ಯುವಕನ ಹತ್ಯೆ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮಂಡ್ಯ: ಎ.೦೩ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರು ಮಂದಿಗೆ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದೆ.
ನಗರದ ಗುತ್ತಲು ಬಡಾವಣೆಯ ಡಿ.ಚಂದನ್, ಆರ್.ಅಜಯ್ಕುಮಾರ್, ಹರ್ಷಿತ್ಗೌಡ, ಕಿರಣ್ ಅಲಿಯಾಸ್ ಪಿಳ್ಳೆ, ಮನೋಜ್, ನಾಗರಾಜು ಅಲಿಯಾಸ್ ಬೂದಿನಾಗ ಶಿಕ್ಷೆಗೊಳಗಾದ ಅಪರಾಧಿಗಳು.
2019ರ ಏ.5ರಂದು ಗುತ್ತಲು ಅರ್ಕೆಶ್ವರ ನಗರದ ಜಯಲಕ್ಷ್ಮಿ ಟಾಕೀಸ್ ಮುಂಭಾಗ ನಾಲ್ಕನೇ ಕ್ರಾಸ್ನಲ್ಲಿರುವ ಕಾಳಮ್ಮ ಮತ್ತು ಮಾರಮ್ಮ ದೇವಾಲಯದ ಮುಂದೆ .ಎಸ್. ನಂದನ್ರಾಜ್ (27) ಎಂಬಾತನನ್ನು ಪ್ಲೆಕ್ಸ್ ಹಾಕಿರುವ ವಿಚಾರದಲ್ಲಿ ಕೊಲೆ ಮಾಡಿದ್ದರು.
ಈ ಬಗ್ಗೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ಸ್ಪೆಕ್ಟರ್ ಮನೋಜ್ಕುಮಾರ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರವಾಗಿ ‘ಸರ್ಕಾರಿ ಅಭಿಯೋಜಕಿ ಜಯಶ್ರೀ ಎಸ್.ಶೆಣೈ ವಾದ ಮಂಡಿಸಿದ್ದರು.