*ಬೆಂಗಳೂರು* : ವಿಧಾನಸೌಧದಲ್ಲಿ ಇಂದು ಪೌರಾಡಳಿತ ಸಚಿವರೊಂದಿಗೆ ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಜಂಟೀ ಸಭೆ ನಡೆಯಿತು
ಈ ಸಂಧರ್ಭದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಸದ ವಾಹನ ಚಾಲಕರು ನೀರುಗಂಟಿಗಳು ಲೋಡರ್ಸ್ ಕ್ಲೀನರ್ಸ್ ಯೂಜಿಡಿ ಕಾರ್ಮಿಕರು ಸ್ಯಾನಿಟರಿ ಸೂಪರ್ ವೈಸರುಗಳು ತ್ಯಾಜ್ಯ ಸಹಾಯಕರು ಡಾಟ ಆಪರೇಟರುಗಳನ್ನು ನೇರಪಾವತಿಗೆ ತರುವ ಕುರಿತು ಪ್ರಸ್ತಾವವನ್ನು ಸಂಘದ ಅಧ್ಯಕ್ಷರಾದ ಎಂ.ಬಿ.ನಾಗಣ್ಣಗೌಡ ಮಂಡಿಸಿದರು.
ಮುಂದುವರಿದು ಅವರು ಮಾತನಾಡಿ
ಗೃಹಭಾಗ್ಯ ಯೋಜನೆಯಲ್ಲಿ ಯಾವುದೆ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣವಾದಾಗ ಅದರ ಅರ್ಧದಷ್ಟನ್ನು ಹೊರಗುತ್ತಿಗೆ ನೌಕರರಿಗೆ ಮೀಸಲಿಡಬೇಕು.ಪೌರಕಾರ್ಮಿಕರ ದಿನಾಚರಣೆಯಂದು ಖಾಯಂ ಪೌರಕಾರ್ಮಿಕರಿಗೆ ನೀಡುವ ವಿಶೇಷ ಭತ್ಯೆ ಏಳು ಸಾವಿರ ರೂಗಳನ್ನು ನೇರಪಾವತಿ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ನೀಡುವಂತೆ ಕೋರಲಾಯಿತು.
ಪುರಸಭೆ ಪಟ್ಟಣ ಪಂಚಾಯತಿ ಮಾದರಿಯಲ್ಲಿ ನಗರಸಭೆ ನಗರಪಾಲಿಕೆಗಳಲ್ಲು ಖಾಲಿ ಇರುವ ಪೌರಕಾರ್ಮಿಕರ ಹುದ್ದೆಗಳನ್ನು ಶೇ೧೦೦ರಷ್ಟು ನೇಮಕಾತಿಗೊಳಿಸಲು ಹಾಗೂ ನೇರಪಾವತಿ ಮತ್ತು ಹೊರಗುತ್ತಿಗೆ ಕಾರ್ಮಿಕರಿಗೆ ಮಾಸಿಕ ₹೨೦೦೦ ರೂಗಳ ಮಾಸಿಕ ಭತ್ಯೆ ನೀಡುವಂತೆ ಆಗ್ರಹಿಸಿದರು
ಇದಲ್ಲದೆ ಈಗಾಗಲೇ ಹೊರಗುತ್ತಿಗೆ ನೌಕರರ ನೇರಪಾವತಿಗೆ ಪ್ರಸ್ತಾವನೆ ಸಲ್ಲಿಸಿರುವ ಮಂಗಳೂರು ಪಾಲಿಕೆಯ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ವಿವರವಾದ ಚರ್ಚೆಗಳು ನಡೆದು ಅಂತಿಮವಾಗಿ ಸಚಿವರು ಹೊರಗುತ್ತಿಗೆ ನೌಕರರ ನೇರಪಾವತಿ ಹಾಗೂ ಪೌರಕಾರ್ಮಿಕರ ನೇಮಕಾತಿ ಸೇರಿದಂತೆ ಜಾರಿ ಸಾಧ್ಯವಿರುವ ಎಲ್ಲ ಬೇಡಿಕೆಗಳನ್ನು ಅಗತ್ಯವಾಗಿ ಜಾರಿಗೊಳಿಸುವುದಾಗಿ ತಿಳಿಸಿದರು.
