Wednesday, January 15, 2025
spot_img

ಹಾದಿ ತಪ್ಪಿದ ಜನಾಂದೋಲನಾ.ಪಾದಯಾತ್ರೆ.ವೈಯುಕ್ತಿಕ ಟೀಕೆಗೆ ಸಿಮೀತವಾಯಿತು

ರಾಜಕೀಯ ಪಕ್ಷಗಳ ಆಟದ ಮೈದಾನವಾದ ಮಂಡ್ಯದ ತುಂಬ ಫ್ಲಕ್ಸ್ ಹಾವಳಿ.ನಗರಸಭೆಗೆ ಆದಾಯವು ಇಲ್ಲ.ಅನುಮತಿಯು ಇಲ್ಲ

ಮೈಸೂರಿನ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನೀ ಹದಿನಾಲ್ಕು ನಿವೇಶನಗಳನ್ನು ಪಡೆದಿರುವ ಕುರಿತು ಬಿಜೆಪಿ ದಳ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುತ್ತಿವೆ.

ಇದರ ಬೆನ್ನಲ್ಲೆ ಜನರ ಗಮನವನ್ನು ಸೆಳೆಯಲು ಕಾಂಗ್ರೆಸ್ ಸಹ ಜನಾಂದೋಲನದ ಹೆಸರಲ್ಲಿ ಪ್ರತಿತಂತ್ರ ರೂಪಿಸಿವೆ.ಜನಾಂದೋಲನಾ ಹಾಗೂ ಪಾದಯಾತ್ರೆ ಹೆಸರಲ್ಲಿ ಎರಡು ಪಕ್ಷಗಳು ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿವೆ.ಈ ಪಕ್ಷಗಳ ಪಾದಯಾತ್ರೆ ಸಮಾವೇಶಕ್ಕಾಗಿ ಜನರನ್ನು ಕರೆತರಲು ತಲಾ ₹ 300 ಹಾಗೂ ಬಸ್ ವ್ಯವಸ್ಥೆ ಮಾಡಲಾಗಿದೆ.ಅಲ್ಲದೆ ಅಲ್ಲಲ್ಲಿ ಬಾಡೂಟಗಳನ್ನು ಎರ್ಪಡಿಸಲಾಗುತ್ತಿದೆ.ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ವ್ಯಯ ಮಾಡಲಾಗುತ್ತಿದೆ.ಇವುಗಳ ಖರ್ಚನ್ನು ಸ್ಥಳೀಯ ಶಾಸಕರಿಗೆ ವಹಿಸಿದ್ದರು ಅವರು ಈ ಖರ್ಚುವೆಚ್ಚ ಭರಿಸಲು ತಮ್ಮ ನಿಷ್ಟ ಗುತ್ತಿಗೆದಾರರು ಅಧಿಕಾರಿಗಳ ಬೆನ್ನಿಗೆ ಈ ಸಮಾವೇಶ ಜನಾಂದೋಲನಾ ಪಾದಯಾತ್ರೆ ಖರ್ಚಿನ ಹೊರೆ ದಾಟಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಜನರ ಗಮನ ಸೆಳೆಯಲು ಬೆಂಗಳೂರು ಮೈಸೂರು ಉದ್ದಕ್ಕು ಮಂಡ್ಯ ರಾಮನಗರದಲ್ಲಿ ಸಾವಿರಾರು ಫ್ಲಕ್ಸ್ ಗಳನ್ನ ಅಳವಡಿಸಲಾಗಿದೆ.ಇದಕ್ಕಾಗಿ ತಮಿಳುನಾಡಿನಿಂದ ಮೂರು ಪಕ್ಷಗಳು ನೂರಾರು ಕಾರ್ಮಿಕರನ್ನು ಕರೆ ತಂದಿವೆ.ತಮಿಳುನಾಡಿನ ಏಜೆನ್ಸಿಗಳು ಈ ಫ್ಲಕ್ಸ್ ಇತ್ಯಾದಿ ಪ್ರಚಾರದ ಹೊಣೆ ಹೊತ್ತಿವೆ.
ಇದಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಸುರಿಯಲಾಗಿದೆ.ಆದರೆ ಈ ಫ್ಲೆಕ್ಸ್ ಗಳ ಅಳವಡಿಕೆಗೆ ಸ್ಥಳೀಯ ಸಂಸ್ಥೆಗಳಿಂದ ಸಂಪೂರ್ಣ ಅನುಮತಿಯನ್ನು ಪಡೆಯಲಾಗಿಲ್ಲ.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವುದೆ ಫ್ಲಕ್ಸ್ ಅಳವಡಿಸಲು ನಿರ್ದಿಷ್ಟ ನಿಯಮಗಳಿವೆ ಇದಲ್ಲದೆ ಪ್ಲಾಸ್ಟಿಕ್ ನಿಂದ ತಯಾರಿಸುವ ಫ್ಲೆಕ್ಸ್ ಗಳಿಗೆ ನಿಷೇಧವಿದೆ.ಆದಾಗಿಯು ನಗರಸಭೆ ಪುರಸಭೆಗಳ ವ್ಯಾಪ್ತಿಯಲ್ಲಿ ಅಳವಡಿಸಿರುವ ಎಲ್ಲ ಫ್ಲಕ್ಸ್ ಗಳಿಗೆ ಅನುಮತಿಯನ್ನು ಪಡೆಯದೆ ಬಿಡಿಗಾಸಿನ ಶುಲ್ಕವನ್ನು ಪಾವತಿಸಿ ಮೂರು ಪಕ್ಷಗಳು ಸಂಚಾರ ನಿಯಮಗಳನ್ನು ಹತ್ತಿಕ್ಕಿ ಎಲ್ಲಂದರಲ್ಲಿ ಫ್ಲೆಕ್ಸ್ ಗಳನ್ನು ಹಾಕಿವೆ.

