ನಗರಪಾಲಿಕೆ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ಶೀಘ್ರ ಜಾರಿ:ಪಾಲಿಕೆ ಆಯುಕ್ತೆ ರೇಣುಕಾ ವಿಶ್ವಾಸ
ದಾವಣಗೆರೆ: ಜು೧೬.ನಗರಪಾಲಿಕೆಯ ಹೊರಗುತ್ತಿಗೆ ನೌಕರರಿಗೆ ಶೀಘ್ರದಲ್ಲಿ
ನೇರಪಾವತಿ ಜಾರಿಯಾಗಲಿದೆ ಈ ಸಂಬಂದ ಈಗಾಗಲೇ ದಾವಣಗೆರೆ ಪಾಲಿಕೆಯ ಕೌನ್ಸಿಲ್ ನಿರ್ಣಯ ಕೈಗೊಂಡಿದೆ ಎಂದು ಪಾಲಿಕೆಯ ಆಯುಕ್ತೆ ರೇಣುಕಾ ವಿಶ್ವಾಸ ವ್ಯಕ್ತಪಡಿಸಿದರು.
ಪಾಲಿಕೆಯ ಕೌನ್ಸಿಲ್ ಸಭಾಂಗಣಾದಲ್ಲಿ ಪಾಲಿಕೆಯ ಹೊರಗುತ್ತಿಗೆ ನೌಕರರಿಗೆ ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಜೀವವಿಮೆ ಬಾಂಡ್ ವಿತರಿಸಿ ಅವರು ಮಾತನಾಡಿ
ಪಾಲಿಕೆಯು ಮೂರು ಹಂತದಲ್ಲಿ 250 ಮಂದಿ ಪೌರಕಾರ್ಮಿಕರನ್ನು ಖಾಯಂಗೊಳಿಸಿದೆ.ಗೃಹಭಾಗ್ಯ ಯೋಜನೆಯಡಿ 380 ಮನೆಗಳನ್ನು ಪೌರಕಾರ್ಮಿಕರಿಗೆ ನೀಡಲಾಗಿದೆ.
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಇಲ್ಲದ ಹೊರಗುತ್ತಿಗೆ ನೌಕರರಿಗೆ ಮನೆ ನಿರ್ಮಿಸಿಕೊಳ್ಳಲು 3.50ಲಕ್ಷ ಸಬ್ಸಿಡಿ ನೀಡಲಾಗುವುದು ಎಂದರು.
ಪೌರಕಾರ್ಮಿಕರು ಎಂದರೆ ಕಸ ಗುಡಿಸುವವರು ಮಾತ್ರವಲ್ಲದೆ ಕಸ ಸಾಗಿಸುವ ಚಾಲಕರು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರು ನೀರುಗಂಟಿಗಳು ಎಲ್ಲರು ಪೌರಕಾರ್ಮಿಕರೆ ಆಗಿದ್ದಾರೆ ಅವರಿಗೂ ಪೌರಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯ ಸಿಗಬೇಕಿದೆ ಎಂದರು
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ.
ಹೊರಗುತ್ತಿಗೆ ನೌಕರರಿಗೆ ಜೀವ ವಿಮೆ ನೀಡುವ ಮೂಲಕ ದಾವಣಗೆರೆ ಪಾಲಿಕೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ ರಾಜ್ಯದ ಇನ್ನುಳಿದ ನಗರ ಸ್ಥಳೀಯ ಸಂಸ್ಥೆಗಳು ಹೊರಗುತ್ತಿಗೆ ನೌಕರರಿಗೆ ಜೀವವಿಮೆ ಒದಗಿಸಬೇಕಿದೆ.ಕಳೆದ ಇಪ್ಪತ್ತು ವರ್ಷಗಳಿಂದ ಪೌರಕಾರ್ಮಿಕರೊಟ್ಟಿಗೆ ಸ್ವಚ್ಚತೆ ಬೀದಿ ದೀಪ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವಲ್ಲಿ ಹೊರಗುತ್ತಿಗೆ ನೌಕರರ ಪಾತ್ರ ದೊಡ್ಡದು.ಆದರೆ ಪೌರಕಾರ್ಮಿಕರ ನೇಮಕಾತಿಯಲ್ಲಿ ಹೊರಗುತ್ತಿಗೆ ನೌಕರರನ್ನು ಪರಿಗಣಿಸದಿರುವುದು ದುರಾದೃಷ್ಟಕರವಾಗಿದೆ.
ಈ ಕುರಿತು ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ತರಲು ಪಾಲಿಕೆ ನಿರ್ಣಯ ಕೈಗೊಂಡಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ.ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ಹಂಚಿಕೆ ಮಾಡುವಾಗ ಹೊರಗುತ್ತಿಗೆ ನೌಕರರಿಗೂ ಶೇ50 ರಷ್ಟು ಮನೆಗಳನ್ನು ಮೀಸಲಿಡಬೇಕು ಎಂದರು.
ರಾಜ್ಯ ಸರಕಾರ ಏಳನೇ ವೇತನ ಆಯೋಗದ ವರದಿ ಜಾರಿಗೊಳಿಸಲು ಮುಂದಾಗಿದೆ ಅದರಂತೆ ಹೊರಗುತ್ತಿಗೆ ನೌಕರರಿಗೂ ವೇತನ ಆಯೋಗದ ಶಿಫಾರಸ್ಸುಗಳನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಕಸದ ಚಾಲಕರು ನೀರುಗಂಟಿಗಳು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರು ಬೀದಿ ದೀಪ ನಿರ್ವಾಹಕರು ಸೇರಿದಂತೆ 880 ಮಂದಿ ಕಾರ್ಮಿಕರಿಗೆ ಸಮವಸ್ತ್ರ ಶೂ ಮತ್ತು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ಜೀವವಿಮೆ ಬಾಂಡುಗಳನ್ನು ವಿತರಿಸಲಾಯಿತು.
.ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ವಿರೇಶ್.ಜಿಲ್ಲಾಧ್ಯಕ್ಷ ದುಗ್ಗೇಶ್ ಚಿತ್ರದುರ್ಗ ಘಟಕದ ಜಿಲ್ಲಾಧ್ಯಕ್ಷ ಶಿವರಾಜು.ಕರುನಾಡ ಸೇವಕರು ಸಂಘದ ಎಂ ಎನ್ ಚಂದ್ರು. ಮಧ್ಯ ಕರ್ನಾಟಕ ಸಂಚಾಲಕ ನವೀನ್ .ಖಜಾಂಚಿ ಕಿರಣ್ ಪಾಲಿಕೆಯ ಪರಿಸರ ಅಭಿಯಂತರ ಬಸಣ್ಣ.ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್ ಮೊದಲಾದವರಿದ್ದರು