ಮೂಡಾ ಹಗರಣ: ಪಾದಯಾತ್ರೆ ಹೋರಾಟಕ್ಕೆ ನಿಖಿಲ್ ಕುಮಾರಸ್ವಾಮಿ ನಾಯಕತ್ವ
ಮೈಸೂರು ಮೂಡಾ ಹಗರಣದ ವಿರುದ್ದ ಜ್ಯಾದಳ ಹಾಗೂ ಬಿಜೆಪಿ ಜಂಟಿಯಾಗಿ ನಡೆಸಲಿರುವ ಬೆಂಗಳೂರಿನಿಂದ ಮೈಸೂರುವರೆಗಿನ ಪಾದಯಾತ್ರೆ ಹೋರಾಟಕ್ಕೆ ಜ್ಯಾದಳದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಮುನ್ನೆಲೆಗೆ ತರಲಾಗಿದೆ.
ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸರಕಾರ ಸೇರಿದ ಮೇಲೆ ರಾಜ್ಯದಲ್ಲಿ ದೇವೆಗೌಡರ ಕುಟುಂಬದಿಂದ ಪಕ್ಷವನ್ನು ಮುನ್ನಡೆಸಲು ಸೇನಾನಿಯ ಕೊರತೆ ಎದ್ದು ಕಾಣುತಿತ್ತು.
ಎಚ್ ಡಿ ರೇವಣ್ಣ ನಾಯಕತ್ವ ವಹಿಸುವ ಅವಕಾಶ ಇದ್ದರು ಆಡಳಿತರೂಡರೊಂದಿಗೆ ಅವರದು ಸುಮಧುರ ಬಾಂಧವ್ಯ.ಇನ್ನು ಮೈಸೂರಿನ ಹಿರಿಯ ನಾಯಕ ಜಿಟಿ ದೇವೆಗೌಡರಿಗೆ ರಾಜ್ಯದಲ್ಲಿ ಜ್ಯಾದಳದ ನಾಯಕತ್ವ ಸಿಗುವ ಅವಕಾಶಗಳು ಇದ್ದವು.ಅದೀಗ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಪಾಲಾಗಿದೆ.
ಈಗ ಪಕ್ಷವನ್ನು ರಾಜ್ಯದಲ್ಲಿ ಮುನ್ನಡೆಸಲು ನಿಖಿಲ್ ಕುಮಾರಸ್ವಾಮಿಯನ್ನು ಮುನ್ನೆಲೆಗೆ ತರಲಾಗಿದೆ.ಇದರ ರಂಗಸಜ್ಜಿಕೆಯಾಗಿ ಮುಡಾ ಹಗರಣದ ಹೋರಾಟದ ಸಿದ್ದತೆಗಾಗಿ ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರ ಮಂಡ್ಯ ಮೈಸೂರಿನಲ್ಲಿ ಜ್ಯಾದಳ ನಾಯಕರ ಸಭೆ ನಡೆಸುತ್ತಿದ್ದು.ಈ ಮುಖೇನಾ ಜ್ಯಾದಳದ ಮುಂದಿನ ತಲೆಮಾರಿನ ನಾಯಕತ್ವವನ್ನು ನಿಖಿಲ್ ಹೆಗಲಿಗೇರಿಸುವುದು ನಿಶ್ಚಿತವಾಗಿದೆ