ಮಂಡ್ಯ:ಫೆ.೦೧ ನಗರದ ಗಾಂಧಿ ಭವನದಲ್ಲಿ ನಗರ ಸಭೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮವನ್ನು ಶಾಸಕ ಪಿ ರವಿಕುಮಾರ್ ಗೌಡ ನೇತೃತ್ವದಲ್ಲಿ ನಡೆಯಿತು,
ನಂತರ ಮಾತನಾಡಿ ಸರ್ಕಾರದ ವತಿಯಿಂದ ಶೇಕಡ24.10 ಪರ್ಸೆಂಟ್ ಪರಿಶಿಷ್ಟ ಜಾತಿ ಜನಾಂಗದವರಿಗೆ ಮತ್ತು ಶೇಕಡ 7.25 ಪರ್ಸೆಂಟ್ ಇತರೆ ಬಡ ಜನರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಿದ್ದೇವೆ,
ಪ್ರೋತ್ಸಾಹ ನೀಡುವ ಉದ್ದೇಶ ನೀವು ಕೂಡ ಸಮಾಜದಲ್ಲಿ ಪೈಪೋಟಿಯನ್ನು ನೀಡಿ ಉತ್ತಮ ಅಂಕಗಳಿಸಿ ಉನ್ನತ ಶಿಕ್ಷಣ ಪಡೆದು ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತೇಜನ್ನು ಸಿಗಲಿ ಎಂದು ನಗರಸಭೆಯಿಂದ ಪ್ರೋತ್ಸಾಹ ಧನ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ನಗರ ಸಭೆ ಪೌರಾಯುಕ್ತ ಮಂಜುನಾಥ್ ನಗರಸಭೆ ಸದಸ್ಯರಾದ ನಾಗೇಶ್ ,ಶ್ರೀಧರ್, ಸೌಭಾಗ್ಯ , ಲಲಿತಾ ಭದ್ರಪ್ಪ, ನಗರಸಭೆ ಅಧಿಕಾರಿ ತುಳಸಿದರ್ ಇದ್ದರು.