ಒಂದು ಕಾಲಕ್ಕೆ ಮಂಡ್ಯದ ಜೀವನಾಡಿ ಎಂದೇ ಕರೆಸಿಕೊಳ್ಳುತ್ತಿದ್ದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಎಂದರೆ ಈಗ ನಷ್ಟ ನಷ್ಟ.. ನಷ್ಟ..ಬಿಳಿಯಾನೆ ಎಂದೆ ಕುಖ್ಯಾತಿ ಪಡೆದಿದೆ.
ಮೈಶುಗರ್ ಕಾರ್ಖಾನೆ ಆರಂಭವಾದ ಕಾಲಕ್ಕೆ ವಿಸಿ ಫಾರಂ ಕೋಡಳ್ಳಿ ಫಾರಂ ಸಾತನೂರು ಫಾರಂ ಮಲ್ಲಿಗೆರೆ ಫಾರಂ ಸೇರಿದಂತೆ ಒಟ್ಟು ಐದು ಕೃಷಿವಲಯದ ಒಟ್ಟು ಮೂರುವರೆ ಸಾವಿರ ಎಕರೆ ಭೂಮಿಯನ್ನು ಮೈಶುಗರ್ ಕಾರ್ಖಾನೆಗೆ ನೀಡಲಾಗಿತ್ತು.
.ಸ್ವತಃ ಕಾರ್ಖಾನೆಯೆ ಕಬ್ಬು ಬೆಳೆದು ಕಬ್ನು ಸರಬರಾಜು ಮಾಡುವುದು ಇದರ ಉದ್ದೇಶವಾಗಿತ್ತು.
೧೯೩೩ ರಲ್ಲಿ ಕಾರ್ಖಾನೆ ಆರಂಭವಾದ ವರ್ಷದಲ್ಲೆ ಭರ್ತಿ ೩ಲಕ್ಷ ಲಾಭ ಕಂಡ ಕಾರ್ಖಾನೆ ನಿರಂತರವಾಗಿ ತನ್ನ ಲಾಭದ ನಾಗಲೋಟ ಮುಂದುವರಿಸಿತು.ನಂತರದಲ್ಲಿ ಬಂದ ಕಾರ್ಖಾನೆಯ ಅಧ್ಯಕ್ಚರುಯ.ವ್ಯವಸ್ಥಾಪಕರ ನಿರ್ಲಕ್ಷ.ಭ್ರಷ್ಟಚಾರದ ಪರಿಣಾಮ ಸಕ್ಕರೆ ಕಾರ್ಖಾನೆಯ ಭೂಮಿ ಪರರ ಪಾಲಾಯಿತು.ಸಕ್ಕರೆ ಕಾರ್ಖಾನೆ ಸಾಲದ ಸುಳಿಗೆ ಸಿಲುಕಿತು.
ಈಗ ಇರುವ ಮೈಶುಗರ್ ಕಾರ್ಖಾನೆಯ ಭೂಮಿಯ ಸಮರ್ಥ ನಿರ್ವಹಣೆಯಿಲ್ಲದೆ ಖಾಸಗಿ ಬಳಕೆಗೆ ಬಲಿಯಾಗುತ್ತಿದೆ.ಅಂಥ ಒಂದು ಉದಾಹರಣೆ ಮಂಡ್ಯ ನಗರದ ಪೇಟೆಬೀದಿಗೆ ಹೊಂದಿಕೊಂಡಿರುವ ಪಶುಚಿಕಿತ್ಸಾಲಯದ ಮುಂದಿರುವ ಭರ್ತಿ ಒಂದು ಎಕರೆ ಭೂಮಿಯು ಒಂದಾಗಿದೆ.
