Thursday, December 5, 2024
spot_img

ಕೊಪ್ಪಳ:ಬೀದಿ ದೀಪ ನಿರ್ವಾಹಕರಿಗೆ ಕನಿಷ್ಟ ವೇತನ ಜಾರಿಗೊಳಿಸಲು ನಾಗಣ್ಣಗೌಡ ಆಗ್ರಹ

ಬೀದಿ ದೀಪ ನಿರ್ವಾಹಕರಿಗೆ ಕನಿಷ್ಟ ವೇತನ ಜಾರಿಗೊಳಿಸಿ

ಕೊಪ್ಪಳ:ಮೇ ೨೬.ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆದಾರರಡಿ ಕರ್ತವ್ಯ ನಿರ್ವಹಿಸುತ್ತಿರುವ ಬೀದಿ ದೀಪ ನಿರ್ವಾಹಕರಿಗೆ ಕಾರ್ಮಿಕ ಕಾಯ್ದೆಯಂತೆ ಕನಿಷ್ಟ ವೇತನ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ಆಗ್ರಹಿಸಿದರು.

oplus_131074

ಕೊಪ್ಪಳದ ಮಳೆ ಮಲ್ಲೇಶ್ವರ ಗುಡಿಯ ಆವರಣದ ಸಮುದಾಯ ಭವನದಲ್ಲಿ ವಿವಿಧ ಜಿಲ್ಲೆಗಳ ಬೀದಿ ದೀಪ ನಿರ್ವಾಹಕರ ಕುಂದು ಕೊರತೆಗಳ ಸಭೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ.

ರಾಜ್ಯದ ಎಲ್ಲೆಡೆ ಕನಿಷ್ಟ ವೇತನ ಏಕಪ್ರಕಾರವಾಗಿದ್ದರು ಬೀದಿ ದೀಪ ನಿರ್ವಾಹಕರಿಗೆ ಅದು ಜಾರಿಯಾಗಿಲ್ಲ‌ ಬಹುತೇಕ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭವಿಷ್ಯ ನಿಧಿ.ಆರೋಗ್ಯ ವಿಮೆ ಯಾವುದನ್ನು ನೀಡುತ್ತಿಲ್ಲ.ಇದೆಲ್ಲ ಗೊತ್ತಿದ್ದರು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಮೌನವಾಗಿದ್ದಾರೆಂದು ಆರೋಪಿಸಿದರು.

ಕುಡಿಯುವ ನೀರು.ಸ್ವಚ್ಚತೆ.ಬೀದಿ ದೀಪ ನಿರ್ವಹಣೆಯಂತಹ ಪ್ರಾಥಮಿಕ ಆದ್ಯತೆಗಳನ್ನು ಖಾಸಗೀಕರಣ ಮಾಡಲಾಗಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಯಾವುದೆ ಜವಾಬ್ದಾರಿ ಇಲ್ಲವಾಗಿದೆ.ಈ ಖಾಸಗಿ ಗುತ್ತಿಗೆ ಕಂಪನಿಗಳಿಗೆ ನೀಡುವ ಅರ್ಧದಷ್ಟು ಹಣದಲ್ಲಿ ಬೀದಿ ದೀಪ ನಿರ್ವಹಣೆ.ಕುಡಿಯುವ ನೀರು.ಸ್ವಚ್ಚತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಿದೆ.ಆದರೆ ವಿಧಾನಸೌಧದಲ್ಲಿ ಕುಳಿತಿರುವ ಅಧಿಕಾರಿಗಳು ನೀತಿ ನಿಯಮದ ಹೆಸರಲ್ಲಿ ಖಾಸಗೀಕರಣದ ಮೂಲಕ ಕಾನೂನುಬದ್ದ ಭ್ರಷ್ಟಚಾರಕ್ಕೆ ಚಾಲನೆ ನೀಡಿದ್ದಾರೆ.ಇದರ ಪರಿಣಾಮವಾಗಿ ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊರಗುತ್ತಿಗೆ ನೌಕರರು ಸಂಘಟಿತರಾಗದೆ ಅಧಿಕಾರಿಗಳ ಬೆನ್ನು ಹತ್ತುವುದರಿಂದ ಯಾವುದೆ ಪ್ರಯೋಜನ ಇಲ್ಲವಾಗಿದೆ.ಯಾವುದೆ ಸುರಕ್ಷಾ ಪರಿಕರಗಳು ಇಲ್ಲದೆ ತಮ್ಮ ಜೀವವನ್ನೆ ಪಣಕಿಟ್ಟು ಕರ್ತವ್ಯ ನಿರ್ವಹಿಸುವ ಬೀದಿ ದೀಪ ನಿರ್ವಾಹಕರಿಗೆ ಯಾವುದೆ ಸೇವಾ ಭದ್ರತೆ. ಆರೋಗ್ಯ ವಿಮೆ ಇಲ್ಲವಾಗಿದೆ. ಇಂತಹ ಅಪಾಯಕಾರಿ ಸನ್ನಿವೇಶದಲ್ಲಿ ಕೆಲಸ ಮಾಡುವವರಿಗೆ ಆದ್ಯತೆಯ ಮೇಲೆ ಅಗತ್ಯ ಸೌಲಭ್ಯ ಒದಗಿಸಬೇಕಿದೆ ಎಂದರು.

ಇದೇ ಸಂಧರ್ಭದಲ್ಲಿ ರಾಜ್ಯದ ಬೆಳಗಾವಿ.ಬಾಗಲಕೋಟೆ. ಬಳ್ಳಾರಿ. ಕಲ್ಬುರ್ಗಿ. ಗದಗ.ವಿಜಯನಗರ ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ ಬೀದಿ ದೀಪ ನಿರ್ವಾಹಕರು ತಮ್ಮ ಸಂಕಷ್ಟಗಳನ್ನು ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ ಬೆಳಗಾವಿ ವಿಭಾಗ ಸಂಚಾಲಕ ರಾಜೂ ಎಂ ಹೊಸಮನಿ.ಗದಗ ಶಿವು.ರಾಜಾಸಾಬ್ ವೇಣುಗೋಪಾಲ್.ಬಾಲಯ್ಯ.ಬೀದಿ ದೀಪ ನಿರ್ವಾಹಕರ ಸಂಘದ ರಾಜ್ಯ ಸಂಚಾಲಕ ಆನಂದ್ ಕಲ್ಲೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!