ಚಾಮರಾಜನಗರದ ಹನೂರು ತಾಲ್ಲೂಕಿನ ಪೊನ್ನಾಚಿ ಹಳ್ಳಿಯಲ್ಲಿ ಜನಿಸಿದ ಸ್ವಾಮಿ ಪೊನ್ನಾಚಿ, ತಮ್ಮ ಮೊದಲ ಕವನ ಸಂಕಲನ ‘ಸಾವೊಂದನು ಬಿಟ್ಟು’ ಕೃತಿಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ, ಬೇಂದ್ರೆ ಗ್ರಂಥ ಬಹುಮಾನ. ಹಾಗೂ ಧೂಪದ ಮಕ್ಕಳು(ಕತೆಗಳು) ಕೃತಿಗಾಗಿ ಪಾಪು ಕಥಾ ಪುರಸ್ಕಾರ, ಛಂದ ಪುಸ್ತಕ ಪುರಸ್ಕಾರ, ಶಾ ಬಾಲುರಾವ್ ಪ್ರಶಸ್ತಿ, ಬಸವರಾಜ ಕಟ್ಟೇಮನಿ ಯುವ ಪುರಸ್ಕಾರ, ೨೦೨೦ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದಿರುತ್ತಾರೆ.
ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಅಕ್ಕ ಅವನು ಸಿಕ್ಕನೇ’ ಕಥೆ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಪದವಿ ವಿದ್ಯಾರ್ಥಿಗಳಿಗೆ, ‘ಹೀಗೊಂದು ಭೂಮಿಗೀತ’ ಹಾಗೂ ಕೇರಳದ ಸೆಂಟ್ರಲ್ ಯೂನಿವರ್ಸಿಟಿಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ‘ಧೂಪದ ಮಕ್ಕಳು’ ಕತೆ ಪಠ್ಯವಾಗಿವೆ. ಉಮಾಶಂಕರಸ್ವಾಮಿಯವರ ನಿರ್ದೇಶನದಲ್ಲಿ ‘ಧೂಪದ ಮಕ್ಕಳು’ ಕತೆ ಚಲನಚಿತ್ರವಾಗಿ ಮೂಡಿಬಂದಿದೆ.
೨೦೨೩ರಲ್ಲಿ ‘ದಾರಿ ತಪ್ಪಿಸುವ ಗಿಡ’ ಕಥಾ ಸಂಕಲನ ಪ್ರಕಟವಾಗಿದೆ. ಜಾನಪದ ಕಾವ್ಯಗಳಲ್ಲಿ ವಿಶೇ಼ಷ ಆಸಕ್ತಿ, ಕಾಡುಸುತ್ತುವುದನ್ನು ಜೀವಾಳವಾಗಿಸಿಕೊಂಡಿರುವ ಇವರು ಕಾಡಿನ ಕುರಿತು ಗಾಮೀಣ ಬದುಕಿನ ಕುರಿತು ಪತ್ರಿಕೆಗಳಲ್ಲಿ ಲೇಖನ ಬರೆಯುತಿದ್ದಾರೆ.
–