RNI ದಕ್ಷಿಣ ಭಾರತ ಕಚೇರಿ ಕರ್ನಾಟಕದಲ್ಲಿ ಆರಂಭಿಸಲು ಸಂಪಾದಕರ ಸಂಘ ಎಚ್ ಡಿಕೆ ಗೆ ಮನವಿ
ಮಂಡ್ಯ: ಜು.೧೯.ರಿಜಿಸ್ಟರ್ ಅಫ್ ನ್ಯೂಸ್ ಪೇಪರ್ ಅಫ್ ಇಂಡಿಯಾದ ದಕ್ಷಿಣ ಭಾರತದ ಪ್ರಾದೇಶಿಕ ಕಚೇರಿಯನ್ನು ಕರ್ನಾಟಕದಲ್ಲಿ ಆರಂಭಿಸುವಂತೆ ಕಾರ್ಯನಿರತ ಸಂಪಾದಕರ ಸಂಘ ಮಂಡ್ಯ ಸಂಸದ ಹಾಗೂ ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಮನವಿ ಮಾಡಿದೆ.
ಘಟಕದ ಮಂಡ್ಯ ಜಿಲ್ಲಾಧ್ಯಕ್ಷ ಎಲ್ ಶಿವಶಂಕರ್ ನೇತೃತ್ವದಲ್ಲಿ ಮಂಡ್ಯ ಸಂಸದರ ಕಚೇರಿಗೆ ಮನವಿ ನೀಡಿದ್ದು.
ಮನವಿಯಲ್ಲಿ
ಭಾರತ ಒಕ್ಕೂಟದ ರಿಜಿಸ್ಟರ್ ಅಫ್ ನ್ಯೂಸ್ ಪೇಪರ್ ಇಂಡಿಯಾ ಕೇಂದ್ರ ಕಚೇರಿಯು ದೆಹಲಿಯಲ್ಲಿದ್ದು.ರಾಜ್ಯದ ಸ್ಥಳೀಯ ಹಾಗೂ ಪ್ರಾದೇಶಿಕ ಪತ್ರಿಕೆಗಳು ತಮ್ಮ ಯಾವುದೆ ವ್ಯವಹಾರಿಕ ಕಾರಣಕ್ಕೆ ದೆಹಲಿಗೆ ಎಡತಾಕಬೇಕಿದೆ.
ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ದೆಹಲಿಗೆ ವ್ಯವಹರಿಸುವುದು ದುಬಾರಿ ಮಾತ್ರವಲ್ಲದೆ ಭಾಷ ಸಮಸ್ಯೆಯಿಂದಾಗಿ ಸಾಕಷ್ಟು ಸಮಸ್ಯೆಗಳು ಉದ್ಬವಿಸುತ್ತಿವೆ.
ದಕ್ಷಿಣ ರಾಜ್ಯದ ಮಾಧ್ಯಮಗಳ ಹಲ ದಿನಗಳ ಬೇಡಿಕೆಯಾದ ಪೂರ್ಣ ಪ್ರಮಾಣದ RNI ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಅಗತ್ಯ ಕ್ರಮವಹಿಸುವಂತೆ ಮನವಿ ಮಾಡಿದೆ.
ಇದರಿಂದ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಮಾಧ್ಯಮ ಜಗತ್ತಿಗೆ ದೊಡ್ಡ ಅನುಕೂಲವಾಗಲಿದ್ದು.ಈ ದಿಸೆಯಲ್ಲಿ ತಾವುಗಳು ಕಾರ್ಯಪ್ರವೃತ್ತರಾಗಿ ಬೆಂಗಳೂರಿನಲ್ಲಿ ಆರ್ ಎನ್ ಐ ಪ್ರಾದೇಶಿಕ ಕಚೇರಿಯನ್ನು ನೆಲೆಗೊಳಿಸುವಂತೆ ಸಂಸದರಲ್ಲಿ ಕೋರಿದ್ದಾರೆ.ಈ ಸಂಧರ್ಭದಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳಾದ
ಎಂ.ಬಿ.ನಾಗಣ್ಣಗೌಡ
ವೇಣು ಮೊದಲಾದವರು ಇದ್ದರು