ಮೇ೨೮ರಂದು ಮಂಡ್ಯದಲ್ಲಿ ‘ಕನ್ನಡ ರಂಗೋಲಿ’ಸ್ಪರ್ಧೆ
ಮಂಡ್ಯ: ಮೇ.೨೫.ಕನ್ನಡದ ಮೊದಲ ದೊರೆ ಮಯೂರ ವರ್ಮನ ನೆನಪಿನಲ್ಲಿ ಮೇ೨೮ರಂದು ಕರುನಾಡ ಸೇವಕರು ಸಂಘಟನೆಯಿಂದ ಕನ್ನಡ ರಂಗೋಲಿ ಸ್ಪರ್ಧೆ ಎರ್ಪಡಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕರುನಾಡ ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಪ್ರಕಟಣೆಯಲ್ಲಿ.
ಸ್ಪರ್ಧೆಯಲ್ಲಿ ಭಾಗವಹಿಸಲು ಮಹಿಳೆಯರು ಸೇರಿದಂತೆ ಎಲ್ಲರಿಗೂ ಮುಕ್ತ ಅವಕಾಶ ಇದ್ದು.ಮೇ ೨೮ರ ಬೆಳಿಗ್ಗೆ ೭ ಗಂಟೆಗೆ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸ್ಪರ್ಧೆ ನಡೆಯಲಿದ್ದು.ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಬೆಂಗಳೂರಿನ ಕನ್ನಡ ಹೋರಾಟಗಾರ ಜ್ನಾನ ಮಧು.ನೆಲದನಿ ಬಳಗದ ಲಂಕೇಶ್ ಮಂಗಲ.ಕಸಾಪ ಮಾಜೀ ಅಧ್ಯಕ್ಷರಾದ ಮೀರಾ ಶಿವಲಿಂಗಯ್ಯ.ಅಪರ ಜಿಲ್ಲಾಧಿಕಾರಿ ಡಾ.ಎಚ್ ಎಲ್ ನಾಗರಾಜ್. ವಕೀಲೆ ಗಂಗಾವತಿ ಲಕ್ಷ್ಮಣ್ .ಸಾಮಾಜಿಕ ಕಾರ್ಯಕರ್ತ ಟಿ.ಡಿ.ನಾಗರಾಜು ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗೀಯಾಗಲಿದ್ದಾರೆ.
ಕನ್ನಡ ಕನ್ನಡಿಗ ಕರ್ನಾಟಕದ ಪರಂಪರೆಗೆ ಸೇರಿದ ಯಾವುದೆ ರಂಗೋಲಿ ಬಿಡಿಸಲು ಅವಕಾಶವಿದ್ದು.ಸ್ಪರ್ಧೆಯಲ್ಲಿ ಭಾಗವಹಿಸುವವರು ಅರಿಶಿಣ ಕುಂಕುಮದ ಬಣ್ಣಗಳನ್ನೆ ಬಳಸಬೇಕು.ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹೩೦೦೦ ದ್ವಿತೀಯ ಸ್ಥಾನಕ್ಕೆ ₹೨೦೦೦ ತೃತೀಯ ಸ್ಥಾನಕ್ಕೆ ೧೦೦೦ ನಗದು ಬಹುಮಾನ ನೀಡಲಾಗುವುದು.
ಆಸಕ್ತರು ಈ ಕೆಳಕಂಡ ಮೊಬೈಲ್ ನಂಬರ್ ಗೆ ತಮ್ಮ ಹೆಸರು.ವಿಳಾಸದ ಸ್ವವಿವರ ಬರೆದು ವಾಟ್ಸ್ ಫ್ ನಲ್ಲಿ ಕಳುಹಿಸಿ ಸ್ಪರ್ಧೆಯನ್ನು ನೋಂದಾಯಿಸುವಂತೆ ಕೋರಿದೆ.
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:9844466013
+919448473715