ಮಂಡ್ಯ : ನಗರದಲ್ಲಿ ಸಂಜೆ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರಸ್ತೆಗಳೆಲ್ಲವೂ ಕೆರೆಯಾಗಿ ಪರಿವರ್ತನೆಗೊಂಡಿದ್ದವು.
ಮಧ್ಯಾಹ್ನ ಬಿಸಿಲು ಇದ್ದ ಕಾರಣ ಮಂಡ್ಯ ಜನತೆ ಸೆಖೆ ಅನುಭವವನ್ನು ಅನುಭವಿಸುವಂತಾಗಿತ್ತು. ಆದರೆ ಸಂಜೆ ಬಂದ ಧಾರಾಕಾರ ಮಳೆ ಇಳೆ ಹಾಗೂ
ಜನರನ್ನು ತಂಪಾಗಿಸಿದೆ.
ನಗರದ ಕಲಾಮಂದಿರ ರಸ್ತೆ, ಅಂಚೆ ಕಚೇರಿ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದವು. ಕೆರೆ ಮಾದರಿ ರಸ್ತೆ ಪರಿವರ್ತನೆಗೊಂಡಿದ್ದರಿಂದ ವಾಹನ ಸವಾರರು ರಸ್ತೆಯಲ್ಲಿ ಸಂಚಾರ ಮಾಡಲು ಹರಸಾಹಸ ಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.
ಸುಮಾರು ಗಂಟೆಗಳ ಜಾಲ ವರುಣ ಆರ್ಭಟಿಸಿದ್ದರಿಂದ ನಗರದಲ್ಲಿ ಅಲ್ಲಲ್ಲಿ ನೀರು ತುಂಬಿಕೊಂಡು ರಸ್ತೆಗಳು ಕೆರೆಯಂತಾದವು. ಮಳೆಯಿಂದ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಇದೇ ರೀತಿ ಜಿಲ್ಲೆಯ ಇತರೆ ತಾಲೂಕುಗಳಲ್ಲೂ ಮಳೆಯಾಗಿದ್ದು ಇಳೆ ತಂಪಾಗಿಸಿದೆ. ಮಳೆಯಿಂದಾಗಿ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.