ಈ ಬಗ್ಗೆ ಪೋಲಿಸ್ ಇಲಾಖೆ ಸಹ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ.ಇದರಿಂದಾಗಿ ಈ ಹಾದಿಯುದ್ದಕ್ಕು ಬರುವ ಸ್ಥಳೀಯ ಸಂಸ್ಥೆಗಳಿಗೆ ಸಿಗಬಹುದಾಗಿದ್ದ ಲಕ್ಷಾಂತರ ರೂಪಾಯಿ ವರಮಾನಕ್ಕು ಕಲ್ಲು ಬಿದ್ದಿದೆ.

oplus_131074

ಕಾಂಗ್ರೆಸ್ ಪಕ್ಷ ಮುಡಾ ಹಗರಣದಿಂದ ತನಗಾಗಿರುವ ಡ್ಯಾಮೇಜು ಕಂಟ್ರೋಲು ಮಾಡಲು ಹಮ್ಮಿಕೊಂಡಿರುವ ಜನಾಂದೋಲನಾ ಬಿಜೆಪಿ‌ ಹಾಗೂ ದಳದ ಪಾದಯಾತ್ರೆ ಸಹ ಹಳಿ ತಪ್ಪಿವೆ.ಕಾಂಗ್ರೆಸ್ ಜನಾಂದೋಲನಾದಲ್ಲಿ ಡಿಕೆ ಶಿವಕುಮಾರ್ ಮೂಲಕ ಕುಮಾರಸ್ವಾಮಿಯನ್ನು ಏಕವಚನದಲ್ಲಿ ನಿಂದಿಸುವುದು.

oplus_131074

ಬಿಜೆಪಿ ದಳದ ಪಾದಯಾತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ವಿಜೇಯೆಂದ್ರರ ನಾಯಕತ್ವ ಗಟ್ಟಿಗೊಳಿಸಲು ಆದ್ಯತೆ ಕೊಟ್ಟು ಸ್ಥಳೀಯ ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ.
ಅಸಲಿ ಮುಡಾ ಹಗರಣವನ್ನು ಚರ್ಚೆಗೆ ತರುವಲ್ಲಿ ವಿಪಕ್ಷಗಳು ಸೋತರೆ ಹಗರಣದ ಕುರಿತು ಕಾಂಗ್ರೆಸ್ ತನ್ನ ನಿಲುವು ಹೇಳುವ ಬದಲು ಕುಮಾರಸ್ವಾಮಿ ನಿಂದನೆಯಲ್ಲಿ ತೊಡಗಿವೆ.ಮೂರು ಪಕ್ಷಗಳ ಈ ವರ್ತನೆ ಸಹಜವಾಗಿಯೆ ಜನರಲ್ಲಿ ಯಾವುದೆ ಕುತೂಹಲ ಆಸಕ್ತಿ ಮುಡಿಸುತ್ತಿಲ್ಲ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!