ನಗರದ ಆಯಕಟ್ಟಿನಲ್ಲಿರುವ ಈ ಭೂಮಿಯು ವಾಣಿಜ್ಯ ಮೌಲ್ಯ ಹೊಂದಿದ್ದು.ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮೈಶುಗರ್ ವಿಫಲವಾಗಿದೆ.ಇದರ ಪರಿಣಾಮ ಖಾಸಗಿ ಕಂಪನಿಗಳು.ಕೊರಿಯರ್ ಕಂಪನಿಗಳು ಅನಧಿಕೃತವಾಗಿ ಈ ಭೂಮಿಯನ್ನು ಬಳಸುತ್ತಿವೆ.ಇದರಿಂದ ಮೈಶುಗರ್ ಗೆ ಸೇರಬೇಕಾದ ಲಾಭ ಅನ್ಯರ ಪಾಲಾಗುತ್ತಿದೆ.
ಸದ್ಯ ಮಂಡ್ಯದ ತರಕಾರಿ ಮಾರುಕಟ್ಟೆ ಕಿಷ್ಕಿಂಧವಾಗಿದ್ದು ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಇವತ್ತಿಗೂ ಕಾರ್ಯಾಚರಣೆಯಾಗುತ್ತಿಲ್ಲ.ಜನಬಳಕೆಗೂ ಸಿಕ್ಕಿಲ್ಲ.
ಇಲ್ಲಿರುವ ಕನಿಷ್ಠ ಹೂವಿನ ಮಾರುಕಟ್ಟೆಯನ್ನು ಮೈಶುಗರ್ ಸ್ಥಳಕ್ಕೆ ಸ್ಥಳಾಂತರಿಸಿದರೆ ಮೈಶುಗರ್ ಗೂ ಮಾಸಿಕ ಒಂದು ಲಕ್ಷಕ್ಕು ಹೆಚ್ಚು ಆದಾಯ ದೊರೆಯಲಿದ್ದು.ನಗರಸಭೆಗೂ ಆದಾಯ ತಂದುಕೊಡಲಿದೆ.
ವಿಶಾಲವಾದ ರಸ್ತೆ ಸಂಪರ್ಕ ಇರುವುದರಿಂದ ನಗರದ ಗ್ರಾಹಕರು ಮಾತ್ರವಲ್ಲದೆ ರೈತರಿಗೂ ಪ್ರಯೋಜನಕಾರಿಯಾಗಲಿದೆ.
ಇಲ್ಲಿ ಬರುವ ಆದಾಯದಿಂದಲೆ ಮೈಶುಗರ್ ಕಾಲೇಜು ಈಜುಕೊಳ ನಿರ್ವಹಣೆ ಸಾಧ್ಯವಾಗಲಿದೆ.
ಆದರೆ ಕಾರ್ಖಾನೆಯ ದುರಾದೃಷ್ಟವೋ ಏನೋ.ಕಾರ್ಖಾನೆಯ ಆಡಳಿತ ಚುಕ್ಕಾಣಿ ಹಿಡಿದವರಿಗೆ ಈ ಬಗ್ಗೆ ದಿಗಿಲು ಇಲ್ಲವಾಗಿರೋದು ಮಾತ್ರ ನಿಜಕ್ಮು ಅಶ್ಚರ್ಯಕರವಾಗಿದೆ.

ಮೈಶುಗರ್ ಭೂಮಿಯ ನಿರ್ವಹಣೆ ಖಾಸಗಿಯವರಿಗೆ ನೀಡಿದರೆ ವಿರೋಧ ಸಹಜವಾದುದು.ಆದರೆ ನಗರಸಭೆಯ ಮೂಲಕ ಈ ಭೂಮಿಯ ನಿರ್ವಹಣೆ ಕಾರ್ಖಾನೆ ಹಾಗೂ ನಗರಸಭೆ ಮತ್ತು ಗ್ರಾಹಕರಿಗೆ ಅತ್ಯಂತ ಅನುಕೂಲಕರವಾಗಿದೆ.
ಮಂಡ್ಯದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಶಾಸಕ ರವಿಕುಮಾರ್ ಗೌಡ ಈ ಕುರಿತು ಸರಿಯಾದೊಂದು ನಿರ್ಧಾರ ಕೈಗೊಂಡರೆ ಇದು ಕಷ್ಟಸಾಧ್ಯವೇನಲ್ಲ.


