Saturday, December 21, 2024
spot_img

ಮಂಡ್ಯ:ಅಬಕಾರಿ ಇಲಾಖೆಯ ಮಂತ್ಲೀ ರೋಲ್ ಕಾಲ್ ಎಷ್ಟು ಗೊತ್ತಾ!

ಕೆಲದಿನಗಳ ಹಿಂದೆ ಸಾರ್ವಜನಿಕರೊಬ್ಬರು ನನ್ನ ಬಳಿಗೆ ಬಂದಿದ್ದರು.ಅರವತ್ತು ದಾಟಿದ ಆ ಹಿರಿಯ ಜೀವ ನೇರ ನನ್ನ ಕಾಲುಗಳಿಗೆ ಕೈ ಹಾಕಿ..ಗಳಗಳನೆ ಅಳತೊಡಗಿದರು..ಒಮ್ಮೆಲೆ ನನಗೂ ಅಶ್ಚರ್ಯವಾಗಿ..ವಯಸ್ಸಿನಲ್ಲಿ ಹಿರಿಯರಿದ್ದಿರಿ..ಇದು ಸಲ್ಲದ ನಡವಳಿಕೆ ಎಂದೆ..ಇಲ್ಲ ಮಂಡ್ಯ ಜಿಲ್ಲೆಯ ಪ್ರತೀ ಹಳ್ಳೀಯ ಪ್ರತಿ ಪೆಟ್ಟಿಗೆ ಅಂಗಡಿಯೂ ಒಂದು ಮಿನಿ ಬಾರ್ ಆಗಿದೆ..ನನ್ನ ಮಗ ಅಲ್ಲಿ ಕಳೆದು ಹೋಗಿದ್ದಾನೆ.ಅವನನ್ನು ಉಳಿಸಿಕೊಡಿ ಎಂದು ಅಂಗಲಾಚಿದರು..ನೀವು ಅಬಕಾರಿ ಪೋಲಿಸರಲ್ಲಿ ದೂರು ಕೊಡಿ ಎಂದೆ..ಪ್ರಯೋಜನವಿಲ್ಲ..ಕಾಗದ ಸಮಯ ವ್ಯರ್ಥ ಎಂದರು.ಅದಕ್ಕಾಗಿ ಈ ಲೇಖನ ಬರೆಯಬೇಕಿದೆ.

 

