Monday, December 23, 2024
spot_img

ಸಿದ್ರಾಮಯ್ಯನವರ ಏಕವಚನದ ಮಾತುಗಳಿಗೆ ಬೆಲೆ ತೆರಲಿದೆಯಾ ಕಾಂಗ್ರೇಸ್!

ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ ಎದುರಾಳಿಗೆ ಅರ್ಹ ಗೌರವ ಕೊಡುವುದು ಭಾರತದ ಸಂಪ್ರದಾಯ. ಆದರೆ ಅದೆಲ್ಲವನ್ನು ಗಾಳಿಗೆ ತೂರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಭಾಷಣ ಮಾತುಗಳಲ್ಲಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ತಮ್ಮ ರಾಜಕೀಯ ಎದುರಾಳಿಗಳನ್ನು ಏಕವಚನದಲ್ಲಿ ಪ್ರಸ್ತಾಪಿಸುವುದು ಮಾಮೂಲು ಸಂಗತಿಯಾಗಿದೆ.

ಜನಸಾಮಾನ್ಯರ ಮಾದರಿಯಲ್ಲಿ ರಾಜಕೀಯ ನಾಯಕರನ್ನು ಏಕವವನದಲ್ಲಿ ಸಂಭೋಧಿಸುವುದು ಉತ್ತಮ ನಡೆಯೇನಲ್ಲ.

ಸಿದ್ದರಾಮಯ್ಯನವರು ವಿಷಯದ ಕುರಿತು ಸಾಕಷ್ಟು ತಯಾರಿ ಸಿದ್ದತೆ ಮಾಡಿಕೊಂಡೆ ಮಾತನಾಡುತ್ತಾರಾದರೂ ತಮ್ಮ ಎದುರಾಳಿಗಳನ್ನು ಪ್ರಸ್ತಾಪಿಸುವಾಗ ಅವರನ್ನು ಏಕವಚನದಲ್ಲಿಯೆ ಟೀಕಿಸುತ್ತಾರೆ.

ಅಹಿಂದ ವರ್ಗಗಳನ್ಮು ತಮ್ಮೆಡೆಗೆ ಸೆಳೆಯುವ ಪ್ರಯತ್ನದ ಭಾಗವಾಗಿ ಇನ್ಮುಳಿದ ಸಮುದಾಯಗಳ ನಾಯಕರನ್ನು ಏಕವಚನದಲ್ಲಿ ಸಂಭೋದಿಸುವ ಪ್ರಯತ್ನ ಅಯಾ ಸಮುದಾಯದ ಬಹುಸಂಖ್ಯಾತರ ಮನಸ್ಸಿಗೆ ನೋವುಂಟು ಮಾಡುವುದೇ ಆಗಿರುತ್ತದೆ.

ಮಾಜೀ ಪ್ರಧಾನಿ ದೇವೆಗೌಡರನ್ಮು ಏಕವಚನದಲ್ಲಿ ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸುವಾಗ ಅವರ ವಯೋಮಾನ ಅವರು ಏರಿದ್ದ ಹುದ್ದೆ ಇವಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಏಕವಚನದಲ್ಲಿ ಅವರ ಹೆಸರುಗಳನ್ನು ಎಳೆದು ತರುವುದು ಯಾವುದೆ ವಾಗ್ಮಿಯ ಉತ್ತಮ ನಡೆಯಲ್ಲ. ಈ ರೀತಿಯ ಏಕವಚನದ ಪ್ರಯೋಗದ ಮೂಲಕ ಕಾಂಗ್ರೆಸ್ ಸೋಲಿಗೆ ಪಣ ತೊಟ್ಟಂತಿದೆ.ಇದರ ಪರಿಣಾಮ ಒಕ್ಕಲಿಗ ಬಾಹುಳ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ವಿರುದ್ದ ಜನಾಭಿಪ್ರಾಯ ರೂಪಿಸಲು ವಿಪಕ್ಷಗಳಿಗೆ ಸಾಧ್ಯವಾಗಲಿದೆ.ರಾಜಕೀಯ ಚರ್ಚೆಗಳನ್ನು ವ್ಯಕ್ತಿಗತ ಮಟ್ಟಕ್ಕೆ ಇಳಿಸುವ ಸಿದ್ದರಾಮಯ್ಯನವರ ನಡೆ ಆಕ್ಷೇಪಾರ್ಹವಾದುದು.

