:ವಿಧಾನಸಭಾ ಚುನಾವಣೆಯ ಜ್ಯಾದಳ ಬಂಡಾಯಗಾರರು ಕಾಂಗ್ರೆಸ್ ನತ್ತ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜ್ಯಾದಳದಿಂದ ಟಿಕೇಟ್ ಸಿಗದೆ ಬಂಡಾಯವೆದ್ದಿದ್ದ ನಾಯಕರುಗಳೆಲ್ಲ ಈಗ ಲೋಕಸಭಾ ಚುನಾವಣೆಯ ಸಂಧರ್ಭದಲ್ಲಿ ಕಾಂಗ್ರೆಸ್ ಗೆ ಹಾರಿದ್ದಾರೆ.
ಮೂರು ಬಾರಿ ಜ್ಯಾದಳದಿಂದ ಮಂಡ್ಯ ವಿಧಾನಸಭಾ ಶಾಸಕರಾಗಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ತಮ್ಮ ಅಳಿಯ ಮಾಜಿ ಜಿಪಂ ಸದಸ್ಯ ಎಚ್ ಎನ್ ಯೋಗೇಶ್ ರೊಂದಿಗೆ ಕಾಂಗ್ರೆಸ್ ಗೆ ಹಾರಿದ್ದಾರೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜ್ಯಾದಳದಿಂದ ಟಿಕೇಟ್ ಸಿಗದ ಕಾರಣ ಮತ್ತೊರ್ವ ಜ್ಯಾದಳ ಬಂಡಾಯ ಅಭ್ಯರ್ಥಿ ಕೆಎಸ್ ವಿಜಯಾನಂದ ಬೆಂಬಲಿಸಿ ಜ್ಯಾದಳ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದರು.ಇಲ್ಲಿ ಕಾಂಗ್ರೆಸ್ ಪಕ್ಷ ವಿಜಯಪತಾಕೆ ಹಾರಿಸಿತ್ತು.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜ್ಯಾದಳ ಟಿಕೇಟ್ ಅಕಾಂಕ್ಷಿಯಾಗಿದ್ದ ಮಾಜಿ ಜಿಪಂ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಸಹ ಈಗ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.ಇವರು ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜ್ಯಾದಳ ಬಂಡಾಯ ಅಭ್ಯರ್ಥಿಯಾಗಿ ಕಣಕೀಳಿದು ಜ್ಯಾದಳ ಅಭ್ಯರ್ಥಿ ರವೀಂದ್ರ ಸೋಲಿಗೆ ಕಾರಣವಾಗಿದ್ದರು.
ವಿಧಾನಪರಿಷತ್ ಸದಸ್ಯ ಮರಿತಿಬ್ನೇಗೌಡ ಸಹ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ.ಮುಂಬರುವ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿಸುವ ಇರಾದೆ ಹೊಂದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜ್ಯಾದಳ ಅತೃಪ್ತ ರನ್ನು ಬಲೆಗೆ ಕೆಡುವುತ್ತಿರುವ ಕಾಂಗ್ರೆಸ್ ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರ ಜಯಿಸುವ ಉಮೇದಿನಲ್ಲಿದ್ದಾರೆ
ಕೃಷ್ಣರಾಜ ಪೇಟೆಯ ಮಾಜಿ ಸಚಿವ ಸಹ ಕೆ.ಸಿ.ನಾರಯಣಗೌಡ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.ಮಂಡ್ಯ ವಿಧಾನಸಭೆಯಲ್ಲಿ ಜ್ಯಾದಳ ಬಂಡಾಯ ಅಭ್ಯರ್ಥಿಯಾಗಿ ಕಣಕಿಳಿದಿದ್ದ ಕೆಎಸ್ ವಿಜಯಾನಂದ ಸಹ ಸದ್ಯದಲ್ಲೆ ತಮ್ಮ ನಿಲುವು ಪ್ರಕಟಿಸಲಿದ್ದಾರೆ.ಈ ಪಕ್ಷಾಂತರಗಳು ಎಷ್ಟರಮಟ್ಟಿಗೆ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ ಎಂಬುದನ್ನು ಫಲಿತಾಂಶವೆ ನಿರ್ಧರಿಸಬೇಕಿದೆ