Wednesday, March 11, 2026
spot_img

ಅಂದರ್ ಬಾಹರ್ ಅಡ್ಡೆ ಮೇಲೆ ಪೋಲಿಸ್ ಧಾಳಿ

ಅಕ್ರಮ ಜೂಜೂ . ಕ್ಲಬ್ ಮೇಲೆ ದಾಳಿ. ಪಣಕ್ಕಿಟ್ಟ ಹಣ ವಶ

ಅಕ್ರಮವಾಗಿ ಜೂಜು ನಸೆಸುತ್ತಿದ್ದ ಕ್ಲಬ್ ವೊಂದರ ಮೇಲೆ ಧಾಳಿ ಮಾಡಿ ಪಣಕಿಟ್ಟ ಹಣವನ್ನು ಮದ್ದೂರು ಪೋಲಿಸರು ವಶ ಮಾಡಿಕೊಂಡು ನೋಟಿಸ್ ಜಾರಿಗೊಳಿಸಿದ್ದಾರೆ.

ದಿನಾಂಕ:10/03/2016 ರಂದು ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣಾ ಸರಹದ್ದಿನ ಮದ್ದೂರು ತಾಲ್ಲೂಕು, ಆತಗೂರು ಹೋಬಳಿ, ನಿಡಘಟ್ಟ ಗ್ರಾಮದ ತಿಪ್ಪೂರು ರಸ್ತೆಯಲ್ಲಿರುವ ಶ್ರೀ ವರದರಾಜಸ್ವಾಮಿ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಕಟ್ಟಡದಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಗುಂಪುಗೂಡಿಕೊಂಡು ಅಂದರ್-ಬಾಹರ್ ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಡಾ.ಶೋಭಾರಾಣಿ ವಿಜೆ. ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷರು ಮಂಡ್ಯ ಜಿಲ್ಲೆ ರವರ ಆದೇಶದ ಮೇರೆಗೆ, ಘನ ನ್ಯಾಯಾಲಯದ ಅನುಮತಿ ಪಡೆದು ಮದ್ದೂರು ಪೊಲೀಸ್ ಠಾಣಾ ಮೊ.ಸಂ.101/2026 ಕಲಂ: 79, 80 ಕೆ.ಪಿ ಆಕ್ಟ್ ರೀತ್ಯ ಪ್ರಕರಣದ ದಾಖಲಿಸಿಕೊಂಡು ಮಳವಳ್ಳಿ ಡಿವೈ.ಎಸ್.ಪಿ. ಶ್ರೀ ಯತವಂತಕುಮಾರ್ ಎಸ್.ಬಿ ರವರ ಮಾರ್ಗದರ್ಶನದಲ್ಲಿ ಮದ್ದೂರು ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ನವೀನ ಹೆಚ್.ಎಸ್. ಮಂಡ್ಯ ಆರ್.ಪಿ.ಐ ಚನ್ನನಾಯಕ್, ಪಿ.ಎಸ್.ಐ ಮಂಜುನಾಥ ಹಾಗೂ ಒಬ್ಬಂದಿಯವರು ಸದರಿ ಕ್ಲಬ್ ಮೇಲೆ ದಾಳಿಮಾಡಿ ಕ್ರಮ ಜರುಗಿಸಿದ್ದಾರೆ

. ದಾಳಿ ಸಮಯದಲ್ಲಿ ಒಟ್ಟು 97,910 ರೂಗಳನ್ನು, ಅಟಕ್ಕೆ ಬಳಸಲಾದ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದುಕೊಂಡು, ಪ್ರಕರಣದ ಸಂಬಂದ ಒಟ್ಟು 50 ಜನ ಆರೋಪಿತರಿಗೆ ನೋಟಿಸ್ ಜಾರಿಮಾಡಿದ್ದಾರೆ.

ಈ ದಾಳಿ ಕಾಲದಲ್ಲಿ ಭಾಗವಹಿಸಿದ್ದ ಪಿ.ಎಸ್.ಐ ಮಂಜುನಾಥ ಹಾಗೂ ಎಆರ್‌.ಎಸ್‌.ಐ ಪುರುಷೋತ್ತಮ, ಸಿಹೆಚ್ ಸಿಯವರಾದ ಸಿದ್ದೇಗೌಡ, ಮಹೇಶ್, ಶರತ್, ಎಹೆಚ್ ಸಿಯವರಾದ ರಾಜಗೋಪಾಲ್, ಚಂದನ್ ಕುಮಾರ್, ಸಿದ್ದಶೆಟ್ಟಿ, ಸಿಪಿಸಿಯವರಾದ ಪ್ರಸನ್ನ, ಎಪಿಸಿಯವರಾದ ಚಂದ್ರಶೇಖರ್, ನಾಗರಾಜಗೌಡರ್, ವಿಜಯ್ ಕುಮಾರ, ಸುನೀಲ್, ಮನೋಜ್, ಆನಂದ ರವರ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ವಿ.ಜೆ. ಶೋಭಾರಾಣಿ ಶ್ಲಾಘಿಸಿದ್ದಾರೆ.

ಆಕ್ಷೇಪ:ಪೋಲಿಸ್ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ಲಬ್ ಗಳಲ್ಲಿ ರಾಜರೋಷವಾಗಿ ಅಂದರ್  ಬಾಹರ್ ನಡೆಸಲಾಗುತ್ತಿದೆ.ಇವುಗಳ ಮೇಲೆ ಯಾವುದೆ ಕ್ರಮ ಜರುಗುತ್ತಿಲ್ಲ.ಬದಲಿಗೆ ಇಲಾಖೆಯ ಒಪ್ಪಂದಗಳಿಗೆ ಒಪ್ಪದವರ ಮೇಲೆ ಧಾಳಿ ಆಯೋಜಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಕ್ಲಬ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles

error: Content is protected !!