ಹಾಸನ:ನಗರಸಭೆ ಆಯುಕ್ತ.ಪರಿಸರ ಅಭಿಯಂತರ ಜೈಲುಪಾಲು
- ಹಾಸನ ನಗರಸಭೆ ಆಯುಕ್ತ.ಪರಿಸರ ಅಭಿಯಂತರ ಲೋಕಾ ಬಲೆಗೆಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತಾ ಗುತ್ತಿಗೆ ನಿರ್ವಹಿಸಿದ್ದ ಟೆಂಡರ್ ಬಿಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಸನ ನಗರಸಭೆ ಆಯುಕ್ತ ನರಸಿಂಹಮೂರ್ತಿ ಮತ್ತು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದು ಜೈಲುಪಾಲಾದ ಘಟನೆ ಗುರುವಾರ ಮದ್ಯಾಹ್ನ ನಡೆದಿದೆ.ಈ ಸಂಧರ್ಭದಲ್ಲಿ ನಗರಸಭೆ ಆಯುಕ್ತರನ್ನ ಬಂಧಿಸಿ, ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಈ ವೇಳೆ ನಗರಸಭೆ ಸದಸ್ಯರು ಲೋಕಾಯುಕ್ತರಲ್ಲಿ ಅಲವತ್ತುಕೊಂಡ ಪ್ರಹಸನವು ನಡೆದಿದೆ.ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಚತಾ ಟೆಂಡರ್ ಬಿಲ್ ನೀಡಲು ಒಂದುವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಒಟ್ಟು ೧೦ ಲಕ್ಷದ ೫೦ ಸಾವಿರ ಬಿಲ್ ಹಣ ನೀಡಲು ಒಂದುವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಆಯುಕ್ತ ನರಸಿಂಹಮೂರ್ತಿ ಹಾಗೂ ಕೆ.ಆರ್. ವೆಂಕಟೇಶ್. ಗುರುವಾರದಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ನಡೆಸಿ ನಗರಸಭೆಯ ಕೆ.ಆರ್.ವೆಂಕಟೇಶ್ ಕಚೇರಿಯಲ್ಲಿ ಲಂಚ ಪಡೆಯುವಾಗ ಹಣದ ಸಮೇತ ಇಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.
ನಗರಸಭೆ ಆಯುಕ್ತ ನರಸಿಂಹಮೂರ್ತಿ ಕಛೇರಿಯಲ್ಲಿ ತನಿಖೆ ನಡೆಸಿ ನಂತರ ಜೊತೆಯಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ಅವರನ್ನು ಅವರು ಕೆಲಸ ಮಾಡುವ ಕಛೇರಿಗೆ ಕರೆದುಕೊಂಡು ಹೋದರು. ಈ ವೇಳೆ ನಗರಸಭೆಯಲ್ಲಿದ್ದ ನಗರಸಭೆ ಸದಸ್ಯರು ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್. ವೆಂಕಟೇಶ್ ರನ್ನು ಬಂಧನದಿಂದ ಬಿಡುಗಡೆಗೊಳಿಸುವಂತೆ ನಗರಸಭಾ ಸದಸ್ಯರು ಪ್ರಹಸನ ಆರಂಬಿಸಿದರು. ಕೆ.ಆರ್.ವೆಂಕಟೇಶ್ ತುಂಬಾ ಒಳ್ಳೆಯವರು. ಅವರನ್ನು ಬಿಟ್ಟು ಬಿಡಿ, ಆಯುಕ್ತರನ್ನು ಕರೆದುಕೊಂಡು ಹೋಗುವಂತೆ ಒತ್ತಡ ಹೇರಿದರು. ಲಂಚ ಪಡೆಯುವುದರಲ್ಲಿ ವೆಂಕಟೇಶ್ ಪಾತ್ರವಿಲ್ಲ. ನಗರಸಭೆ ಆಯುಕ್ತರು ಹೇಳಿದಂತೆ ಮಾಡಿದ್ದಾರೆ. ಬೇಕಾದರೇ ನಗರಸಭೆ ಆಯುಕ್ತರನ್ನು ಕರೆದುಕೊಂಡು ಹೋಗಿ. ಎ.ಆರ್.ವೆಂಕಟೇಶ್ ಅವರನ್ನು ಬಿಟ್ಟು ಬಿಡಿ ಎಂದು ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಮುಂದೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿತು. ಈ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ಗರಂ ಆಗಿ ಮಾತನಾಡುತ್ತಾ, ಲಂಚದ ಹಣ ಪಡೆಯುತ್ತಿರುವ ವೇಳೆ ದಾಳಿ ಮಾಡಿದ್ದೇವೆ. ಯಾವ ಅಮಾಯಕ ಅಧಿಕಾರಿಗಳು ಮೇಲೂ ದಾಳಿ ಮಾಡಿಲ್ಲ. . ಲೋಕಾಯುಕ್ತ ನಿಯಮ, ಕಾನೂನಿನಂತೆ ದಾಳಿ ಮಾಡಿದ್ದೇವೆ. ಇನ್ಸ್‌ಪೆಕ್ಟರ್ ಬಾಲು ಗರಂ ಆಗುತ್ತಿದ್ದಂತೆ ಸ್ಥಳದಲ್ಲಿದ್ದ ನಗರಸಭೆ ಸದಸ್ಯರು ಅಲ್ಲಿಂದ ಕಾಲ್ಕಿತ್ತ ಘಟನೆ ನಡೆಯಿತು.
- ಪೌರಾಡಳಿತ ಸಚಿವ ರಾಜೀನಾಮೆ ನೀಡಲಿ:ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಕುಸಿದಿದ್ದು ಲಂಚ ಕೊಡದೆ ಯಾವುದೆ ಕೆಲಸವಾಗುತ್ತಿಲ್ಲ.ಪೌರಾಡಳಿತ ಸಚಿವ ಮೋಜು ಮಸ್ತಿಯಲ್ಲಿ ಮುಳುಗಿದ್ದು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಲಂಚ ತಿಂದು ಸಾಲು ಸಾಲಾಗಿ ಜೈಲುಪಾಲಾಗುತ್ತಿದ್ದು ಖಾತೆಯ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಜನಪರ ಸಂಘಟನೆಗಳು ಒತ್ತಾಯಿಸಿವೆ
- Advertisement -
error: Content is protected !!