ಸರಕಾರಿ ವೈದ್ಯರಿಗೆ ಖಾಸಗಿ ಪ್ರಾಕ್ಟೀಸ್ ನಿಷೇಧಿಸಿ ಆದೇಶ
ಬೆಂಗಳೂರು: ಜುಲೈ.೫.ರಾಜ್ಯದ ಸ್ವಾಯತ್ತ ಸರಕಾರಿ ಆಸ್ಪತ್ರೆಗಳ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
- ತಮ್ಮ ಆದೇಶದಲ್ಲಿ. ವೈದ್ಯಕೀಯ ಶಿಕ್ಷಣ ಸಚಿವರು ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ಪರೀಶೀಲನೆಗಾಗಿ ಭೇಟಿ ಕೊಟ್ಟ ಸಂಧರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕರ್ತವ್ಯದ ವೇಳೆಯಲ್ಲಿ ಹಾಜರಿರದೆ ಖಾಸಗಿ ನರ್ಸಿಂಗ್ ಹೋಂಗಳಿಗೆ ತೆರಳಿರುವುದು ಕಂಡು ಬಂದಿದ್ದು ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.ಆದ್ದರಿಂದ ಸರಕಾರಿ ವೈದ್ಯಕೀಯ ಕಾಲೇಜುಗಳ ವೈದ್ಯರು ಮತ್ತು ಸಿಬ್ಬಂದಿ ಬೆಳಿಗ್ಗೆ ಒಂಬತ್ತು ಮಧ್ಯಾಹ್ನ ಒಂದು ಗಂಟೆ ಹಾಗೂ ಎರಡು ಗಂಟೆಗೆ ಕಡೆಯದಾಗಿ ಸಂಜೆ ನಾಲ್ಕು ಗಂಟೆಗೆ ಬಯೋಮೆಟ್ರಿಕ್ ಹಾಜರಾತಿಯನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ.
ಮುಂದುವರಿಸು ಬಯೋಮೆಟ್ರಿಕ್ ಹಾಜರಾತಿ ಆಧರಿಸಿಯೆ ವೇತನ ಬಿಡುಗಡೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.
ಇದಲ್ಲದೆ ಸಿಬ್ಬಂದಿಗಳ ಚಲನವಲನ ವಹಿಯನ್ನು ಸಮರ್ಪಕವಾಗಿ ನಿರ್ವಹಿಸಲು ಆದೇಶದಲ್ಲಿ ತಿಳಿಸಿದ್ದು ನಾನ್ ಪ್ರಾಕ್ಟೀಸ್ ಭತ್ಯೆ ಪಡೆಯುವ ವೈದ್ಯರಿಗೆ ಕಡ್ಡಾಯವಾಗಿ ಖಾಸಗಿ ಪ್ರಾಕ್ಟೀಸ್ ನಿಷೇಧಿಸಿದ್ದು ಭತ್ಯೆ ಪಡೆಯುವ ವೈದ್ಯರು ಕರ್ತವ್ಯದ ವೇಳೆಯಲ್ಲಿ ಹೊರತುಪಡಿಸಿ ಪ್ರಾಕ್ಟೀಸ್ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಈ ಆದೇಶ ಎಷ್ಟರಮಟ್ಟಿಗೆ ಜಾರಿಯಾಗಲಿದೆ ಎಂಬುದು ಕಾದು ನೋಡಬೇಕಿದೆ.ಈಗಾಗಲೇ ಈ ಸಂಬಂದ ಹಲವು ಆದೇಶಗಳು ಇದ್ದಾಗಿಯೂ ಸರಕಾರಿ ವೈದ್ಯರ ಖಾಸಗಿ ಪ್ರಾಕ್ಟೀಸ್ ನಿಂತಿಲ್ಲ.ಇನ್ನಾದರೂ ಈ ಆದೇಶ ಜಾರಿಗೆ ಬರಲಿ ಎಂಬುದು ಹಳೇ ಮೈಸೂರು ಪತ್ರಿಕೆಯ ಆಶಯ