ಮದ್ದೂರು ತಾಲೋಕಿನ ಯಾವ ಯಾವ ಮದ್ಯದಂಗಡಿಯಿಂದ ಎಷ್ಟೆಷ್ಟು ಮಂತ್ಲೀ ಕಲೆಕ್ಷನ್ ಮಾಡಬೇಕೆಂಬ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಭರ್ತಿ ಮದ್ದೂರು ತಾಲೋಕು ಒಂದರಲ್ಲೆ ೫೯ಬಾರು ವೈನ್ ಸ್ಟೋರುಗಳಿವೆ.ಪ್ರತಿಯೊಂದು ಬಾರು ವೈನ್ ಸ್ಟೋರುಗಳಿಂದ ತಲಾ ₹19.500 ಹಾಗೂ ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್ ಮಳಿಗೆಗಳಿಂದ ತಲಾ ₹1500 ವಸೂಲು ಮಾಡುವಂತೆ ಅಲಿಖಿತ ನಿಯಮವೊಂದು ಅಬಕಾರಿ ಇಲಾಖೆಯಲ್ಲಿ ಜಾರಿಯಲ್ಲಿದೆ. ಇದರಲ್ಲಿ ಯಾರ ಪಾಲು ಎಷ್ಟೆಂದು ಮುಂದಿನ ಸಂಚಿಕೆಯಲ್ಲಿ ಬರೆಯೋಣಾ.ಇದೇ ರೀತಿ ಜಿಲ್ಲಾದ್ಯಂತ ಪ್ರತೀ ತಿಂಗಳು ಸಂಗ್ರಹವಾಗುವ ದುಡ್ಡು ಯಾರ ಯಾರ ಜೇಬು ಸೇರುತ್ತದೆ ಎಂಬುದು ನಿಜಕ್ಕು ಕುತೂಹಲಕರ.
ಅಷ್ಟಕ್ಕು ಈ ಹೆಂಡದಂಗಡಿ ಮಾಲೀಕರು ಈ ಮಟ್ಟದ ಎತ್ತುವಳಿ ಯಾಕೆ ಮಾಡ್ತಾರೆ..ಅದು ಈಗ ಪ್ರಮುಖವಾದ ವಿಚಾರವಾಗಿದೆ.ಪ್ರತಿ ಹೆಂಡದ(ಮದ್ಯ) ಮೇಲೆ ಬಾರು ವೈನ್ ಸ್ಟೋರು ಮಾಲೀಕರಿಗೆ ಒಟ್ಟು ದರದ ಮೇಲೆ ಶೇ ೮ರ ಲಾಭಾಂಶವಿದೆ.ಇದಿಷ್ಟೆ ಆಗಿದ್ದರೆಯಾರಿಗೂ ಮಂತ್ಲೀ ಕೊಡುವ ಅವಶ್ಯವಿರಲಿಲ್ಲ.ಅಬಕಾರಿ ನಿಯಮದ ಪ್ರಕಾರ ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರವರೆಗೆ ಮಾತ್ರ ಇವರ ವಹಿವಾಟು. ಆದರೆ ನಿಮಯ ಮೀರಿ ಬಾರುಗಳು ಶುರುವಾಗುತ್ತವೆ.ವೈನ್ ಸ್ಟೋರುಗಳಲ್ಲಿ ಮಾರಾಟಕ್ಕೆ ಮಾತ್ರ ಅವಕಾಶ ಆದರೆ ನಿಯಮ ಮೀರಿ ಕುಡಿಯಲು ಅವಕಾಶ ಉಂಟು..ಇನ್ನು ಕೆಲವು ರೆಸ್ಟೋರೆಂಟುಗಳಲ್ಲಿ ಅಕ್ರಮವಾಗಿ ನಿಯಮ ಮೀರಿ ಹೆಂಡ ಸಪ್ಲೈ ..ಇದಲ್ಲದೆ ಎಂ ಆರ್ ಪಿ ಮೇಲೆ ಶೇ೧೫ ರಷ್ಟು ವಸೂಲಿ.ಇದೊಂದೆ ಬಾಬ್ತಿನಲ್ಲಿ ವಾರ್ಷಿಕ ₹೧೫೦ ಕೋಟಿ ಲಂಚ ಎಲ್ಲರಿಗೂ ಹಂಚಿಕೆಯಾಗುತ್ತದೆ. ಬೇರೆಯದೆ ಲೆಕ್ಕಚಾರ..ಇಲ್ಲಿ ಅಬಕಾರಿ ನಿಯಮದ ಕಾನೂನು ಪಾಠ ಹೇಳುವ ಅವಶ್ಯವಿಲ್ಲ.ಈ ಎಲ್ಲ ಧಂದೆಗಳ ಪಾಲುದಾರರ ಸಮಗ್ರ ವಿವರಗಳನ್ನು ಮತ್ತೊಮ್ಮೆ ಬರೆಯೋಣಾ..ಪ್ರತಿ ನರ್ಸಿಂಗ್ ಹೋಂ ಹೋಟೆಲ್ ಗಳ ಮುಂದೆ ದರಪಟ್ಟಿ ಇರುವಾಗ ವೈನ್ ಸ್ಟೋರುಗಳ ಮುಂದೆ ಯಾಕಿಲ್ಲ. ಖರೀದಿಸಿದ ಹೆಂಡಕ್ಕೆ .ಬಿಲ್ ಯಾಕೆ ಕೊಡುವುದಿಲ್ಲ.ಇದು ಗ್ರಾಹಕ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆ..ಇದೊಂದು ರಾಜ್ಯದ ಪ್ರಮುಖ ಧಂಧೆಯಾಗಿದ್ದು..ಈಗಲಾದರೂ ಜಿಲ್ಲೆಯ ಗ್ರಾಮಗಳಲ್ಲಿ ಪೆಟ್ಟಿಗೆ ಅಂಗಡಿಗಳಲ್ಲಿ ಮಾರಾಟವಾಗುವ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಬೀಳಲಿ.ವೈನ್ ಸ್ಟೋರುಗಳಲ್ಲಿ ಹೆಂಡ ಮಾರಾಟದ ಹೊರತು ಸೇವಿಸುವ ಚಟುವಟಿಕೆಗೆ ತಡೆ ಬೀಳಲಿ.ರೆಸ್ಟೋರೆಂಟ್ ಗಳಲ್ಲಿ ಅಕ್ರಮ ಮದ್ದ ಸರಬರಾಜಿಗೆ ಬ್ರೇಕ್ ಬೀಳಲಿ..ಇಲ್ಲವೆ ನಾಗರೀಕರೆ ಇದರ ವಿರುದ್ದ ತಿರುಗಿಬೀಳಲಿ..ಹಳೇ ಮೈಸೂರು ಪತ್ರಿಕೆ ನಿಮ್ಮೊಂದಿಗೆ ಇರಲಿದೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!