ಹಾಸನ : ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ
ಹಾಸನ ಜಿಲ್ಲೆಯ ಆಲೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಸವರಾಜು ಸಾರ್ವಜನಿಕರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೈಗಾರಿಕೆಯ ಇ ಖಾತೆ ಮಾಡಿಕೊಡಲು ₹ 2 ಲಕ್ಷ ಲಂಚದ ಬೇಡಿಕೆಯಿಟ್ಟಿದ್ದರು.
ಮೊದಲ ಹಂತದಲ್ಲಿ 70 ಸಾವಿರ ರೂ. ಲಂಚ ಕೊಡುವುದಾಗಿ ಸಂಬಂಧಪಟ್ಟವರು ಹೇಳಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಗುರುವಾರ ಕಚೇರಿಯಲ್ಲಿ ಲಂಚದ ಸಮೇತ ಅವರನ್ನು ಬಂಧಿಸಲಾಗಿದೆ. ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆದಿದೆ.