ಸ್ಪೆಕ್ಟರ್  ಎಸ್.ಆನಂದ್, ಹೆಡ್ ಕಾನ್ಸ್ ಟೇಬಲ್‌ ಗಳಾದ ನಟರಾಜು, ಮಹೇಶ್, ರಾಜಶೇಖರ್, ರಾಜೇಂದ್ರ, ಶ್ರೀಕಾಂತ್, ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ವಿಶ್ವಲ್ ಜೆ. ಕರಿಗಾರ, ಅರುಣ್, ಶ್ರೀಕಾಂತ್.ಅನಿಲ್ ಕುಮಾರ್, ಕೌಶಿಕ್, ಚಿರಂಜೀವಿ, ವಿಷ್ಣುವರ್ಧನ, ಕಿರಣ್ ಕುಮಾರ್, ರವಿಕಿರಣ್, ಲೊಕೇಶ್ ಮತ್ತು ವಾಸುದೇವ ರನ್ನು ಒಳಗೊಂಡ  ತಂಡ ರಚನೆ ಮಾಡಲಾಗಿತ್ತು. ಸದರಿ ತಂಡದ ಅಧಿಕಾರಿಗಳು ಮತ್ತು ಸಿಬ್ಬಂಧಿಯವರ  ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!