ಕುಮಾರಸ್ವಾಮಿ ವಿರುದ್ದ ಜನಾಂಗೀಯ ನಿಂದನೆಗೆ ಒಕ್ಕಲಿಗರ ಸಂಘ ಖಂಡನೆ
ಕೇಂದ್ರ ಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಕುರಿತು ಜನಾಂಗೀಯ ನಿಂದನೆಯ ಪದ ಬಳಸಿರುವ ಸಚಿವ ಜಮೀರ್ ಅಹಮದ್ ಹೇಳಿಕೆಗೆ ರಾಜ್ಯ ಒಕ್ಕಲಿಗರ ಸಂಘ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಸಂಬಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಕೇಂದ್ರ ಮಂತ್ರಿಯ ವಿರುದ್ದ ಜನಾಂಗೀಯ ನಿಂದನೆಯ ಹೇಳಿಕೆ ನೀಡುವ ಸಚಿವ ಜಮೀರ್ ಅಹಮದ್ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡಿರುವುದು ಸ್ಪಷ್ಟವಾಗಿದೆ.
ಇದಲ್ಲದೆ ಮಾಜಿ ಪ್ರಧಾನಿ ಮಂತ್ರಿಗಳ ಕುಟುಂಬವನ್ನೆ ಖರೀದಿ ಮಾಡುವುದಾಗಿ ಹೇಳಿರುವ ಹೇಳಿಕೆಗೆ ಅದು ಆಕ್ಷೇಪಣೆ ವ್ಯಕ್ತಪಡಿಸಿದೆ.ಸಾಂವಿಧಾನಿಕ ಚೌಕಟ್ಟಿನಲ್ಲಿ ಯಾವುದೆ ಟೀಕೆಗೆ ನಮ್ಮ ವಿರೋಧವಿಲ್ಲ.ಆದರೆ ಜನಾಂಗೀಯ ನಿಂದನೆ ಇಡೀ ಒಕ್ಕಲಿಗ ಸಮುದಾಯವನ್ನೆ ಅಪಮಾನಿಸುವಂತದ್ದು ಎಂದು ತನ್ನ ಹೇಳಿಕೆಯಲ್ಲಿ ವಿವರಿಸಿದೆ.
ಈ ಕುರಿತ ಯಾವುದೆ ನಿಂದಾನಾತ್ಮಕ ಹೇಳಿಕೆಯನ್ನು ಸಮುದಾಯ ಸಹಿಸುವುದಿಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ರಾಜೀನಾಮೆ ಪಡೆಯಬೇಕು.ಜಮೀರ್ ಅಹಮದ್ ಕ್ಷಮೆಯಾಚಿಸಬೇಕೆಂದು ಅದು ಒತ್ತಾಯಿಸಿದೆ