ಬೀದಿ ದೀಪ ನಿರ್ವಾಹಕರಿಗೆ ಅಗತ್ಯ ಕನಿಷ್ಠ ವೇತನ ಭವಿಷ್ಯ ನಿಧಿ ₹೨೫ಲಕ್ಷ ರೂಪಾಯಿಗಳ ಜೀವ ವಿಮೆ ನೀಡುವಂತೆ ಸಭೆಯಲ್ಲಿ ಬೇಡಿಕೆ ಮಂಡಿಸಲಾಯಿತು
ಸಭೆಯಲ್ಲಿ ನಗರಾಭಿವೃದ್ದಿ ಕಾರ್ಯದರ್ಶಿ ದೀಪಾ ಚೋಳನ್ ಪೌರಾಡಳಿತ ನಿರ್ದೆಶಕ ಪ್ರಭುಲಿಂಗ ಕಾವಳಕಟ್ಟೆ ಹಣಕಾಸು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಯಲ್ಲಪ್ಪ ಸವದತ್ತಿ ಬೆಳಗಾವಿ ಪಾಲಿಕೆ ನೌಕರರ ಸಂಘದ ವಿಶಾಲ್ ಧಾರವಾಡ ಜಿಲ್ಲಾಧ್ಯಕ್ಷ ಬುಡೇಸಾಬ್ ಹಾವೇರಿಯ ಶಿವರಾಜ್ ದಾವಣಗೆರೆಯ ದುಗ್ಗೇಶ್ ಚಿತ್ರದುರ್ಗದ ಶಿವರಾಜ್ ಮತ್ತು ರಾಮನಗರ ಜಿಲ್ಲೆಯ ರವಿ ಮಂಡ್ಯದ ದಿನೇಶ್ ಮೈಸೂರು ಮನು ಚಾಮರಾಜನಗರ ಸೋಮಣ್ಣ ಉಡುಪಿಯ ವಿನಯ್ ಬೀದರ್ ನ ಯೇಸುದಾಸು ಯಾದಗಿರಿ ಜಿಲ್ಲೆಯ ಗವೀಂದ್ರ ರಾಯಚೂರಿನ ತಿಪ್ಪಣ್ಣ.ಚಿಕ್ಕಬಳ್ಳಾಪುರ ಸುರೇಶ್ ಬಾಬು ಬೆಂಗಳೂರು ನಗರ ಜಿಲ್ಲೆಯ ರಮೇಶ್ ಬಾಬು ಮಂಡ್ಯ ಹಾಗೂ ರಾಮನಗರದ ಪೌರಕಾರ್ಮಿಕ ಮುಖಂಡರು ಬೆಂಗಳೂರು ವಿಭಾಗ ಸಂಚಾಲಕ ಪುಟ್ಟಸ್ವಾಮಿ ಕರಾವಳಿ ವಿಭಾಗ ಸಂಚಾಲಕ ಅಣ್ಣಪ್ಪ ಕಾರೇಕಾಡು ಕಲ್ಯಾಣಾ ಕರ್ನಾಟಕ ವಿಭಾಗ ಸಂಚಾಲಕ ಸಿದ್ರಾಮ ಪಾಟೀಲ ಬೆಳಗಾವಿ ವಿಭಾಗ ಸಂಚಾಲಕ ರಾಜೂ ಎಂ ಹೊಸಮನಿ ಸಂಘದ ಗೌರವಾಧ್ಯಕ್ಷ ದಾವಣಗೆರೆ ವಿರೇಶ್ ಕರುನಾಡ ಸೇವಕರು ಸಂಘದ ಚಂದ್ರಣ್ಣ ಬಾಗಲಕೋಟೆಯ ಜಿಲ್ಲಾಧ್ಯಕ್ಷ ಅನಂದ್ ಸೇರಿದಂತೆ ಹೊರಗುತ್ತಿಗೆ ನೌಕರರ ಸಂಘದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು