ಲೋಕಸಭೆ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ಪ್ರಕ್ರಿಯೆ ಶುರುವಾಗಿದ್ದು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ನಾಲ್ವರ ಸದಸ್ಯರ ನೇಮಕಾತಿ ಮಾಡಿ ನಗರಾಭಿವೃದ್ಧಿ ಇಲಾಖೆಗೆ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.
ಮಂಡ್ಯ ನಗರಸಭೆ 5ನೇ ವಾರ್ಡ್ ಸದಸ್ಯ ನಯೀಮ್ ಬಿನ್ ಸಿರಾಜ್ ಖಾನ್ ಅವರನ್ನು ಮುಡಾ ಅಧ್ಯಕ್ಷರಾಗಿ, ಜಿಲ್ಲಾ ಕುರುಬರ ಸಂಘದ ಮುಖಂಡ ನಿವೃತ್ತ ಸೆಸ್ಕಾಂ ನೌಕರ ದೊಡ್ಡಯ್ಯ ಬಿನ್ ಜವರಯ್ಯ, ಎಂ.ಕೃಷ್ಣ ಬಿನ್ ಲೇಟ್ ಮರೀಗೌಡ, ಎಂ.ಎಸ್.ಅರುಣ್ ಕುಮಾರ್ ಬಿನ್ ಲೇಟ್ ಶಿವಲಿಂಗಯ್ಯ, ಕೇಶವ ಡಿ ಬಿನ್ ಜವರಯ್ಯ ಇವರುಗಳನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.
ಮಂಡ್ಯ ನಗರಸಭೆ ಸದಸ್ಯರಾಗಿರುವ ನಯೀಂ ಶಾಸಕ ಪಿ ರವಿಕುಮಾರ್ ಹಾಗೂ ಸಚಿವ ಚಲುವರಾಯಸ್ವಾಮಿಯವರ ನೀಲಿಗಣ್ಣಿನ ಹುಡುಗನಾಗಿದ್ದು ನಿರೀಕ್ಷಿಸಿದಂತೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಪಟ್ಟವನ್ನು ನಯೀಂ ಮುಡಿಗೇರಿಸಲಾಗಿದೆ.ಇನ್ನುಳಿದಂತೆ ಮೈಶುಗರ್ ಅಧ್ಯಕ್ಷರಾಗಿ ಸಿ.ಡಿ ಗಂಗಧರ್ ಇದ್ದು ಇವೆರೆಡು ಜಿಲ್ಲೆಯ ಪ್ರಮುಖ ನಿಗಮ ಮಂಡಳಿಗಳಾಗಿವೆ