ಹಳೇ ಮೈಸೂರು ಭಾಗದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಹಿನ್ನೆಡೆಯಾದರೆ ಇದರಲ್ಲಿ ಸಿದ್ದರಾಮಯ್ಯನವರ ಏಕವಚನದ ಮಾತುಗಳ ಕೊಡುಗೆಯು ಒಂದು ಕಾರಣವಾಗಲಿದೆ.
ಸಿದ್ರಾಮಯ್ಯನವರ ಏಕವಚನದ ಮಾತುಗಳು ಡಿಕೇಶಿ ಚಲುವರಾಯಸ್ವಾಮಿ ಎಲ್ಲರನ್ನು ಹಳ್ಳಕ್ಕೆ ತಳ್ಳಲಿವೆ.ಈಗಾಗಲೇ ವಿಪಕ್ಷಗಳು ಇಂಥದ್ದೆ ಮಾತುಗಳನ್ನು ನಿರೀಕ್ಷಿಸಿದವರಂತೆ ಇವೇ ಮಾತುಗಳನ್ನು ಮುಂದಿಟ್ಟುಕೊಂಡು ಮತದಾರರ ನಡುವೆ ತಮ್ಮ ಪ್ರಚಾರ ಶುರು ಮಾಡಿವೆ.ವಿಪಕ್ಷ ನಾಯಕ ಕುಮಾರಸ್ವಾಮಿ ಸಹ ಇಂಥದ್ದೆ ವಿಚಾರವನ್ನು ಮಂಡ್ಯದ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.ರಾಜಕೀಯ ಚರ್ಚೆಯನ್ನು ಇನ್ನಷ್ಟು ಎತ್ತರಕ್ಕೆ ಒಂದು ಮಾದರಿಗೆ ಕೊಂಡೊಯ್ಯಬೇಕಾದ ಸಂಧರ್ಭದಲ್ಲಿ ಅದನ್ನು ವ್ಯಕ್ತಿಗತ ಟೀಕೆ ಟಿಪ್ಪಣಿ ಏಕವಚನದ ಮಾತುಗಳಿಗೆ ಕಟ್ಟಿಹಾಕುವ ಈ ಯತ್ನ ಕರ್ನಾಟಕದ ಅಸಲಿ ವಿಷಯಗಳನ್ನು ಮರೆ ಮಾಚುತ್ತದೆ. ಕರ್ನಾಟಕದ ರಾಜಕೀಯ ಚರ್ಚೆ ಇಲ್ಲಿನ ಜಿಎಸ್ ಟಿ ಬಾಕೀ.ಬಾಕೀ ಉಳಿದಿರುವ ರೈಲ್ವೇ ಯೋಜನೆಗಳು ಭದ್ರಾ ಮೇಲ್ದಂಡೆಗೆ ಅನುದಾನ.ರಾಜ್ಯಪಾಲ ಹುದ್ದೆಯ ರದ್ದು ಸೇರಿದಂತೆ ಹತ್ತು ಹಲವು ವಿಷಯಗಳ ಸುತ್ತ ಜರುಗಬೇಕಿದೆ.ಎಲ್ಲ ಜನಪ್ರತಿನಿಧಿಗಳು ಈ ಕುರಿತು ಎಚ್ಚರವಹಿಸಬೇಕಿದೆ. ಈ ಕುರಿತ ಒಂದು ದೃಶ್ಯವಳಿ ನಿಮ್ಮ ಮುಂದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!